??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಸಿಎಂ ಆರ್ಥಿಕ ಸಲಹೆಗಾರ ರಾಯರಡ್ಡಿ ಜನ್ಮ ದಿನ ಆಚಾರಣೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 6- ಮತ ಕ್ಷೇತ್ರದಲ್ಲಿ ಶಾಸಕ, ಸಂಸದ, ಸಚಿವರಾಗಿ ಆಡಳಿತ ನಡೆಸಿದ ಬಸವರಾಜ ರಾಯರಡ್ಡಿ ಮಾಡಿದ ಜನಪರ ಅಭಿವೃದ್ಧಿ ಕಾರ್ಯಗಳೇ ಇಂದಿಗೂ ಮಾದರಿಯಾಗಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಶುಕ್ರವಾರ ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಅವರ ೬೮ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಕ್ ಕತ್ತರಿಸಿ ಬಳಿಕ ಶುಕ್ರವಾರ ಮಾತನಾಡಿದರು.
ಕಳೆದ ನಾಲ್ಕು ದಶಕಗಳ ಕಾಲ ಅವರ ಜತೆಯಲ್ಲಿ ನಾನು ಇದ್ದೇನೆ. ಬಹಳ ಹತ್ತಿರದಿಂದ ಅವರನ್ನ ಕಂಡಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಆಗಿರುವ ಕಲ್ಯಾಣ ಕೆಲಸಗಳು ಸಾಕ್ಷಿಯಾಗಿದೆ. ಯಲಬುರ್ಗಾ ಕ್ಷೇತ್ರವೂ ಅಭಿವೃದ್ಧಿ ವಿಚಾರದಲ್ಲಿ ದೊಡ್ಡಮಟ್ಟದ ಪ್ರಗತಿ ಕಂಡಿದೆ. ಎಲ್ಲಾ ರಂಗಕ್ಕೆ ಬಹಳಷ್ಟು ಒತ್ತು ನೀಡಿದ್ದಾರೆ. ಇದರಿಂದ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯತ್ತಾ ಸಾಗಿದೆ ಎಂದು ತಿಳಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ವೀರನಗೌಡ ಪೋ.ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 14 ತಿಂಗಳ ಅವಧಿಯಲ್ಲಿ ರಾಯರಡ್ಡಿಯವರ ಕ್ಷೇತ್ರಕ್ಕೆ ಸುಮಾರು ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ಅಭಿವೃದ್ಧಿಗಾಗಿ ತಂದಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದೆ. ಅವಳಿ ತಾಲೂಕಿಗೆ ಕೆರೆ ತುಂಬಿಸುವ ಯೋಜನೆಯನ್ನು ಜಾರಿಗೆ ತಂದು ರೈತರ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಎಂದರು.
ನ್ಯಾಯವಾದಿ ಬಿ.ಎಂ.ಶಿರೂರು, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಹಾಂತೇಶ ಗಾಣಗೇರ್ ಮಾತನಾಡಿದರು.
ಈ ಸಂದರ್ಭ ನೂರಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಮುಖಂಡರಾದ ಹನುಮಂತಗೌಡ ಚೆಂಡೂರು, ರಾಮಣ್ಣ ಸಾಲಭಾವಿ, ಎ.ಜಿ.ಭಾವಿಮನಿ, ಡಾ.ಶಿವನಗೌಡ ದಾನರೆಡ್ಡಿ, ರೇವಣೆಪ್ಪ ಸಂಗಟಿ, ಶರಣಪ್ಪ ಗಾಂಜಿ, ಸುಧೀರ್ ಕೊರ್ಲಳ್ಳಿ, ಈರಪ್ಪ ಕುಡಗುಂಟಿ, ಮಲ್ಲಿಕಾರ್ಜುನ್ ಜಕ್ಕಲಿ, ರೇವಣೆಪ್ಪ ಹಿರೇ ಕುರುಬರ, ರಾಜಶೇಖರ್ ನಿಂಗೋಜಿ, ಹಂಪಯ್ಯ ಸ್ವಾಮಿ ಹಿರೇಮಠ, ಈಶ್ವರ ಅಟಮಾಳಗಿ, ಹನುಮೇಶ ಕಡೇಮನಿ, ಛತ್ರಪ್ಪ ಛಲವಾದಿ, ಹೇಮರಡ್ಡಿ, ರಡ್ಡೇರ್, ಶಿವಕುಮಾರ್ ಆದಾಪೂರು, ಶರಣಪ್ಪ ಅರಕೇರಿ, ಸಿದ್ದಪ್ಪ ಕಟ್ಟಿಮನಿ, ನಿಂಗಪ್ಪ ಕಮತರ, ಶರಣಗೌಡ ಬಸಾಪೂರು, ಪ್ರಕಾಶ ಮಾಲಿಪಾಟೀಲ್, ಸುರೇಶ ಧನಕಾಯಿ, ಪುನೀತ್ ಕೊಪ್ಪಳ, ಶಿವಾನಂದ ಬಣಕಾರ, ಪರಶುರಾಮ ಸಂಗನಾಳ, ಮಹೇಶ ಹೂಗಾರ್, ಅಭಿಮಾನಿಗಳು ಇದ್ದರು.
