17gvt2

ಗಂಗಾವತಿ : ವಚನ ಶ್ರಾವಣ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 18- -ವಚನ ಶ್ರಾವಣ ೧೩ ದಿನದ ಕಾರ್ಯಕ್ರಮ ಡಾ.ಶಿವಕುಮಾರ್ ಮಾಲಿಪಾಟೀಲ್ ಅವರ ಮನೆಯಲ್ಲಿ ಜರುಗಿತು.

ಈ ದಿನದ ವಿಶೇಷ ಅನುಭಾವವನ್ನು ಶರಣ ಮಹಾದೇವಪ್ಪ ವಿಶ್ವಕರ್ಮ ಗೊರೆಬಾಳ ಅವರು ಬಸವಣ್ಣನವರ ವಚನವನ್ನು ತಮ್ಮ ಸರಳ ಭಾಷೆಯಲ್ಲಿ ವಿಶ್ಲೇಷಣೆ ಮಾಡಿದರು.

ಮಹಾದೇವಪ್ಪ ವಿಶ್ವಕರ್ಮ ಅವರಿಗೆ ಕಾರ್ಯಕ್ರಮ ಡಾ.ಶಿವಕುಮಾರ ಮಾಲಿಪಾಟೀಲ, ಡಾ.ಶಶಿಕಲಾ ದಂಪತಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಡಾ.ಮಲ್ಲನಗೌಡ ಹಿರೇಗೌಡರ್, ಡಾ.ಸುನೀಲ್ ಅರಳಿ, ಸಿ.ಜೆ. ವಳಿ, ಮಹಾಲಕ್ಷ್ಮೀ ಕೇಸರಹಟ್ಟಿ, ಬಸವ ಕೇಂದ್ರದ ಅಧ್ಯಕ್ಷ ಕೆ. ಬಸವರಾಜ, ಮಹಾಲಿಂಗಪ್ಪ ಬನ್ನಿಕೊಪ್ಪ, ರಮೇಶ ಗಬ್ಬೂರ್, ವಚನ ಶ್ರಾವಣ ಸಂಚಾಲಕ ಎ.ಕೆ. ಮಹೇಶಕುಮಾರ್, ಮೈಲಾರಪ್ಪ ಬೂದಿಹಾಳ, ಮಂಜುನಾಥ ಗುಡ್ಲಾನೂರ್, ಅರ್ಜುನ್, ಪ್ರಹ್ಲಾದ್ ಕುಲಕರ್ಣಿ, ಶರಣಪ್ಪ ಮೆಟ್ರಿ, ಚಿದಾನಂದ ಕೀರ್ತಿ, ಸೌಮ್ಯ, ರಗಡಪ್ಪ ಹುಲಿಹೈದರ್, ರಾಮಣ್ಣ, ಸಂಗಪ್ಪ ಗಾಜಿ, ಗುರುಪ್ರಸಾದ್, ವಿಶ್ವನಾಥ್, ವೀರೇಶ, ಎಲ್ಲಪ್ಪ ಆಗಲೂರ್ ಭಾಗವಹಿಸಿದ್ದರು.

ಬಸವಕೇಂದ್ರದ ಅಧ್ಯಕ್ಷ ಕೆ. ಬಸವರಾಜ ಹಾಗೂ ವಚನ ಶ್ರಾವಣ ಸಂಚಾಲಕ ಎ.ಕೆ. ಮಹೇಶಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!