ಗವಿಸಿದ್ದೇಶ್ವರ ಶ್ರೀಗಳಿಂದ ಮಾರುತೇಶ್ವರ ದೇವಸ್ಥಾನದ ಕಾಮಗಾರಿ ವೀಕ್ಷಣೆ
ಕರುನಾಡ ಬೆಳಗು ಸುದ್ದಿ
ಕುಕನೂರು, 23- ತಾಲೂಕಿನ ಮಸಬಹಂಚಿನಾಳ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನವನ್ನು ಶುಕ್ರವಾರ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವೀಕ್ಷಿಸಿ ಮಾಜಿ ಸಚಿವ ಹಾಲಪ್ಪ ಆಚಾರ್ ಅವರೊಂದಿಗೆ ಮಾತನಾಡಿ, ಈ ಗ್ರಾಮೀಣ ಪ್ರದೇಶದಲ್ಲಿ ಕಲ್ಲಿನಿಂದ ಕಟ್ಟಿದ ಈ ಶ್ರೀ ಮಾರುತೇಶ್ವರ ದೇವಸ್ಥಾನ ಚೆನ್ನಾಗಿ ಕಟ್ಟಿದ್ದಾರೆ. ಆದರೆ ಇಂತಹ ಗ್ರಾಮೀಣ ಪ್ರದೇಶದಲ್ಲಿ ಕಲ್ಲಿನ ಕೆಲಸ ಮಾಡುವವರು ಬರುವುದೇ ಇಲ್ಲ ಕಲ್ಲಿನ ಕೆಲಸ ಮಾಡುವರು ಕೂಡ ತುಂಬಾ ಕಡಿಮೆ ಆಗಿದ್ದಾರೆ ಎಂದರು.
ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಎಲ್ಲಾ ನಿಮ್ಮ ಆಶೀರ್ವಾದ ಎಂದರು. ತದನಂತರ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕುಕನೂರು , ಕಕ್ಕಿಹಳ್ಳಿ, ಇನ್ನಿತರ ಊರುಗಳ ಭಕ್ತಾದಿ ಮನೆಗಳಿಗೆ ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ಮಸಬಹಂಚಿನಾಳ ಗ್ರಾಮದ ಗುರು ಹಿರಿಯರು, ಯುವಕರು ಪಾಲ್ಗೊಂಡು ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
