ಸಿರುಗುಪ್ಪ : ತಾಲೂಕ ವಕೀಲರ ಸಂಘಕ್ಕೆ 28ರಂದು ಚುನಾವಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 21- ತಾಲೂಕು ವಕೀಲರ ಸಂಘ 2024-26 ದ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಭೀಮರೆಡ್ಡಿ ಅವರಿಗೆ ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಭೀಮರೆಡ್ಡಿ ಅವರು ಮಾತನಾಡಿ ವಕೀಲರ ಸಂಘದ 11 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಸ್ಪರ್ಧೆ ಕೋರಿ 18 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಶನಿವಾರ ಪರಿಶೀಲನೆ ನಡೆಸಿದೆ ಎಲ್ಲಾ ನಾಮಪತ್ರಗಳು ಸ್ವೀಕೃತವಾಗಿವೆ ಎಂದರು.
ಅಧ್ಯಕ್ಷ ಸ್ಥಾನಕ್ಕೆ ಟಿ ಎಂ ರಘು ನಂದನ ಯು ವೆಂಕೋಬಾ ಉಪಾಧ್ಯಕ್ಷ ಸ್ಥಾನಕ್ಕೆ ಎಮ್ ಶರೀಫ್ ಸಾಬ್ ವೆಂಕಟೇಶ್ ಟಿ ಈರನಾಯಕ್ ಕಾರ್ಯದರ್ಶಿ ಸ್ಥಾನಕ್ಕೆ ಎಮ್ ಶಿವಕುಮಾರ್ ಜಿ ಮಾರೆಣ್ಣ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಕೆ ಸಣ್ಣ ಹುಸೇನಿ ಬಿ ಆಸಿಫ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಹಳೆಕೋಟೆ ರಾಮಪ್ಪ ಹೊಸಮನೆ ಶೇಖಣ್ಣ ಕೆ ಫಕೀರಯ್ಯ ಅಬ್ದುಲ್ ಖಾದರ್ ಜಿಲಾನಿ ಬಾಬು ಸಾಹೇಬ್ ಚಂದಿ ಮಹಾಬೂಬ್ ಬಾಷಾ ಎಸ್ ಎಮ್ ಜಗದೀಶ ಸೋಮಪ್ಪ ಛಲವಾದಿ ಸುಧಾಕರ ನಾಮಪತ್ರ ಸಲ್ಲಿಸಿದ್ದಾರೆ ನಾಮಪತ್ರ ಹಿಂಪಡೆಯಲು ಜುಲೈ 22 ಕೊನೆಯ ದಿನವಾಗಿದೆ ಒಟ್ಟು 174 ಮತದಾರರು ಇದ್ದಾರೆ ಜುಲೈ 28ರಂದು ಬೆಳಿಗ್ಗೆ 8ರಿಂದ 3 ಗಂಟೆವರೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ 4 ಗಂಟೆಗೆ ಮತ ಎಣಿಕೆ ಮಾಡಲಾಗುವುದು ಎಂದು ವಿವರಿಸಿ ತಿಳಿಸಿದ್ದಾರೆ .
