ಪ.ಜಾತಿ ಅಧಿಕಾರಿ ಎನ್ನುವ ಕಾರಣಕ್ಕೆ ಸಹಿಸದೆ ಹೋರಾಟ
ಕರುನಾಡ ಬೆಳಗು ಸುದ್ದಿ
ವಿಜಯನಗರ, 28- ನಗರಸಭೆ ವ್ಯಾಪ್ತಿಗೆ ಬರುವ ೭ನೇ ವಾರ್ಡಿನ ಅನಂತಶಯನ ಗುಡಿಯಲ್ಲಿ ವಿರಾಟ್ ೪ವರ್ಷದ ಬಾಲಕ ಶುಕ್ರವಾರ ಮಧ್ಯಾಹ್ನ ತೆರದ ಖಾಸಗಿ ಒಡೆತನದಲ್ಲಿನ ನಿವೇಶನದ ಲ್ಲಿ ನೀರು ತುಂಬಿದ ಗುಂಡಿಗೆಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದ್ದು.ಈ ಸಾವಿಗೆ ನಗರಸಭೆ ಪೌರಾಯುಕ್ತರ ನಿರ್ಲಕ್ಷ್ಯ, ಹಾಗಾಗಿ ಅವರ ಮೇಲೆ ಕ್ರಮಮಾಡಬೇಕೆಂದು ನಾಗರಸಭೆ ಸದಸ್ಯರು ನಗರ ಸಭೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆ ಕುರಿತು ವಿಜಯನಗರ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘದಿAದ ಹೋರಾಟ ಮಾಡುತ್ತಿರುವುದು ಉದ್ದೇಶಪೂರ್ವಕ ವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಮನವಿ : ಹೊಸಪೇಟೆ ನಗರಸಭೆಯ ಪೌರಾಯುಕ್ತರಾದ ಚಂದ್ರಪ್ಪರವರ ಮೇಲೆ ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ಆರೋಪವನ್ನು ಕೂಡಲೇ ತನಿಖೆ ಮಾಡಿ, ಚಂದ್ರಪ್ಪ ರವರು ಪರಿಶಿಷ್ಟ ಜಾತಿ ಮಾದಿಗ ಸಮಾಜದ ಅಧಿಕಾರಿಯಾಗಿರುವುದರಿಂದ ಜಾತಿ ಕಾರಣಕ್ಕೆ ದಕ್ಷ ಅಧಿಕಾರವನ್ನು ಸಹಿಸಲಾರದೇ ಕೆಲ ನಗರಸಭೆ ಸದಸ್ಯರು ಮಾಡುತ್ತಿರುವ ಹೋರಾಟವು ಉದ್ದೇಶ ಪೂರ್ವಕವಾಗಿದೆ. ೭ನೇ ವಾರ್ಡ್ನಲ್ಲಿ ನಡೆದ ಅನಂತಶಯನಗುಡಿ ಘಟನೆಯು ನಗರಸಭೆಯ ಪೌರಾಯುಕ್ತರು ಹೊಣೆ ಎನ್ನುವುದು ಇದು ತನಿಖೆಯಾಗಬೇಕಾಗಿದೆ.
ಹೊಸಪೇಟೆ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ೨೩ನೇ ವಾರ್ಡ್, ಕಾರಿಗನೂರಿನಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಸಾವನ್ನಪಿದ ಘಟನೆ ನಗರಸಭೆಯ ಸದಸ್ಯರು ಹೊಣೆ, ೫ನೇ ವಾರ್ಡ್ ರಾಣಿಪೇಟೆಯಲ್ಲಿ ನಡೆದ ಕಲುಷಿತ ನೀರು ಸೇವೆನೆಯಿಂದ ಮಹಿಳೆಯು ಸಾವನ್ನಪ್ಪಿದ್ದು ನಗರಸಭೆ ಸದಸ್ಯರು ಹೊಣೆ, ಬಸ್ ಡಿಪೋ ಏರಿಯಾದ ಘಟನೆ, ಚಿತ್ತವಾಡಿ ಘಟನೆ, ಸಿದ್ದಲಿಂಗಪ್ಪ ಚೌಕಿ ಘಟನೆಗಳು, ಹೀಗೆ ಅನೇಕ ರೀತಿಯ ಘಟನೆಗಳು ನಡೆದಿವೆ. ಈ ಹಿಂದೆ ನಡೆದ ಘಟನೆಗಳಾದ ಸಂದರ್ಭದಲ್ಲಿ ಈ ಹಿಂದಿನ ಪೌರಾಯುಕ್ತರು ಹಾಗೂ ಈಗಿನ ಹಿರಿಯ ಅಧಿಕಾರಿಗಳು ಇದ್ದರು ಅವರ ಮೇಲೆ ಈ ರೀತಿಯಲ್ಲಿ ಯಾರು ಪ್ರಶ್ನಿಸಿದೇ ಇರುವುದು ಮತ್ತು ಇವತ್ತು ಜಾತಿಯ ಕಾರಣದಿಂದ ಮಾದಿಗ ಸಮುದಾಯದ ಅಧಿಕಾರಿಯನ್ನು ಸಹಿಸದಿರುವುದು, ಕಂಡುಬರುತ್ತಿದೆ ಮತ್ತು ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಘಟನೆಗಳಿಗೆ ಯಾವುದೇ ರೀತಿಯ ಕ್ರಮ ಇಲ್ಲ. ಆದರೆ ನಗರಸಭೆ ಪೌರಾಯುಕ್ತರ ಮೇಲೆ ಆಗುತ್ತಿರುವ ಆರೋಪವು ಇದರ ಹಿಂದೆ ರಾಜಕೀಯ ಪ್ರೇರೆಪಿತ ಕಾಣದ ಕೈಗಳ ಕೆಲಸವಿದೆ ಮತ್ತು ಕೆಲ ನಗರಸಭೆ ಸದಸ್ಯರ ಕುಮ್ಮಕ್ಕಿನಿಂದ ಮತ್ತು ಕೆಲ ಸದಸ್ಯರ ಕುಟುಂಬದವರಿAದ ಈ ರೀತಿಯಾಗಿ ನಡೆಯುತ್ತಿದೆ.
ನಗರಸಭೆ ವ್ಯಾಪ್ತಿಯಲ್ಲಿ ಬರುವ ಅನೇಕ ವಾರ್ಡ್ಗಳ ಬಗ್ಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಇಲ್ಲ. ಅದರ ಬಗ್ಗೆ ಪ್ರಶ್ನೆಯು ಇಲ್ಲ. ಆದರೆ ಕೆಲ ನಗರಸಭೆ ಸದಸ್ಯರ ಕಾನೂನು ಬಾಹೀರ ಕೃತ್ಯಗಳಿಗೆ ಅವಕಾಶ ಇಲ್ಲದಂತಾಗಿರುವ ಕಾರಣಕ್ಕೆ ಚಂದ್ರಪ್ಪ ರವರು ಹೊಣೆ ಎಂದು ಆರೋಪ ಮಾಡುತ್ತಿರುವುದು ಖಂಡನಿಯ ಮತ್ತು ಸೂಕ್ತ ತನಿಖೆ ಮಾಡಬೇಕೆಂದು ಅಗ್ರಹಿಸುತ್ತೇವೆ. ಮತ್ತು ಧಕ್ಷ ಅಧಿಕಾರಿಗಳ ಮೇಲೆ ಆರೋಪ ನಿಲ್ಲದಿದ್ದರೆ ಉಘ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಮಚಂದ್ರ, ಈರಣ್ಣ, ಭರತ್ ಕುಮಾರ್, ಇತರರಿದ್ದರು.
