ಬಿಜೆಪಿ ಯುವ ಮೋರ್ಚಾದಿಂದ, ಬೈಕ್ ರ್ಯಾಲಿ ಮತ್ತು ಹರ್ ಗರ್ ತಿರಂಗ ಆಚರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 14- ದೇಶದ ಪ್ರಧಾನಿ ನರೇಂದ್ರ ಮೋದಿ ಜಿ ಕರೆಯ ಮೇರೆಗೆ ಬಿಜೆಪಿ ಕೌಲ್ ಬಜಾರ್ ವಿಭಾಗದ, ಅಧ್ಯಕ್ಷ ವಿ.ನಾಗರಾಜ್ ರೆಡ್ಡಿ ನೇತೃತ್ವದಲ್ಲಿ, ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆ ಉತ್ಸವಗಳ ಭಾಗವಾಗಿ ಇಂದು ಕೌಲ್ ಬಜಾರ್ ವ್ಯಾಪ್ತಿಯ ನಾನಾ ಭಾಗಗಳಲ್ಲಿ ಬಿಜೆಪಿ ಯುವ ಮೋರ್ಚಾ ವಿಭಾಗದ ಅಧ್ಯಕ್ಷ ಈ ನಾಗರಾಜ್ ನೇತೃತ್ವದಲ್ಲಿ ಬೈಕ್ ರಾಲಿ ಮಾಡಲಾಯಿತು.
ಬೈಕುಗಳಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರ ಧ್ವಜ ಹಿಡುಕೊಂಡು ಬೋಲೋ ಭಾರತ್ ಮಾತಾ ಕಿ, ಕೂಗುತ್ತಾ ರ್ಯಾಲಿ ಮಾಡಲಾಯಿತು. ವಾರ್ಡುಗಳಲ್ಲಿ ಮನೆ ಮನೆಗೆ ಹೋಗಿ ರಾಷ್ಟ್ರಧ್ವಜವನ್ನು ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ವಿ ನಾಗರಾಜ ರೆಡ್ಡಿ ಮಾತನಾಡುತ್ತಾ ಭಾರತ ಪ್ರಧಾನಿ ನರೇಂದ್ರ ಮೋದಿಜಿ ಕೊಟ್ಟ ಕರೆ ಮೇರೆಗೆ ತಾವು ಇಂದು ಬೈಕ್ ರಲ್ಲಿ ಸಮೇತ ಮನೆ ಮನೆಗೆ ರಾಷ್ಟ್ರ ಧ್ವಜವನ್ನು ಹಾರಿಸಲು ಜನತೆಯನ್ನು ಉತ್ತೇಜಿಸಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ನೂರು ಬಾಷಾ, ವೆಂಕಟೇಶ್, ಜೋಸೆಫ್, ಗಳ ಜೊತೆಗೆ ಹಲವಾರು ಮಂದಿ ನಾಯಕರು ಕಾರ್ಯಕರ್ತರು ಪಾಲ್ಗೊಂಡಿದ್ದರು.

