8

ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ ಪ್ರಾರಂಭ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 22- ಮುಧೋಳ ಗ್ರಾಮದ ವಿದ್ಯಾರ್ಥಿಗಳು ಆರ್ದಶ ಶಾಲೆಗೆ ಹೋಗಲು ಬಸ್ ಸೌಲಭ್ಯ ಇಲ್ಲದ ಕಾರಣ ಬಹು ದಿನದ ಬೇಡಿಕೆ ಇತ್ತು ಇಂದು ಇಡೇರಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಮತ್ತಾ ಜಭೀ ಹಿರೇಮನಿ ಹೇಳಿದರು.

ತಾಲೂಕಿನ ಮುಧೋಳ ಗ್ರಾಮ ದಿಂದ ಯಲಬುರ್ಗಾ, ಕುಕನೂರು, ಇಟಗಿ ಗ್ರಾಮದ ಆದರ್ಶ ಶಾಲೆಗೆ ಹೋಗುವ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲದ ಕಾರಣ ಬಹುವರ್ಷಗಳ ಬೇಡಿಕೆ ಇಂದು ಈಡೇರಿದೆ. ಗ್ರಾಮ ಪಂಚಾಯತಿ ಅಧ್ಯಕ್ಷೆ ರಾದ ಮಮತಾಜಬಿ ಹಿರೇಮನಿ ಅವರು ಇಂದು ಬಸ್ ಪೂಜೆ ಮಾಡುವದರೊಂದಿಗೆ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ಹಿರಿಯ ಸದಸ್ಯರಾದ ಬಸಪ್ಪ ಅಕ್ಕಿ ಅವರು ಮಾತನಾಡಿ, ಗ್ರಾಮೀಣ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಮುಧೋಳ ಗ್ರಾಮ ದಿಂದ ಯಲಬುರ್ಗಾ, ಕುಕನೂರು, ಇಟಗಿ ಆದರ್ಶ ಶಾಲೆಗೆ ಹೋಗುವ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲದ ಕಾರಣ ಮುಧೋಳ ಮಾರ್ಗವಾಗಿ ಸಾರಿಗೆ ಸಂಪರ್ಕ ಕಲ್ಪಿಸಲು ಬಹುವರ್ಷಗಳ ಬೇಡಿಕೆಯಾಗಿತ್ತು. ಈಗ ಆ ಬೇಡಿಕೆ ಶಾಸಕರಿಂದ ಇಡೇರಿದೆ ಇದರಿಂದ ಬಹಳ ಅನುಕೂಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಹರಿಕಾರ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಧನ್ಯವಾದಗಳನ್ನು ಗ್ರಾಮದ ಗ್ರಾಮಸ್ಥರು ತಿಳಿಸಿದ್ದಾರೆ ಮತ್ತು ಘಟಕ ವ್ಯವಸ್ಥಾಪಕರಿಗೆ ಹಾಗೂ ಸಿಬ್ಬಂದಿಯವರಿಗೆ ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಅತಿ ಸಂತೋಷ ವ್ಯಕ್ತಪಡಿಸಿ. ಸಂಭ್ರಮದಿಂದ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಹೇಮರೆಡ್ಡಿ ರೆಡ್ಡರ, ಕಳಕಪ್ಪ ಕುರಿ, ಚನಸಂಗಪ್ಪ ಸಿಳ್ಳಿನ, ನಿವೃತ್ತ ಸಾರಿಗೆ ಇಲಾಖೆ ಸಂಚಾಲಕರು ಬಸವರಾಜ ಬಳಿಗಾರ, ಈರಣ್ಣ ತಮಿನಾಳ, ಶರಣಪ್ಪ ಬಳಿಗಾರ, ಮತ್ತು ಗ್ರಾಪಂ.ಸರ್ವ ಸದಸ್ಯರು, ಗ್ರಾಮದ ಪ್ರಮುಖರು ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!