ಗವಿಸಿದ್ದಪ್ಪ ಕರಡಿಯಿಂದ ದೇವಸ್ಥಾನದ ಭೂಮಿ ಪೂಜೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 18- ನಗರದ ಕುಷ್ಟಗಿ ರಸ್ತೆಯ ಶ್ರೀರಾಮನಗರದ ಶ್ರೀ ಬನ್ನಿಮಹಾಕಾಳಿಯ ಅಭಿಷೇಕ ಮತ್ತು ಈಶ್ವರ್ ದೇವಸ್ಥಾನದ ಭೂಮಿ ಪೂಜೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಗವಿಸಿದ್ದಪ್ಪ ಕರಡಿ ಮತ್ತು ಬನ್ನಿ ಮಹಾಕಾಳಿ ದೇವಸ್ಥಾನದ ಕಮಿಟಿ ಸದಸ್ಯರು ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ್ ನಗರ ಲೇಔಟನ ಯಲ್ಲಪ್ಪ ಪೂಜಾರ, ಎಸ್.ಐ.ಹಿರೇಮಠ್, ಜಿ.ಎನ್.ಪತ್ತಾರ್, ವೀರಯ್ಯ ಕಣವಿ, ಸಿದ್ದಯ್ಯ ಹಿರೇಮಠ್, ರಾಮಣ್ಣ ಡೊಣ್ಣಿ, ಬಸವರಾಜ್ ಓಜಿನಹಳ್ಳಿ, ಶಂಕರ ಎನ್ ಕೆ ಹಾಗೂ ನಗರದ ನಿವಾಸಿಗಳು ಭಾಗವಹಿಸಿದ್ದರು.
