ಭಾರತೀಯ ವೈದಕೀಯ ಸಂಘದಿಂದ ಪ್ರತಿಭಟನೆ ದೇಶದಾದ್ಯಂತ ವೈದ್ಯರ ಸೇವೆಯ ಹಿಂದೆಗೆತ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 18- ನಗರದ ಶ್ರೀಕೃಷ್ಠದೇವರಾಯ ವೃತ್ತದಲ್ಲಿ ಕೆ.ಆರ್ ಮೆಡಿಕಲ್ ಕಾಲೇಜ್ ಕೊಲ್ಕತ್ತಾದಲ್ಲಿ ಆಗಸ್ಟ್ ೯ ರಂದು ಮುಂಜಾನೆ ಕರ್ತವ್ಯ ನಿರತ ಸ್ನಾತಕೋತ್ತರ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದೆ. ಈ ಘಟನೆಯನ್ನು ಖಂಡಿಸಿ ತಹಶಿಲದಾರ ಯು ನಾಗರಾಜರವರಿಗೆ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಐ.ಎಂ.ಎ ಅಧ್ಯಕ್ಷ ಡಾ.ವೀಣಾ ಸತೀಶ್ ಮಾತನಾಡಿ ಕಲ್ಕತ್ತಾ ಹೈಕೋರ್ಟ್ ನಡೆಸಿದ ತನಿಖೆಯಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ, ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿದೆ ರಾಜ್ಯದ ಪೊಲೀಸ್ ಅಧಿಕಾರಿಗಳು ಸಾಕ್ಷಿಯನ್ನು ನಾಶಗೊಳಿಸುವ ಸಾಧ್ಯತೆಗಳನ್ನು ಊಹಿಸಿದ್ದಾರೆ.
ಆಗಸ್ಟ್ 15ರಂದು ದೊಡ್ಡ ಗುಂಪಿನಲ್ಲಿ ಜನರು ಆಸ್ಪತ್ರೆಯ ಆವರಣವನ್ನು ಪ್ರವೇಶಿಸಿ, ದಾಂದಲೆ ಎಬ್ಬಿಸಿದ್ದು ಮಾತ್ರವಲ್ಲ ಅಪರಾಧಿ ಓಡಾಡಿದ ಸ್ಥಳಗಳಲ್ಲಿ ಸಾಕ್ಷಿಗಳನ್ನು ನಾಶಪಡಿಸಿದ್ದಂತೆ ತೋರುತ್ತದೆ. ಪ್ರತಿಭಟನೆ ನಡೆಸಿದ ಕಿರಿಯ ವೈದ್ಯಾಧಿಕಾರಿಗಳ ಮೇಲೂ ದಾಳಿ ಮಾಡಿದ್ದಾರೆ. ವೈದ್ಯ ವೃತ್ತಿಯಲ್ಲಿ ಸಹಜವಾಗಿ ಆಗುವ ತೊಂದರೆಯ ಜೊತೆಗೆ, ಅದರಲ್ಲೂ ಪ್ರಕೃತಿ ಸಹಜವಾಗಿ ತೊಂದರೆಗೆ ಒಳಗಾಗುವ ಹೆಣ್ಣು ಮಕ್ಕಳು ಬಲಿಯಾಗುವುದನ್ನು ನೋಡುತ್ತಿದ್ದೇವೆ. ಆಸ್ಪತ್ರೆ ಆವರಣದಲ್ಲಿ ವೈದ್ಯರಿಗೆ ರಕ್ಷಣೆ ಒದಗಿಸಿಕೊಡಲು ಆಸ್ಪತ್ರೆಯ ಆಡಳಿತ ಮಂಡಳಿಯದೆ ಬಾಧ್ಯತೆ ಇರುತ್ತದೆ.
ಆಸ್ಪತ್ರೆಯ ಆಡಳಿತ ಮಂಡಳಿಯ ಔದಾಸಿನ್ಯ ಮತ್ತು ಸಂವೇದನಾಶೀಲತೆಯ ಕೊರತೆಯ ಪರಿಣಾಮವೇ ವೈದ್ಯರಿಗೆ ಸಿಬ್ಬಂದಿಗಳ ಮೇಲೆ ಆಕ್ರಮಣ ನಡೆಯುವುದಕ್ಕೆ ಕಾರಣ. ಕೆ.ಆರ್. ಕಾಲೇಜಿನಲ್ಲಿ ನಡೆದ ಈ ಕ್ರೂರ ಘಟನೆಯ ಬಳಿಕ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರ ಮೇಲೆ ಸ್ವಾತಂತ್ರೋತ್ಸವದ ದಿನವೇ ನಡೆದ ಗುಂಡಾಗಿರಿಯನ್ನು ಪ್ರತಿಭಟಿಸಿ ಭಾರತೀಯ ವೈದ್ಯಕೀಯ ಸಂಘವು ಖಂಡಿಸುತ್ತದೆ ಎಂದರು.
ತುರ್ತು ಚಿಕಿತ್ಸೆಗಳು ಲಭ್ಯವಿರುತ್ತವೆ ಹಾಗೂ ಕ್ಯಾಶುಯಲ್ಟಿಯಲ್ಲಿ ವೈದ್ಯರ ಸೇವೆ ಲಭ್ಯವಿರುತ್ತದೆ. ಸೇವೆಯ ಹಿಂದೆಗೆತವು ಆಧುನಿಕ ವೈದ್ಯ ಪದ್ಧತಿಯ ವೈದ್ಯರಿಗೆ ಅನ್ವಯಿಸುತ್ತದೆ. ಭಾರತೀಯ ವೈದ್ಯಕೀಯ ಸಂಘವು ವೈದ್ಯರಿಗಾಗಿ ದೇಶದ ಸಹಾನುಭೂತಿಯನ್ನು ಅಪೇಕ್ಷಿಸುತ್ತದೆ ಎಂದರು.
ಈ ಸಂರ್ಭದಲ್ಲಿ ಡಾ.ಸೋಮರಾಜು, ಡಾ.ಚಂದ್ರಪ್ಪ, ಡಾ.ಯು ಮಾಧವಶೇಟ್ಟಿ, ಡಾ.ಮಾಣಿಕಪ್ಪ, ಡಾ.ಚಿನಿವಾಲರ, ಸರಕಾರಿ ಆಸ್ಪತ್ರೆಯ ಮುಖ್ಯ ವೈಧಾಧಿಕಾರಿ ಡಾ.ಈಶ್ವರ ಸವಡಿ, ಡಾ.ಮದೂಸೂಧನ, ಡಾ.ಸತಿಶರಾಯಕರ, ಡಾ.ಶಿವಾನಂದ ಭಾವಿಕಟ್ಟಿ, ಡಾ.ಮಲ್ಲನಗೌಡ, ಡಾ.ಅರ್ಜುನಹೋಸಳ್ಳಿ, ಡಾ.ಶಿವಕುಮಾರ ಮಾಲಿಪಾಟೀಲ, ಡಾ.ಪ್ರಭಾ ರಾಯಕರ, ಡಾ.ವಿಜಯಿಂದ್ರ, ಡಾ.ಹನುಮಂತಪ್ಪ, ಡಾ.ಮಹಾಂತೇಶ ಪಟ್ಟಣಶೆಟ್ಟಿ, ಡಾ.ಎಸ್.ಬಿ.ಹಂದ್ರಾಳ, ಡಾ.ರಾಜು, ಡಾ.ಮಿಥೂನ ಶೆಳ್ಳಗಿ ಮುಂತಾದ ವೈದ್ಯರುಗಳು ಉಪಸ್ಥಿತರಿದ್ದರು.
