09Ylb01

ಯಡ್ಡೋಣಿ : ಹೈಸ್ಕೂಲ್ ಮಂಜೂರು ಶಾಸಕರಿಗೆ ಸನ್ಮಾನ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 10- ತಾಲೂಕಿನ ಗಡಿ ಭಾಗದ ಯಡ್ಡೋಣಿ ಗ್ರಾಮದಲ್ಲಿ ಹೊಸದಾಗಿ ಸರಕಾರಿ ಪ್ರೌಢ ಶಾಲೆಯಲ್ಲಿ ಮಂಜೂರುಗೊಳಿಸಿ ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಗ್ರಾಮಸ್ಥರು ಬುಧವಾರ ಸನ್ಮಾನಿಸಿ ಗೌರವಿಸಿದರು.

ಯುವ ಕಾಂಗ್ರೆಸ್ ಮುಖಂಡ ಆದೇಶ ಬಿ.ರೊಟ್ಟಿ ಮಾತನಾಡಿ, ಗ್ರಾಮದಲ್ಲಿ 1-8ನೇ ತರಗತಿವರಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮದ ಜನರ ಬಹುದಿನದ ಬೇಡಿಕೆಯಾದ ಹೈಸ್ಕೂಲ್ ಮಾಡುವಂತೆ ಕ್ಷೇತ್ರದ ಶಾಸಕರಿಗೆ ಮನವಿ ಮಾಡಲಾಗಿತ್ತು. ಆದರೆ ಶಾಸಕರು ಮುತುವರ್ಜಿ ವಹಿಸಿ ಈ ಭಾಗದ ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಆಸಕ್ತಿ ತೋರಿ ಶಿಕ್ಷಣ ಪಡೆಯಲು ನೆರವು ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಈ ವೇಳೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಗ್ರಾಮ ಪಂಚಾಯಿತಿ ಸದಸ್ಯೆ ಶಂಕ್ರಮ್ಮ ಬಿಜಕಲ್, ಮುಖಂಡರಾದ ಬಸವರಾಜ ಹಿರೇಮನಿ, ವೀರಭದ್ರಪ್ಪ ಶೆಟ್ಟರ್, ಹುಗ್ಗೇಶ ಹುಗ್ಗಿ, ಶರಣಪ್ಪ ಹೊಸಗೌಡ್ರ, ಯಮನಗೌಡ ಗೌಡ್ರ, ಹನುಮಗೌಡ ಗೌಡ್ರ, ಬಸಯ್ಯ ಹಿರೇಮಠ, ಅಂಬಣ್ಣ ಸುಲಾಖೆ, ಮಂಜುನಾಥ ವಂದಾಲಿ, ಮಹಾಲಿಂಗಸಾಬ್ ನದಾಫ್, ಫಕೀರಪ್ಪ ಚೌಡಿ, ಮಹಾಂತೇಶ ಗೌಡ್ರ, ಹುಲುಗಪ್ಪ ಭಜಂತ್ರಿ, ಶಿವು ಗೌಡ್ರ, ಮರಿಗೌಡ ಗೌಡ್ರ, ಸೇರಿ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!