IMG-20240718-WA0075

ಕಿನ್ನಾಳ:  ಉಚಿತ ನೋಟ್‌ ಬುಕ್ಕ್‌ ವಿತರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ.28. ಇಂದು, ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಸ. ಹಿ. ಪ್ರಾ. ಶಾಲೆ ಕೌಲಪೇಟ ಕಿನ್ನಾಳ ಶಾಲೆಗೆ ಯಂಕಪ್ಪ ಸಿಂದ್ಲಿಯವರು ಮಕ್ಕಳಿಗೆ, ಶೈಕ್ಷಣಿಕ ಸೌಲಭ್ಯಕ್ಕಾಗಿ, ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಿದರು.

ಇವರು ಮೂಲತಃ ಕಿನ್ನಾಳ ಗ್ರಾಮದವರು, ಉದ್ಯೋಗಕ್ಕಾಗಿ ಹೋಗಿ ಈಗ ಬೆಂಗಳೂರಿನಲ್ಲಿರುತ್ತಾರೆ. ಇವರು ನಮ್ಮ ಕಿನ್ನಾಳದ ಎಲ್ಲಾ ಸರಕಾರಿ ಶಾಲೆಯ ಮಕ್ಕಳಿಗೆ ಸುಮಾರು 10 ವರ್ಷಗಳಿಂದ ನೋಟ್ ಪುಸ್ತಕಗಳನ್ನು (ಪ್ರತಿ ಮಕ್ಕಳಿಗೆ 3)ನೀಡುತ್ತಾ ಬಂದಿದ್ದಾರೆ. ಅವರಿಗೆ ನಮ್ಮ ಶಾಲೆಯ ಮಕ್ಕಳಪರವಾಗಿ, ಎಸ್ ಡಿ ಎಮ್ ಸಿ  ಪರವಾಗಿ ಧನ್ಯವಾದಗಳು. ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರು,ಸದಸ್ಯರು, ಗ್ರಾ. ಪಂ. ಸದಸ್ಯರು , ಮುಖ್ಯೋಪಾಧ್ಯಾಯರು,ಎಲ್ಲಾ ಶಿಕ್ಷಕ, ಶಿಕ್ಷಕಿಯರು ಹಾಜರಿದ್ದರು. ಇದೆ ಸಂದರ್ಭದಲ್ಲಿ ಅವರನ್ನು ಎಸ್ಡಿಎಂಸಿ ಅಧ್ಯಕ್ಷರು. ಉಪಾಧ್ಯಕ್ಷರು. ಸರ್ವ ಸದಸ್ಯರು. ಶಾಲಾ ಮುಖ್ಯೋಪಾಧ್ಯಾಯರು, ಹಾಗೂ, ಸರ್ವ ಶಿಕ್ಷಕರು, ಸೇರಿ ಸತ್ಕರಿಸಿದರು.

Leave a Reply

Your email address will not be published. Required fields are marked *

error: Content is protected !!