2

ಮಣ್ಣಿನ ಗಣಪತಿ ಮನೆಮನೆಗೂ ಹಂಚಿದ ವಿಜಡಂ-ಲ್ಯಾಂಡ್ ಶಾಲೆ ವಿದ್ಯಾರ್ಥಿಗಳು

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 6- ನಗರದ ಮುಖ ರಸ್ತೆಯಲ್ಲಿ ಇರುವ ವಿಜುಡಂ ಲ್ಯಾಂಡ್ ಶಾಲೆ ವಿದ್ಯಾರ್ಥಿಗಳು ಎಂದು ಬಸವೇಶ್ವರನಗರ ಬಡಾವಣೆಯಲ್ಲಿ ಮನೆಮನೆಗೂ ಸಂಚರಿಸಿ ಮಣ್ಣಿನ ಗಣಪತಿಯ ಪೂಜೆಯ ಅವಶ್ಯಕತೆಯನ್ನು ತಿಳಿಹೇಳಿ ಗಣಪತಿಗಳನ್ನು ನೀಡಿದರು.

ವಿದ್ಯಾರ್ಥಿಗಳು ತಮ್ಮ ಉಪಾಧ್ಯಾಯರ ಜೊತೆಗೆ ಪುಟ್ಟ ಪುಟ್ಟ ಗಣಪತಿಗಳನ್ನು ಹಿಡಿದುಕೊಂಡು ಮನೆಗಳ ಹತ್ತರ ಬಂದು, ಗಣಪತಿಯ ಪೂಜೆ ವಿಶಿಷ್ಟತೆ ಹಾಗೂ ಮಣ್ಣಿನ ಗಣಪತಿಯನ್ನೇ ಯಾಕೆ ಪೂಜಿಸಬೇಕು ಎಂದು ವಿವರಿಸಿ ಉಚಿತವಾಗಿ ಮಣ್ಣಿನ ಗಣಪತಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಾಯ ರಿಯಾಜ್ ಅವರು ಮಾತನಾಡುತ್ತಾ ಭಗವಂತ ನಮಗೆ ನೀಡಿದ ಪ್ರಕೃತಿಯನ್ನು ಸಂರಕ್ಷಿಸಲು ಪರಿಸರಗಳ ಸಂರಕ್ಷಣೆಗಾಗಿ ಮಣ್ಣಿನ ಗಣಪತಿಯ ಆರಾಧನೆ ಬೆಳೆಯಬೇಕು ಎಂದರು.

ನಮ್ಮ ಶಾಲೆಯ ಮ್ಯಾನೇಜ್ಮೆಂಟ್ ಮತ್ತು ಪ್ರಿನ್ಸಿಪಲ್ ಕಟ್ಟೆಗೌಡ ಅವರು ಸುಮಾರು ೨೫೦ಕ್ಕೂ ಹೆಚ್ಚು ಮಣ್ಣಿನ ಗಣಪತಿಗಳನ್ನು ವ್ಯವಸ್ಥೆ ಮಾಡಿ ಪ್ರಕೃತಿ ಸಂರಕ್ಷಣೆಗೆ ಕೈಜೋಡಿಸಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!