ರಂಗ ನಿರ್ದೇಶಕರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಣ ದುರುಪಯೋಗ : ಕಲಾವಿದರ ಸಂಘ ಆರೋಪ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 14- ರಂಗಭೂಮಿ ಕಲಾವಿದರು ಮತ್ತು ನಾಟಕ ರಚನೆಕಾರರು ಹಾಗೂ ರಂಗನಿರ್ದೇಶಕ ಕೆ ಜಗದೀಶ್ ಇವರು ಪ್ರಸ್ತುತ ಎಸ್.ಬಿ.ಐ.ನ ನಿವೃತ್ತ ನೌಕರರಾಗಿದ್ದು ನಿವೃತ್ತಿ ಪಿಂಚಣಿಯನ್ನು ಪಡೆಯುತ್ತಿದ್ದಾರೆ, ಆದರೂ ಅವರು ನಾನು ರಂಗ ನಿರ್ದೇಶಕ ರಂಗ ಕಲಾವಿದ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ತನ್ನ ಅಧ್ಯಕ್ಷತೆಯ ಸಂಸ್ಥೆ ‘ಅಭಿನಯ ಕಲಾ ಕೇಂದ್ರ’ಕ್ಕೆಪ್ರತಿ ವರ್ಷವೂ ಧನಸಹಾಯವನ್ನು ಪಡೆದು ಕೊಳ್ಳುತ್ತಿದ್ದಾನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನವನ್ನು ಪಡೆಯಲು ಯಾವುದೇ ಸರ್ಕಾರಿ, ಅರೆಸರ್ಕಾರಿ ನೌಕರರಿಗೆ, ಕಲಾತಂಡಗಳ ಪ್ರಾಯೋಜಕತ್ವವನ್ನು ನೀಡಲು ನಿರ್ಬಂಧವಿದೆ. ಹೀಗಿದ್ಯಾಗ್ಯೂ ತನ್ನ ಸಂಸ್ಥೆಗೆ ಇಲಾಖೆಯಿಂದ ಪ್ರತಿವರ್ಷ ಪ್ರಾಯೋಜಕತ್ವವನ್ನು ಸತತವಾಗಿ ನಡೆಯುತ್ತಿದ್ದಾನೆ, ಇದು ಅಕ್ರಮವಾಗಿದೆ ಸಂಸ್ಕೃತಿ ಇಲಾಖೆ ಅಭಿನಯ ಕಲಾ ಕೇಂದ್ರಕ್ಕೆ ಅನುದಾನವನ್ನು ನೀಡುವುದು ನಿಲ್ಲಿಸಬೇಕೆಂದು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷರಾದ ಎಲ್ಲನಗೌಡ ಶಂಕರ ಬಂಡೆ ಮತ್ತು ಕಾರ್ಯದರ್ಶಿ ಮುದ್ದಟನೂರು ಎಚ್ ತಿಪ್ಪೇಸ್ವಾಮಿ ಇವರುಗಳು ಇಲಾಖೆಯ ಸಹಾಯಕ ನಿರ್ದೇಶಕರನ್ನು ಒತ್ತಾಯಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದಿಂದ ಇಂದು ನಗರದ ಮರ್ಚಾಡ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಜಗದೀಶ್ ಕೇವಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಷ್ಟೇ ಸೀಮಿತವಾಗದೆ ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಸಹ ತನ್ನ ಸಂಸ್ಥೆಗೆ ಮತ್ತು ಮಗನ ಹೆಸರಿನಲ್ಲಿ ಧನಸಹಾಯ ಪಡೆಯುವ ಮೂಲಕ ಜಿಲ್ಲೆಯ ನಿಜವಾದ ಕಲಾವಿದರುಗಳಿಗೆ ಅವಕಾಶ ವಂಚಿತರನ್ನಾಗಿ ಮಾಡುತ್ತಿದ್ದಾನೆ.
ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ತನಗೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತಾನೆ. ಒಂದು ವೇಳೆ ಅಧಿಕಾರಿಗಳು ಅವನ ಒತ್ತಡಕ್ಕೆ ಮಣಿಯದೆ ಹೋದಾಗ, ಅಧಿಕಾರಿಗಳ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದರೊಂದಿಗೆ ಅಧಿಕಾರಿಗಳನ್ನು ಬೇರೆಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡುವಂತೆ ಮೇಲಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಾನೆ.
