WhatsApp Image 2024-08-19 at 4.50.37 PM

ಶಿವಶರಣ ಕಾಯಕಯೋಗಿ ನುಲಿಯ ಚಂದಯ್ಯ ರವರ 917ನೇ ಜಯಂತೋತ್ಸವ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 19- ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕವಾಗಿ ಮುಂದುವರೆದಲ್ಲಿ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಸಿರುಗುಪ್ಪ ತಾಲೂಕು ಕಾಂಗ್ರೆಸ್ ಹಿರಿಯ ಜನ ಮೆಚ್ಚಿದ ಮುಖಂಡರಾದ ಹಾಗೂ ನಗರಸಭಾ ಮಾಜಿ ಅಧ್ಯಕ್ಷರಾದ ಬಿ ಎಂ ಸತೀಶ್ ಅವರು ಹೇಳಿದರು.

ಸಿರುಗುಪ್ಪ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಕರ್ನಾಟಕ ಸರ್ಕಾರ ತಾಲೂಕ ಆಡಳಿತ ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಶಿವಶರಣ ಕಾಯಕಯೋಗಿ ಶ್ರೀ ನುಲಿಯ ಚಂದಯ್ಯ ನವರ 917ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಹೂ ಮಾಲೆ ಪುಷ್ಪ ಅರ್ಪಿಸಿ ಗೌರವ ನಮನ ಸಲ್ಲಿಸಿ ಸ್ಮರಿಸಿ ಅಧ್ಯಕ್ಷತೆ ವಹಿಸಿ ಮತ್ತು ಉದ್ಘಾಟಿಸಿ ಅವರು ಮಾತನಾಡುತ್ತಾ ಶಿಕ್ಷಣ ಸಂಘಟನೆ ಹೋರಾಟದಿಂದ ಸಮಾಜದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಬೇಕು ಸಿರುಗುಪ್ಪ ನಗರದಲ್ಲಿ ಬಳ್ಳಾರಿ ರಸ್ತೆ ಸಿದ್ದಪ್ಪ ನಗರದಲ್ಲಿರುವ ಶಿವಶರಣ ಕಾಯಕಯೋಗಿ ಶ್ರೀ ನುಲಿಯ ಚಂದಯ್ಯ ನವರ ಹೆಸರಿನಲ್ಲಿ ಸಮಾಜದ ಸಮುದಾಯ ಕಲ್ಯಾಣ ಮಂಟಪದ ಭವನ್ ನಿರ್ಮಿಸುವ ತಮ್ಮ ಬೇಡಿಕೆಯನ್ನು ಪ್ರಯತ್ನಿಸುವೆ ಎಂದು ಅವರು ಭರವಸೆ ನೀಡಿದರು.

