ಬಾಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಾತುರ್ಮಾಸ ವ್ರತ ಪೂಜೆಗಳು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 10- ನಗರದ ಹೊಸ ಬಸ್ ನಿಲ್ದಾಣದ ಎದುರುಗಡೆ ಇರುವ ಶ್ರೀ ಅವಧೂತ ಬಾಲಾಂಜನೇಯ ಸ್ವಾಮಿ ಮಠದಲ್ಲಿ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚಿತಾನಂದ ಸರಸ್ವತಿ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಚಾತುರ್ಮಾಸ್ಯ ವ್ರತ ಪೂಜೆಯನ್ನು ಇದೇ 18ರವರೆಗೆ ನಡೆಸಲಾಗುತ್ತಿದೆ ಭಕ್ತರೂ ಬಂದು ಸ್ವಾಮಿಯ ಆಶೀರ್ವಾದ ಪಡೆದುಕೊಂಡು ಪುನೀತರಾಗಬೇಕೆಂದು ದೇವಸ್ಥಾನಂ ಗುರೂಜಿ ಬಾಲಾನಂದ ಸ್ವಾಮಿಗಳು ತಿಳಿಸಿದ್ದಾರೆ.
ಶ್ರಾವಣ ಮಾಸದ ಎರಡನೇ ಶನಿವಾರದಂದು ಚಾತುರ್ಮಾಸ ಮಹೋತ್ಸವ ಸೇವಾ ಸಮಿತಿಯ ನೇತ್ರತ್ವದಲ್ಲಿ ದಿವ್ಯ ಕ್ಷೇತ್ರ ಹರಿಹರಪುರ ಪರಮ ಪೂಜಾರಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚಿತಾನಂದ ಸರಸ್ವತಿ ಮಹಾಸ್ವಾಮೀಜಿಯವರು ಧಾರ್ಮಿಕ ಪೂಜೆಗಳನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು ಎಂದು ದೇವಸ್ಥಾನದ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ಈ ಪೂಜೆಗಳಲ್ಲಿ ಬಾಲಾನಂದ ಸ್ವಾಮೀಜಿ ಚಾತುರ್ಮಾಸ ಸೇವಾ ಸಮಿತಿಯ ಪದಾಧಿಕಾರಿಗಳಾದ ರಾಜೇಶ್ವರಮ್ಮ, ಅನಿಲ್ ಅಮ್ಮ, ವೆಂಕಟರಮಣ, ಹನುಮಂತರಾವ್ ಆದಿಶೇಷು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
