ಮಾದಿಗ ಜನಾಂಗಕ್ಕೆ ಸಮರ್ಪಕ ಒಳ ಮೀಸಲಾತಿಗೆ ಒತ್ತಾಯ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 10- ರಾಜ್ಯದ ಪರಿಶಿಷ್ಟ ಜಾತಿ ಪಂಗಡದಲ್ಲಿ ಮಾದಿಗ ಜನಾಂಗಕ್ಕೆ ಆದ ಅನ್ಯಾಯವನ್ನು ಸರಿಪಡಿಸಲು, ಒಳ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಕೂಡಲೇ ಕ್ರಮವಹಿಸಬೇಕೆಂದು ದಾದಾಸಾಹೇಬ್ ಎನ್.ಮೂರ್ತಿ ಸ್ಥಾಪಿತ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷರು, ಹೆಚ್. ದಾನಪ್ಪ ಗುತ್ತವ್ವರ್ ಆಗ್ರಹ ವ್ಯಕ್ತಪಡಿಸಿದರು.
ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಸಹಾಯಾಧಿಕಾರಿ ಮಹಮ್ಮದ್ ಜುಬೇರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಹಿಂದೆ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಿಸಿ ಒಳ ಮೀಸಲಾತಿ ಕಲ್ಪಿಸಲು ಹಲವಾರು ಬಾರಿ ಹೋರಾಟ ನಡೆಸಲಾಗಿದೆ ಎಂದು, ಅದಕ್ಕೆ 2004ನೇ ಇಸವಿಯಲ್ಲಿ ಅಂದಿನ ಸರ್ಕಾರ ನಿವೃತ್ತಿ ನ್ಯಾಯಮೂರ್ತಿ, ಜಸ್ಟಿಸ್ ಎಜೆ ಸದಾಶಿವ ಆಯೋಗ ರಚಿಸಿತ್ತು. ಆಯೋಗ ಕೊಟ್ಟ ವರದಿಯ ಮೇರೆಗೆ ಅಂದಿನ ಮುಖ್ಯಮಂತ್ರಿಗಳು ಬಸವರಾಜ ಬೊಮ್ಮಾಯಿ ಅವರು ಕೂಡಲೇ ವರದಿಯನ್ನು ಸಚಿವ ಸಂಪುಟದ ಅನುಮೋದನೆ ಮೇದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಯಿತು. ಆಮೇಲೆ ಅಧಿಕಾರವನ್ನು ಹಿಡಿದ ಕಾಂಗ್ರೆಸ್ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಪರಿಶಿಷ್ಟ ಮೀಸಲಾತಿ ವರ್ಗೀಕರಣ ಮಾಡುವ ನಿರ್ಣಯವನ್ನು ಆಮೋದಿಸಿ ಮಾರ್ಚ್ ತಿಂಗಳು 17ನೇ ತಾರೀಕು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು.
ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಮಾಡಲು ಒತ್ತಾಯಿಸಿ ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ಛತ್ತೀಸ್ಗಢ ಜಾರ್ಖಂಡ್ ಹರಿಯಾಣ ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಲವಾರು ದೇಶಗಳಿಂದ ಹೋರಾಟ ನಡೆಯುತ್ತಲೇ ಇದೆ ಎಂದರು.
ಇದಕ್ಕೆ ಅಂತಿಮಗೊಳಿಸಲು ಮಾನ್ಯ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ನೀಡುವ ಸಂವಿಧಾನಬದ್ಧ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ತೀರ್ಪು ನೀಡಿದೆ. ಹಾಗಾಗಿ ಕೂಡಲೇ ರಾಜ್ಯ ಸರ್ಕಾರ ಮಾದಿಗ ಜನಾಂಗದ ನ್ಯಾಯಕ್ಕಾಗಿ ಆದೇಶದಂತೆ ಸಂವಿಧಾನಕ್ಕೆ ಗೌರವ ನೀಡಿ ಕೂಡಲೇ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮಿಸಲಾತಿ ಜಾರಿ ಮಾಡಲು ತಾವು ಅಗ್ರಹಿಸುತ್ತಿರುವುದಾಗಿ ತಿಳಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಸರಿಯಾಗಿ ನೀಡುತ್ತಿಲ್ಲ ಹಾಗೂ ಮೆರಿಟ್ ವಿದ್ಯಾರ್ಥಿ ವೇತನ ಮತ್ತು ವಿದೇಶದಲ್ಲಿ ಎಸ್ಸಿಎಸ್‌ಟಿ ವ್ಯಾಸಂಗ ಮಾಡಲು ಇದ್ದ ಪ್ರಬುದ್ಧ ಯೋಜನೆಗೆ ರದ್ದು ಮಾಡಲಾಗಿದೆ ಇದನ್ನು ಕೂಡಲೇ ರಾಜ್ಯ ಸರ್ಕಾರ ಪುನರಾರಂಭಿಸಬೇಕೆAದು ಒತ್ತಾಯಿಸಿದರು. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಜಾರಿಯಾಗುವವರೆಗೂ ಕೇಂದ್ರ ಮತ್ತು ರಾಜ್ಯದ ಎಲ್ಲಾ ಉದ್ಯೋಗ ನೇಮಕಾತಿಗಳನ್ನು ಸ್ಥಗಿತಗೊಳಿಸಲು ಎಂದು, ಖಾಸಗಿ ಉದ್ಯೋಗ ಕ್ಷೇತ್ರ ಮತ್ತು ಗುತ್ತಿಗೆ ನೇಮಕಾತಿಗಳಲ್ಲಿಯೂ ಮೀಸಲಾತಿ ಜಾರಿಯಾಗಲಿ ಎಂದು, ಕೇಂದ್ರ ಸರ್ಕಾರ ಕೂಡಲೇ ಎಸ್ಸಿ ಎಸ್ಟಿ ಅಭಿವೃದ್ಧಿಗಾಗಿ ಛಿಠಿ ಮತ್ತು ಖಿSP ಕಾಯ್ದೆ ರಚಿಸಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಎನ್.ಮೂರ್ತಿ ಬಣದ) ಜಿಲ್ಲಾ ಪದಾಧಿಕಾರಿಗಳಾದ ಕೊಂಡಯ್ಯ ಜಿಲ್ಲಾಧ್ಯಕ್ಷರು, ಎಚ್.ದಾನಪ್ಪ ಹಾಗೂ ಸಿರುಗುಪ್ಪ ತಾಲೂಕ ಅಧ್ಯಕ್ಷರು ಎಂ.ಎಲ್ಲಪ್ಪ ಮತ್ತು ಉಪಾಧ್ಯಕ್ಷರು ಹೊಸಳ್ಳಿ ನಾಗರಾಜ, ಸಹಕಾರದರ್ಶಿ ಎಚ್.ದುರ್ಗಪ್ಪ, ತೆಕ್ಕಲಕೋಟೆ ನಗರ ಘಟಕ ಅಧ್ಯಕ್ಷ ಕೆ.ಗುರುಮೂರ್ತಿ ಹಾಗೂ ಸಿರುಗುಪ್ಪ ನಗರ ಘಟಕ ಅಧ್ಯಕ್ಷ ಬಿ.ಟಿ.ಆನಂದ, ಉಪಾಧ್ಯಕ್ಷ ಹುಸೇನಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ದಳವಾಯಿ ವೀರೇಶ ಹಾಗೂ ಸಹಕಾರಿದರ್ಶಿ ವೀರೇಶ ಹಾಗೂ ಸಿರುಗುಪ್ಪದ ದಲಿತ ಮುಖಂಡರು ಪಾಲ್ಗೊಂಡುದ್ದಿರು.
