
ತಾವರಗೇರಾ ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷೆ ಅವಿರೋಧ ಆಯ್ಕೆ
ಕರುನಾಡ ಬೆಳಗು ಸುದ್ದಿ
ತಾವರಗೇರಾ, 22- ಪಟ್ಟಣದ ಪಟ್ಟಣ ಪಂಚಾತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಾರಾಯಣಗೌಡ ಮೆದಿಕೇರಿ, ಉಪಾ ಧ್ಯಕ್ಷೆ ಸ್ಥಾನಕ್ಕೆ ದುರಗಮ್ಮ ಶಿರವಾಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಇಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣ ನಿರ್ವಾಹಣ ಅಧಿಕಾರಿ, ಕುಷ್ಟಗಿ ತಹಶೀಲದಾರ ಅಶೋಕ ಶಿಗ್ಗವಿ ಅವಿರೋಧ ಘೋಷಣೆ ಮಾಡಿದರು.
ಪಟ್ಟಣ ಪಂಚಾಯತಿಯ ಒಟ್ಟ೧೮ ಸದಸ್ಯರಿದ್ದು, ಈ ಪೈಕಿ ಕಾಂಗ್ರೆಸ್ ಬೆಂಬಲಿತ ೮ ಬಿಜೆಪಿ ಬೆಂಬಲಿತ ೭ ಮತ್ತು ೩ ವರು ಪಕ್ಷೇತರ ಸದಸ್ಯರಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ನಾರಾಯಣಗೌಡ ಹಿಂದುಳಿದ ವರ್ಗ”ಅ” ವರ್ಗಕ್ಕೆ ಸೇರಿದರೆ, ಪರಿಸಿಷ್ಟ ಜಾತಿಗೆ ಮೀಸಲು ಇದ್ದ ಉಪಾಧ್ಯಕ್ಷ ಸ್ಥಾನಕ್ಕೆ ದುರಗಮ್ಮ ಶಿರವಾಟಿ ಆಯ್ಕೆಯಾಗಿದ್ದಾರೆ.
ಚುನಾವಣೆ ಈಪ್ರಕ್ರಿಯಯಲ್ಲಿ ತಹಶೀಲಕಾರ್ಯಆಲಯ ಚುನಾವಣೆ ವಿಭಾಗದ ಅಜೀತ್, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ನಬಿಸಾಬ ಖುಧನ್ನವರ್, ಸಿಬ್ಬಂದಿ ಅಬ್ದುಲ್ ಖಾದರ್ ಪಾಲ್ಗೋಂಡಿದ್ದರು.
ಆಯ್ಕೆಯಾದ ನೂತನ ಅಧ್ಯಕ್ಷ ಉಪಾಧ್ಯಕೆಯರನ್ನ ಪಟ್ಟಣ ಪಂಚಾಯತ ಸದಸ್ಯ ಹಾಗು ಸಿಬ್ಬಂದಿ ವರ್ಗದವರು ಮಾಲಾರ್ಪಣೆ ಮಾಡಿ ಶುಭ ಕೋರಿದರು. ಚುನಾವಣೆ ಸಂದರ್ಬದಲ್ಲಿ ಯಾವೂದೆ ಅಹಿತಕರ ಘಟನೆ ನಡೆಯದಂತೆ ಪಿಎಸ್‌ಐ ನಾಗರಾಜ ಕೊಟಗಿ, ಮಲ್ಲಪ್ಪ ವಜ್ರದ್ ಭದ್ರತೆ ವದಗಿಸಿದ್ದರು.