ಸಿರುಗುಪ್ಪ ವಿದ್ಯಾ‌ ಸಂಸ್ಥೆಯ ಬಿ ಇ ರಾಮಯ್ಯ ಮಹಿಳಾ ಮಹಾವಿದ್ಯಾಲಯ ಪ್ರಾ ಚಾರ್ಯರು ಹೆಚ್ ಕೆ ಭೀಮಲಿಂಗಪ್ಪ ಅವರು ಮಾತನಾಡಿ ನುಲಿಯ ಚಂದಯ್ಯ ನವರ ಕಾಯಕ ಹಗ್ಗ ಹೊಸೆದು ಮಾರುವುದು ಕಾಯಕಕ್ಕೆ ಸಮನಾದ ಕೂಲಿಯನ್ನು ಕೊಳ್ಳಬೇಕಲ್ಲದೆ ದುರಾಶೆ ಪಡಬಾರದು ಎಂಬುದು ಅಂತ ನುಲಿ ಚಂದಯ್ಯ ನವರು ಕಾಯಕ ನಿಷ್ಠೆಯನ್ನು ಮೆರೆಯುತ್ತಾರೆ ನುಲಿಯ ಚಂದಯ್ಯ ನವರ ಕಾಯಕ ಸುಚಿಸುವ ನುಲೆ ಮೂರು ಎಂದಾಗಿ ಕರೆಸಿ ಕೊಳ್ಳುತ್ತೇವೆ ಕಾಯಕ ಮೌಲ್ಯವನ್ನು ಎತ್ತಿ ಹಿಡಿಯುತ್ತೇವೆ ಗುರುಲಿಂಗ ಜಂಗಮ ಎಲ್ಲರಿಗೂ ಕಾಯಕ ಕಡ್ಡಾಯ ಭಾವ ಶುದ್ಧವಾಗಿ ಮಾಡುವುದೇ ನಿಜವಾದ ಕಾಯಕ ಹೆಣ್ಣು ಹೊನ್ನು ಮಣ್ಣು ಕುರಿತು ನುಲಿಯ ಚಂದಯ್ಯ ರವರ ಗುಣ ಆದರ್ಶ ತತ್ವಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಡ್ಡೇರು ಸಿದ್ದಯ್ಯ ಅವರು ಸರ್ವರನ್ನು ಸ್ವಾಗತಿಸಿ ಕಾಯಕ ಯೋಗಿ ಶ್ರೀ ನುಲಿಯ ಚಂದಯ್ಯ ರವರ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.

ತಾಲೂಕು ಪಂಚಾಯತ್ ವ್ಯವಸ್ಥಾಪಕಿ ಸುಜಾತ ಕೋರಿ, ತಾಹಸಿಲ್ದಾರ್ ರವರ ಶಿರಸ್ತೆದಾರ ಸಿದ್ದಾರ್ಥ ಕಾರಂಜಿ, ಸಿಡಿಪಿಓ ಜಿ ಪ್ರದೀಪ್ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ರಾವಿಹಾಳ್ ಹುಸೇನ್ ಪೀರ, ರಾಷ್ಟ್ರೀಯ ಸಾಕ್ಷರತಾ ಸದಸ್ಯರು ಸಮಾಜ ಸುಧಾರಕ ಎ ಅಬ್ದುಲ್ ನಬಿ, ಕುಳುವ ಕೊರಮ ಕೊರಚ ಕೊರವ ಭಜಂತ್ರಿ ಸಮುದಾಯದ ತಾಲೂಕ ಅಧ್ಯಕ್ಷ ರುದ್ರಪಾದ ಕೆ, ಗೋಪಾಲಪ್ಪ ಕುರುವಳ್ಳಿ, ತಿಮ್ಮಯ್ಯ ತೆಕ್ಕಲಕೋಟೆ, ಸಿದ್ದಯ್ಯ, ಹನುಮಂತಪ್ಪ ಬಾಗೋಡಿ, ವೆಂಕಟೇಶ, ಮಾಜಿ ಸೈನಿಕರಾದ ಈರಪ್ಪ ಪೋಲಿ,ಸಿ ಇಲಾಖೆ ನಗರ ಸಭೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಾಜದ ಮುಖಂಡರು ಸಂಘದ ಪದಾಧಿಕಾರಿಗಳು ಪತ್ರಿಕಾ ಮಾಧ್ಯಮದವರು ಮತ್ತಿತರರು ಉಪಸ್ಥಿತರಿದ್ದರು ಸಮಾಜ ಕಲ್ಯಾಣ ಇಲಾಖೆಯ ಬಾಳಪ್ಪ ಎಸ್ ಕವಲೂರು ಶಶಿಧರ ಸ್ವಾಮಿ ಮೌನೇಶ್ವರ ದಾವುಲ್ ಸಾಬ್ ಭಗವಂತಪ್ಪ ಅಮರೇಶ ನಾಯಕ ಅವರು ಅಮರೇಶ್ವರಿ ಆರಂಭದಲ್ಲಿ ಪ್ರಾರ್ಥಿಸಿದರು ಜಿ ಚಂದ್ರಶೇಖರ್ ಅವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!