2.65 ಲಕ್ಷ ರೂ ಮೌಲ್ಯದ ಗಾಂಜಾ ಅಕ್ರಮ ಸಾಗಾಟ ಐವರ ಬಂಧನ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 24- ಆಂಧ್ರಪ್ರದೇಶದಿಂದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿ 2. 65 ಲಕ್ಷ ರೂಪಾಯಿಗಳ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ ಸಿರುಗುಪ್ಪ ನಗರದ ಆದೋನಿ ರಸ್ತೆಯಲ್ಲಿರುವ ಕೃ
ಷಿ ಸಂಶೋಧನಾ ಕೇಂದ್ರ ಎಆರ್ ಎಸ್ ಫಾರಂ ಹತ್ತಿರ ಆದೋನಿ ಕಡೆಯಿಂದ ಎರಡು ದ್ವಿಚಕ್ರ ವಾಹನಗಳಲ್ಲಿ ಗಾಂಜಾ ಇರಿಸಿಕೊಂಡು ಬಳ್ಳಾರಿಯ ಸರ್ಮಸ್ ವಲಿ ಶೈಲೇಂದ್ರ ಶೇಖ್ ಅಬೀದ್ ಬಲರಾಮ ಕಾರ್ತಿಕ್ ಎಂಬುವವರು ಬರುತ್ತಿದ್ದರು.
ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸದರಿ ಮಾಹಿತಿಯನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಶೋಭ ರಾಣಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ನವೀನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಮಂಗಳವಾರ ಸಿರುಗುಪ್ಪ ಡಿ ವೈ ಎಸ್ ಪಿ ವೆಂಕಟೇಶ್ ಉಗಿಬಂಡಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ವೈ ಎಸ್ ಹನುಮಂತಪ್ಪ ಹಚ್ಚೋಳ್ಳಿ ಪಿಎಸ್ಐ ಪರಶುರಾಮ ಸಿರುಗುಪ್ಪ ತನಿಖಾ ವಿಭಾಗ ಪಿಎಸ್ಐ ಹೊನ್ನಪ್ಪ ಎ ಎಸ್ ಐ ಈಶ್ವರಪ್ಪ ಸಿಬ್ಬಂದಿಗಳಾದ ಶಂಕ್ರಪ್ಪ ಚಿನ್ನಪ್ಪ ಬಸವರಾಜ ವಿಷ್ಣು ಮೋಹನ್ ಬಾಲಚಂದ್ರ ರಾಥೋಡ್ ಈರಣ್ಣ ಇವರು ಸಿರುಗುಪ್ಪ ಆದೋನಿ ರಸ್ತೆ ಬಳಿ ಇರುವ ಫಾರಂ ಹತ್ತಿರ ಗಾಂಜಾವನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭ ರಾಣಿ ಅವರು ಅಕ್ರಮ ಗಾಂಜಾ ಸಾಗಾಣಿಕೆ ದಾರರ ಮೇಲೆ ದಾಳಿ ಮಾಡಿ ಗಾಂಜಾವನ್ನು ವಶಪಡಿಸಿ ಕೊಂಡ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳ ಕಾರ್ಯ ವೈಕರಿಗೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ .
