ಎಲ್ಲೆಂದರಲ್ಲಿ ಗಲಾಟೆ ಮಾಡುವ ಪಡ್ಡೆ ಹುಡಗರಿಗೆ ಬಿಗ್ ಶಾಕ್
ಕರುನಾಡ ಬೆಳಗು ಸುದ್ದಿ
ಕುಕನೂರು, 20- ಪೋಲಿಸ್ ಠಾಣೆಯಿಂದ ಸಾರ್ವಜನಿಕ ಹಿತಾಸಕ್ತಿ ಮೆರೆಗೆ ಪ್ರಕಟಣೆ ನೀಡಲಾಗಿದ್ದು, ಎಲ್ಲೆಂದರಲ್ಲಿ ಗಲಾಟೆ, ಗುಂಪುಗಾರಿಕೆಯಿಂದ ತೊಂದರೆ ಆದ್ರೇ ಅಂದರ್ ಫೀಕ್ಸ್ ಎಂದು ಕುಕನೂರು ಪೋಲಿಸ ಠಾಣೆ ಪ್ರಕಟಣೆ ಹೊರಡಿಸಿದ್ದಾರೆ.
ಶಾಲಾ, ಕಾಲೇಜು ಆವರಣದಲ್ಲಿ ಹಾಗೂ ಶಾಲೆ, ಕಾಲೇಜು 100ಮೀ ಒಳಗೆ ಅನುಮತಿ ಇಲ್ಲದೇ ವಿನಾ ಕಾರಣ ಪ್ರವೇಶ ಮಾಡುವುದು ಹಾಗೂ ಆ ಸ್ಥಳಗಳಲ್ಲಿ ಗುಂಪುಗಾರಿಕೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗೂ ಸಾಯಂಕಾಲ 6ಗಂಟೆಯ ಮೇಲೆ ಶಾಲಾ, ಕಾಲೇಜು ಆವರಣಗಳಲ್ಲಿ ಸಾರ್ವಜನಿಕರು/ ಯುವಕರು ಯಾವುದೇ ಹುಟ್ಟು ಹಬ್ಬದ ಆಚರಣೆ ಮಾಡುವಂತಿಲ್ಲಾ.
ಒಂದು ವೇಳೆ ಶಾಲಾ ಕಾಲೇಜು ಆವರಣಗಳಲ್ಲಿ ಕುಳಿತುಕೊಂಡು ಧೂಮಪಾನ, ಮಧ್ಯಪಾನ ಹಾಗೂ ಯಾವುದೇ ರೀತಿ ಅನೈತಿಕ ಚಟುವಟಿಕೆ ಕಂಡು ಬಂದಲ್ಲಿ ಅಂತಹವರ ವಿರುದ್ದ ಕಾನೂನು ಅಡಿಯಲ್ಲಿ ಸೂಕ್ತ ಕ್ಮ ಜರುಗಿಸಲಾಗುವುದು ಎಂದು ಕುಕನೂರು ಠಾಣೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
