WhatsApp Image 2024-08-06 at 5.24.36 PM

ನಿಮ್ಮ ವೃತ್ತಿಗೆ ಬಧ್ದವಾಗಿರಿ : ಆಸೀಪ್ ಅಲಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,6- ಕಾನೂನು ಮತ್ತು ನ್ಯಾಯದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಹಾಗೂ ಜನರಿಗೆ ಕಾನೂನು ತಿಳುವಳಿಕೆ ಅತ್ಯಂತ ಮುಖ್ಯವಾಗಿದೆ ಎಂದು ಹಿರಿಯ ನ್ಯಾಯವಾದಿ ಆಸೀಪ್ ಅಲಿ ಹೇಳಿದರು.

ಪಟ್ಡಣದ ಗದಗ ರಸ್ತೆಯಲ್ಲಿರುವ ಗುಳಗಣ್ಣನವರ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭವಾದ ಶಿವಪ್ರೀಯ ಕಾನೂನು ವಿದ್ಯಾಲಯ ಪ್ರಾರಂಭೋತ್ಸವ ಹಾಗೂ ಸರಸ್ವತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನ್ಯಾಯವಾದಿಗಳನ್ನು ಅರಸಿಕೊಂಡು ಬರುವವರು ನೊಂದವರು ಹಾಗೂ ಅನ್ಯಾಯಕ್ಕೋಳಗಾದವರು ಅಂತವರ ಕಣ್ಣಿರು ಒರೆಸುವ ಕೆಲದ ಯುವ ವಕೀಲರಿಂದಾಗಲಿ, ಆದ್ದರಿಂದ ಹೊಸದಾಗಿ ಪ್ರಾರಂಭವಾಗಿರುವ ಈ ಕಾಲೇಜು ಅನೇಕ ವಕೀಲರನ್ನು ಹುಟ್ಟು ಹಾಕುವ ಕೇಂದ್ರವಾಗಿ ಈ ಭಾಗದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದರು.

ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎ ವ್ಹಿ ಕಣವಿ ಮಾತನಾಡಿ ನಮ್ಮ ಭಾಗದಲ್ಲಿ ಪ್ರಾರಂಭವಾಗಿರುವ ಈ ಕಾನೂನು ವಿದ್ಯಾಲಯ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿ ಯಾಕೆಂದರೆ ನಮ್ಮಲ್ಲಿ ಬಡತನವಿದ್ದರು ಓದುವ ಛಲವಿರುವ ವಿದ್ಯಾರ್ಥಿಗಳು ಇರುವದನ್ನ ಗಮನಿಸಿದ್ದೇವೆ ಅಂತವರಿಗೆ ನಿಮ್ಮ ಸಂಸ್ಥೆಯಿಂದ ಶಿಕ್ಷಣ ನೀಡುವ ಕೆಲಸವಾಗಲಿ ಮುಂದಿನ ದಿನಗಳಲ್ಲಿ ಈ ವಿದ್ಯಾಲಯ ದೊಡ್ಡ ಹಂತದಲ್ಲಿ ಬೆಳೆಯಲಿ ಎಂದರು.

ಅದ್ಯಕ್ಷತೆಯನ್ನ ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಘವೇಂದ್ರ ಘಾನಗಂಟಿ ವಹಿಸಿದ್ದರು. ಉದ್ಘಾಟನೆಯನ್ನ ಹುಣಸಿಹಾಳನ ಪ.ಪೂ.ಡಾ.ರುದ್ರಯ್ಯ ಹಿರೇಮಠ ನೆರವೇರಿಸಿದರು ಪ್ರಾಂಶುಪಾಲರಾದ ಡಾ.ಬಸವರಾಜ ಹನಸಿ. ಮುಖ್ಯ ಅತಿಥಿಗಳಾಗಿ ಉದ್ಯಮಿ ಎಮ್ ಎ ವಲೀಸಾಬ್. ಪೀರಾಹುಸೇನ್. ಎಸ್ ಜಿ ಪಾಟೀಲ. ಅಶ್ವಿನ್ ಜಂಗದ.ರಜೀಯಾಬೇಗಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!