2c136fae-be38-4577-97e1-318669006cc9

19 ರಿಂದ ರಾಜೀವಗಾಂಧಿ ಆರೋಗ್ಯ ವಿ.ವಿ ಕಲ್ಬುರ್ಗಿ ವಿಭಾಗ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 18- ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕಲ್ಬುರ್ಗಿ ವಿಭಾಗ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪುರುಷ ಮತ್ತು ಮಹಿಳಾ ಪಂದ್ಯಾಟವನ್ನು ಸ್ಠಳೀಯ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯವು ಆಯೋಜಿಸುತ್ತಿದ್ದು ಈ ಪಂದ್ಯಾಟಗಳಲ್ಲಿ ವೈದ್ಯಕೀಯ, ದಂತವೈದ್ಯಕೀಯ, ಆಯುರ್ವೇದ, ನರ್ಸಿಂಗ್, ಪಾರ್ಮಸಿ ಕಾಲೇಜಿನ 23 ಪುರುಷರ ತಂಡಗಳು ಮತ್ತು 11 ಮಹಿಳಾ ತಂಡಗಳು ಭಾಗವಹಿಸುತ್ತಿವೆ.

ಈ ಪಂದ್ಯಾಟಗಳನ್ನು ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ.

ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜಯ ಕೋತಬಾಳ ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಡಾ.ಎಂ.ಎಂ.ಸಾಲಿಮಠ, ಹನುಮಂತಪ್ಪ ಪವಾರ್, ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕಲ್ಬುರ್ಗಿ ವಿಭಾಗದ ಕೋಅರ್ಡಿನೆಟರ್ ಮತ್ತು ಈಶಪ್ಪ ದೊಡ್ಡಮನಿ ಉಪಸ್ಥಿತರಿರುತ್ತಾರೆ.

ಈ ಪಂದ್ಯಾಟವು 1 ಮತ್ತು 20ಅಗಸ್ಟ 2024ರಂದು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!