10

ತೆಕ್ಕಲಕೋಟೆ ಪ.ಪಂ. ಅಧ್ಯಕ್ಷರಾಗಿ ಆನಂದ್ ಎಸ್. ಉಪಾಧ್ಯಕ್ಷರಾಗಿ ರುದ್ರಮ್ಮ ಆಯ್ಕೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 23- ತಾಲೂಕು ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆನಂದ್ ಎಸ್ ಅವರು ಅಧ್ಯಕ್ಷರಾಗಿ ಉಪಾಧ್ಯಕ್ಷ ಸ್ಥಾನಕ್ಕೆ‌ ಬಿಜೆಪಿ ಯ ರುದ್ರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತೆಕಲಕೋಟೆ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನವು ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನವು ಅನುಸೂಚಿತ ಜಾತಿ ಮಹಿಳೆ ಯರಿಗೆ ಮೀಸಲಾಗಿದ್ದು ಶುಕ್ರವಾರ ಮಧ್ಯಾನ 12 ಗಂಟೆಗೆ ನಾಮಪತ್ರ ಅಭ್ಯರ್ಥಿಗಳು ಸಲ್ಲಿಸಿದರು 12: 30ವರೆಗೆ ನಾಮಪತ್ರ ಪರಿಶೀಲನೆ ನಡೆಯಿತು ನಂತರ ಮತದಾನ ಜರುಗಿತು ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯ 8ನೇ ವಾರ್ಡಿನ ಹುಸೇನಪ್ಪ ಹಾಗೂ ಕಾಂಗ್ರೆಸ್ ನಿಂದ 20 ನೇ ವಾರ್ಡಿನ ಸದಸ್ಯ ಆನಂದ ಎಸ್ ನಾಮಪತ್ರ ಸಲ್ಲಿಸಿದ್ದರು 20 ಸದಸ್ಯ ಸ್ಥಾನಗಳಲ್ಲಿ 9 ಸದಸ್ಯರನ್ನು ಕಾಂಗ್ರೆಸ್ 11 ಸದಸ್ಯರನ್ನು ಬಿಜೆಪಿ ಹೊಂದಿತ್ತು ಕಾಂಗ್ರೆಸ್ ಶಾಸಕ ಸಂಸದರ ಮತದಿಂದ ಸಮಬಲ ಪಡೆದು ಫಲಿತಾಂಶಕ್ಕಾಗಿ ಲಾಟರಿ ಹಾಕಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾದರು ಮೀಸಲಾತಿ ಅನ್ವಯ ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಿಂದ ದೊಡ್ಡ ರುದ್ರಮ ಮಾತ್ರ ಅಭ್ಯರ್ಥಿಯಾಗಿದ್ದು ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷರಿಗೆ ಸಂಸದ್ ರಾಜಶೇಖರ್ ಹಿಟ್ನಾಳ್, ಶಾಸಕ ಬಿ.ಎಂ.ನಾಗರಾಜ, ಸಿರುಗುಪ್ಪ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ಕಾಂಗ್ರೆಸ್ ಮುಖಂಡರಾದ ಬಿ ಎಂ ಸತೀಶ್, ರಾವಿಹಾಳ್ ಹುಸೇನ್ ಪೀರಾ, ಕಾಯಿಪಲ್ಲೆ ನಾಗರಾಜ, ನರಸಿಂಹ ಮೋದಿನ್, ಗೊರವರ ಶ್ರೀನಿವಾಸ್, ಮೀರ್ ಹುಸೇನ್,  ಹೆಚ್. ಗಣೇಶ್, ಬಿ ವೆಂಕಟೇಶ್, ಪಟ್ಟಣ ಪಂಚಾಯತ್ ಸದಸ್ಯರು, ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಇತರರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!