ಕಲಾವಿದೆ ಕವಿತಾಗೆ ಸಿದ್ದಯ್ಯ ಪುರಾಣಿಕ ರಾಜ್ಯ ಪ್ರಶಸ್ತಿ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ, 27- ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ಕೊಪ್ಪಳ ಜಿಲ್ಲಾ ಉತ್ಸವ ನಿಮಿತ್ಯ ಎರಡು ದಿನದ ಸಾಂಸ್ಕೃತಿಕ ಕಾರ್ಯಕ್ರಮ, ತಿರುಳ್ಗನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಇಲ್ಲಿನ ಕಲಾವಿದೆ ಕವಿತಾ ಮೋಹನ್ ಅವರಿಗೆ ಸಿದ್ದಯ್ಯ ಪುರಾಣಿಕ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಲವು ವರ್ಷಗಳಿಂದ ಶಾಸ್ತ್ರೀಯ ಸಂಗೀತ, ಸಿನೆಮಾ ಸಂಗೀತ ಮತ್ತು ಕಾರ್ಯಕ್ರಮಗಳ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಕಲಾವಿದೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತ ಜಿ.ಎಸ್.ಗೋನಾಳ, ಮಹೇಶಬಾಬು ಸುರ್ವೆ, ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ.ಗೊAಡಬಾಳ, ಹಿರಿಯ ಪತ್ರಕರ್ತ ಡಾ.ಬಸವರಾಜ ಗಡಾದ, ಪತ್ರಕರ್ತ ನಾಗರಾಜ ಇಂಗಳಗಿ, ರಾಮು ಪೂಜಾರ, ಎಂ.ಬಿ.ಅಳವAಡಿ, ಯಲ್ಲಪ್ಪ ಬಡಿಗೇರ ಇತರರು ಇದ್ದರು.
