13 ರಿಂದ ಬಾಯಿ, ಮುಖ ಹಾಗೂ ದವಡೆ ಚಿಕಿತ್ಸೆ ತರಬೇತಿ ಶಿಬಿರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 10- ಸೆ. 13 ರಿಂದ 15ರವರೆಗೆ ಭಾರತೀಯ ವೈದ್ಯಕೀಯ ಸಂಘದಿಂದ ತೋರಣಗಲ್ಲಿನ ವಿದ್ಯಾನಗರದ ಜೆ ಎಸ್ ಡಬ್ಲ್ಯೂ ನಲ್ಲಿ ಮೂರು ದಿನಗಳ ಕಾಲ ಬಾಯಿ ಮುಖ ಆಗುತ್ತೆ ಬಗ್ಗೆ ಯುವ ದಂತ ವೈದ್ಯರಿಗೆ ನುರಿತ ತಂತ್ರಜ್ಞರಿAದ ಮತ್ತು ಹಿರಿಯ ವೈದ್ಯರುಗಳಿಂದ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಂತ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ.ಮಧುಸೂದನ್ ರೆಡ್ಡಿ ತಿಳಿಸಿದರು.
ಅವರು ಇಂದು ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿಮಾತನಾಡಿ, ಯುವ ವೈದ್ಯರು ಮತ್ತು ಯುವ ಶಸ್ತ್ರಚಿಕಿತಕರಿಗೆ ತಜ್ಞ ವೈದ್ಯರುಗಳು ಇಡೀ ದಿನ ವಿವಿಧ ವಿಷಯಗಳಲ್ಲಿ ತರಬೇತಿ ನೀಡುವರು, ಮತ್ತು ೧೪ರಂದು ಖ್ಯಾತ ವೈದ್ಯ ಕಿಶೋರ ನಾಯಕ ಅವರ ಸ್ಮರಣಾರ್ಥ ವಿವಿಧ ವಿಷಯಗಳ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಉಪನ್ಯಾಸವನ್ನು ರಾಮದಾಸ ಬಾಲಕೃಷ್ಣ ಡಾ. ವೆಂಕಟೇಶ್ ಆನೆ ಹೊಸೂರು ಡಾ. ಕುಮಾರ್ ಮುಂಗಲ ದೀಪೇಶ್ ರಾವ್ ಒಳಗೊಂಡAತೆ ಹಲವಾರು ತಜ್ಞ ವೈದ್ಯರು ಸರ್ಜರಿ ಬಗ್ಗೆ ಯುವಜನತೆಗೆ ಉಪನ್ಯಾಸದ ಮೂಲಕ ತಿಳಿಸಲಿದ್ದಾರೆ ಎಂದರು.
ಅದೇ ರೀತಿಯಾಗಿ ಸೆಪ್ಟೆಂಬರ್ ೧೫ರಂದು ಚೀಳು ತುಟಿ ಚಿಕಿತ್ಸೆ ಮುಖವನ್ನು ಸುಂದರಗೊಳಿಸುವುದು ದವಡೆ ಭಾಗ ಕತ್ತರಿಸಿ ಮರುಜೋಡಿಸುವುದು ಸೇರಿದಂತೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಉಪನ್ಯಾಸವನ್ನು ಆಯೋಜಿಸಲಾಗಿದೆ ಎಂದು ಡಾಕ್ಟರ್ ರೆಡ್ಡಿ ತಿಳಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿ ವಿಜಯನಗರ ಅವಳಿ ಜಿಲ್ಲೆಯ ಸಂಸದರಾದ ಈ ತುಕಾರಾಂ ನೆರವೇರಿಸುವರು, ಜೆ ಎಸ್ ಡಬ್ಲ್ಯೂ ವಿಜಯನಗರ ವರ್ಕ್ಸ್ ಇದರ ಅಧ್ಯಕ್ಷರಾದ ಪಿಕೆ ಮುರುಗನ್, ಬಳ್ಳಾರಿ ಮೆಡಿಕಲ್ ಕಾಲೇಜ್ ನಿರ್ದೇಶಕ ಡಾಕ್ಟರ್ ಗಂಗಾಧರ ಗೌಡ, ಸರ್ಕಾರಿ ದಂತ ಕಾಲೇಜಿನ ಪ್ರಾಂಶುಪಾಲರಾದ ಎಸ್ ಹೆಚ್ ಭಾರತಿ, ಡಾಕ್ಟರ್ ಭಗವಾನ್ ದಾಸ್ ರೈ, ಅಖಿಲ ಭಾರತ ಬಾಯಿ ಮುಖ ಹಾಗೂ ದೌಡೆ ಚಿತ್ರ ಸಂಘದ ಅಧ್ಯಕ್ಷ ಕಾರ್ಯದರ್ಶಿ ಗಿರಿಸಾವ್ ