4

ಕುಕನೂರ ಪ.ಪಂ. ನೂತನ ಅಧ್ಯಕ್ಷರಾಗಿ ಲಲಿತಮ್ಮ ಯಡಿಯಾಪುರ ಉಪಾಧ್ಯಕ್ಷರಾಗಿ ಪ್ರಶಾಂತ್ ಆರಬೆರಳಿನ ಅವಿರೋಧ ಆಯ್ಕೆ

ಕರುನಾಡ ಬೆಳಗು ಸುದ್ದಿ

ಕುಕನೂರ, 21- ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷಯಾಗಿ 8ನೇ ವಾರ್ಡಿನ ಲಲಿತಮ್ಮ ಯಡಿಯಾಪುರ, ಉಪಾಧ್ಯಕ್ಷರಾಗಿ3ನೇ ವಾರ್ಡಿನ ಪ್ರಶಾಂತ್ ಆರ್ ಬೆರಳಿನ ಸೋಮವಾರ ಆಯ್ಕೆಯಾದರು.
ಚುನಾವಣಾ ಅಧಿಕಾರಿ, ತಹಶೀಲ್ದಾರ್ ಎಚ್ ಪ್ರಾಣೇಶ್ ನೇತೃತ್ವದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಪಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯ ಸ್ಥಾನಕ್ಕಾಗಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಿ ಸಬರದ, ಕಾಂಗ್ರೆಸ್ ನಿಂದ ಲಲಿತಮ್ಮ ಎಡಿಯಾಪುರ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷ ಸ್ಥಾನ ಎಸ್ಸಿ ಸ್ಥಾನಕ್ಕೆ ಬಿಜೆಪಿಯಿಂದ ನೇತ್ರಾವತಿ ಮಾಲಗಿತ್ತಿ, ಕಾಂಗ್ರೆಸ್ ಪಕ್ಷದಿಂದ ಪ್ರಶಾಂತ್ ಆರಬೆರಳಿನ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯ ಪ್ರಕ್ರಿಯೆಂತೆ ಬಿಜೆಪಿಯ ಅಧ್ಯಕ್ಷ ಸ್ಥಾನ ನಾಮಪತ್ರ ಸಲ್ಲಿಸಿದ್ದ ಲಕ್ಷ್ಮಿ ಸಬರದ್ ಉಪಾಧ್ಯಕ್ಷ ಸ್ಥಾನಕ್ಕೆ ನೇತ್ರಾವತಿ ಮಾಲಗಿತ್ತಿ ಇಬ್ಬರು ಸದಸ್ಯರ ಬಹುಮತ ಇರದ ಕಾರಣ ಎರಡು ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದರಿಂದ, ಕಣದಲ್ಲಿದ್ದ ಲಲಿತಮ್ಮ ಯಡಿಯಾಪುರ ಅಧ್ಯಕ್ಷಯಾಗಿ, ಪ್ರಶಾಂತ ಆರ್ ಬೇರೆಳ್ಳಿನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸದಸ್ಯರ ಬಲಾಬಲ : ಪಪಂ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನಕ್ಕಾಗಿ ತೆರೆ ಮರೆಯಲ್ಲಿ ಅನೇಕ ಸದಸ್ಯರು ಶ್ರಮಿಸಿದರು. ಆದರೆ ಪಪಂನಲ್ಲಿ ಒಟ್ಟು 19 ಸದಸ್ಯರಿದ್ದು, ಅದರಲ್ಲಿ 10 ಕಾಂಗ್ರೆಸ್, 9 ಬಿಜೆಪಿ ಸದಸ್ಯರಿದ್ದಾರೆ. ಕಾಂಗ್ರೆಸ್ ಬಹುಮತಕ್ಕೆ ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಬೆಂಬಲ ಇಬ್ಬರ ಎರಡು ಮತಗಳು ದೊರೆತ ಹಿನ್ನೆಲೆಯಲ್ಲಿ ಕಾಂಗ್ರೆಸಿಗೆ ಒಟ್ಟು 12 ಜನರ ಬೆಂಬಲ ಸಿಕ್ಕಿತು. ಬಿಜೆಪಿಗೆ 9 ಸದಸ್ಯರು ಬೆಂಬಲ ಸೂಚಿಸಿದರು.

ಅಭಿವೃದ್ಧಿಗೆ ಒತ್ತು : ಪಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ಲಲಿತಮ್ಮ ಯಡಿಯಾಪುರ ಅವರು ಕಳೆದ 20 ವರ್ಷಗಳಿಂದ ಕೃಷಿ ಕಾರ್ಮಿಕ ಮಹಿಳೆಯಾಗಿ ಕೆಲಸ ಮಾಡಿದವರು. ಹೊಲ,ಗದ್ದೆ, ತೋಟಗಳಲ್ಲಿ ಕೂಲಿ ಕಾರ್ಮಿಕಳಾಗಿ ದುಡಿದ ಮಹಿಳೆಗೆ ಕುಕನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಟ್ಟ ದೊರೆತಿದೆ. ಉಪಾಧ್ಯಕ್ಷರಾದ ಪ್ರಶಾಂತ್ ಆರ್ ಬೆರಳ್ಳಿನ್ ಗಾರೆ ಕೆಲಸ ಮಾಡುವ ವ್ಯಕ್ತಿಯಾಗಿದ್ದು, ಬೇರೆ ವಾರ್ಡಿನಲ್ಲಿ ಸ್ಪರ್ಧಿಸಿ ಗೆದ್ದು ಹಿಂದೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಅಧ್ಯಕ್ಷ ಉಪಾಧ್ಯಕ್ಷರಾಗಿ ಕಾಂಗ್ರೆಸ್ ನ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಚುನಾವಣೆಯ ಮಾರ್ಗದಂತೆ ಆಯ್ಕೆಯಾದರು.

ಪಪಂಗೆ ಅಭಿವೃದ್ಧಿಗೆ ನನ್ನಿಂದ ಏನು ಸಾಯಬೇಕು ಅದನ್ನು ನಾನು ನೀಡುತ್ತೇನೆ ಎಂದು ಭರವಸೆ ನೀಡಿದರು. ಸಂಸದ ರಾಜಶೇಖರ ಹಿಟ್ನಾಳ ಇದ್ದರು. ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು ಇದ್ದರು.

Leave a Reply

Your email address will not be published. Required fields are marked *

error: Content is protected !!