ಈ ವ್ಯಕ್ತಿಯು ಇಲಾಖೆ ಸಿಬ್ಬಂದಿ ಮೇಲೆ ಒತ್ತಡ ಹೇರಿ ತನಗೆ ಬೇಕಾದ ಮುಗ್ಧ ಕಲಾವಿದರುಗಳಿಗೆ ಕಾರ್ಯಕ್ರಮ ನೀಡಿಸಿದ್ದೇನೆಂದು ಹೇಳಿ ಅಂತ ಕಲಾವಿದರುಗಳಿಂದ ಹಣವನ್ನು ಮರಳಿ ಪಡೆಯುವ ಕಾರ್ಯವನ್ನು ಸತತವಾಗಿ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ನಿದರ್ಶನ ಎಂಬಂತೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಕಲಾವಿದೆ ಬಿ.ವೀಣಾಕುಮಾರಿಯವರ ಹೆಸರಿಗೆ ತಾನೇ ರಚಿಸಿ ನಿರ್ದೇಶಿಸಿದ ಮತ್ತು ತನ್ನದೇ ತಂಡದ ‘ಬೆಪ್ಪು ತಕ್ಕಡಿ ಬೋಳೆಶಂಕರ’ ನಾಟಕವನ್ನು ಪ್ರದರ್ಶಿಸಿ ವೀಣಾಕುಮಾರಿ ಆವರ ಖಾತೆಗೆ ಬಂದ ಧನ ಸಹಾಯದ 30 ಸಾವಿರರು.ಗಳ ಹಣವನ್ನು ವೀಣಾಕುಮಾರಿ ಮತ್ತು
ನೃತ್ಯ ಕಲಾವಿದರಾದ ಜಯಣ್ಣ ಕಲಾತಂಡಕ್ಕೆ ಸಮೂಹ ನೃತ್ಯವನ್ನು ಹಾಕಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಣ ಸಂದಾಯವಾದ ತಕ್ಷಣ ಫೋನ್ ಮೂಲಕ ಸಂಪರ್ಕಿಸಿ ಆ ಕಲಾವಿದನಿಂದ ಪೋನ್ಪೇ ಮೂಲಕ 26,500 ರು.ಗಳನ್ನು ಮರಳಿ ಪಡೆದಿದ್ದಾನೆ. ಈ ರೀತಿಯಾಗಿ ಜಗದೀಶ ಕಲಾವಿದರಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಹಲವಾರು ವರ್ಷಗಳಿಂದ ಕಿರುಕುಳ ನೀಡುತ್ತಾ ಬಂದಿರುತ್ತಾನೆ.
ಹೀಗೆ. ಬಡ ಮುಗ್ಧ ಕಲಾವಿದರು ಹೊಟ್ಟೆಪಾಡಿಗಾಗಿ ಮಾಡುವ ಚಿಕ್ಕಪುಟ್ಟ ನ್ಯೂನ್ಯತೆಗಳನ್ನೇ ದೊಡ್ಡದು ಮಾಡಿ ಅವರ ಮೇಲೆ ದೂರು ನೀಡುವುದಾಗಿ ಬೆದರಿಸಿ ಬ್ಲಾಕ್ ಮೇಲ್ ತಂತ್ರವನ್ನು ಬಳಸಿ ತನಗಾಗದ ಇತರ ಕಲಾವಿದರು, ಸಂಘಟಕರು ಇಲಾಖೆ ಸಿಬ್ಬಂದಿ, ಅಧಿಕಾರಿಗಳ ಮೇಲೆ ಅವರನ್ನು ಎತ್ತಿಕಟ್ಟುವ ಕೆಲಸವನ್ನು ನಿರಂತರವಾಗಿಮಾಡುವ ಮೂಲಕ ಜಿಲ್ಲೆಯ ಕಲಾವಿದರುಗಳು ಮತ್ತು ಕಲಾ ಪೋಷಕರುಗಳ ಮಧ್ಯ ಭಿನ್ನಾಭಿಪ್ರಾಯ, ಗೊಂದಲವನ್ನು ಹಾಗೂ ಗುಂಪುಗಾರಿಕೆಯನ್ನು ಬೆಳಸುತ್ತಿದ್ದಾನೆ.
ಅಷ್ಟೇ ಅಲ್ಲದೆ ಈತನೊಬ್ಬ ಕಲಾವಿದನಾಗಿದ್ದು ಕಲೆಯನ್ನು ಕೊಲ್ಲುತ್ತಿದ್ದಾನೆ, ನಾಟಕಗಳ ಜೀವಾಳ ಇರುವುದೇ ಕಲಾವಿದರ ಸಂಭಾಷಣೆಯಲ್ಲಿ, ಕಲಾವಿದರು ಹೇಳುವ ಸಂಭಾಷಣೆ ಮೇಲೆ ನಿಂತಿರುತ್ತದೆ, ಮತ್ತು ನಾಟಕದ ಯಶಸ್ವಿ ಅಡಗಿರುತ್ತದೆ. ಆದರೆ ಈ ವ್ಯಕ್ತಿ ಎಲ್ಲಾ ನಾಟಕಗಳನ್ನು ಧ್ವನಿ ಮುದ್ರಣ ಮಾಡಿ ಕೇವಲವೇದಿಕೆ ಮೇಲೆ ಕಲಾವಿದರುಗಳು ತುಟಿ ಚಲನೆಯನ್ನು ಮಾಡುವಂತೆ ಮಾಡಿ ಕಲಾವಿದರ ಮತ್ತು ನಟನೆಯಮಹತ್ವವನ್ನು ಹಾಳು ಮಾಡುವ ಮೂಲಕ ನಾಟಕದ ಬುಡಕ್ಕೆ ಕೊಡಲಿ ಪೆಟ್ಟು ನೀಡುತ್ತಿದ್ದಾನೆ. ಇದರಿಂದಾಗಿನಿಜವಾದ ಕಲಾವಿದರುಗಳು ನಶಿಸುವ ಸ್ಥಿತಿಗೆ ರಂಗಭೂಮಿಯನ್ನು ತಂದೊಡ್ಡಿದ್ದಾನೆ, ಇತನೊಬ್ಬ ಕಲಾವಿದನೇ ಅಲ್ಲ ಈತನ ಸಂಸ್ಥೆಗೆ ಮತ್ತು ಮಗನಿಗೆ ಇನ್ನು ಮುಂದೆ ಯಾವುದೇ ಧನ ಸಹಾಯ ಮತ್ತು ಅನುದಾನವನ್ನು ಬಿಡುಗಡೆ ಮಾಡಬಾರದೆಂದು ಎಂದು ಕಲಾವಿದರ ಸಂಘ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಹಲವಾರು ಜನ ಪದಾಧಿಕಾರಿಗಳು ಇದ್ದರು.
