2c136fae-be38-4577-97e1-318669006cc9

ಅಪರಿಚಿತ ವ್ಯಕ್ತಿ ಸಾವು : ಪ್ರಕರಣ ದಾಖಲು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 5- ಗಂಗಾವತಿ ನಗರದ ವೆಂಕಟೇಶ್ವರ ಕಾಲೇಜು ಮುಂಭಾಗದಲ್ಲಿ ರಸ್ತೆ ಅಪಘಾತವಾಗಿ ಸುಮಾರು 35 ವರ್ಷದ ಅನಾಮಧೇಯ ವ್ಯಕ್ತಿಯು ಮೃತಪಟ್ಟ ಬಗ್ಗೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:30/2024 ಕಲಂ 281, 106 ಬಿ.ಎನ್.ಎಸ್ & 187 ಐ.ಎಮ್.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯು 5.2 ಅಡಿ ಎತ್ತರವಿದ್ದು, ಮೈಮೇಲೆ ಚಾಕಲೇಟ್ ಬಣ್ಣದ ಮತ್ತು ಬಿಳಿ ಬಣ್ಣದ ತುಂಬುತೋಳಿನ ಅಂಗಿ, ನೀಲಿ ಬಣ್ಣದ ಪ್ಯಾಂಟನ್ನು ಧರಿಸಿದ್ದಾನೆ.

ನಡುವಿನ/ಸೊಂಟದ ಹತ್ತಿರ ಕಪ್ಪು ಕಲೆ ಇರುತ್ತದೆ. ಈ ಮೃತ ವ್ಯಕ್ತಿಯ ಚಹರೆ ಪಟ್ಟಿಗೆ ಹೋಲಿಕೆಯಾಗುವಂತಹ ಪುರುಷನು ಕಾಣೆಯಾಗಿದ್ದಲ್ಲಿ ಕೂಡಲೇ ಪಿ.ಎಸ್.ಐ-1 ಗಂಗಾವತಿ ಸಂಚಾರ ಪೊಲೀಸ್ ಠಾಣೆ ದೂ.ಸಂ: 08533-231533, ಮೊ.ಸಂ: 9480803756, ಪಿ.ಐ ನಗರ ಪೊಲೀಸ್ ಠಾಣೆ ಮೊ.ಸಂ: 9480803752 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!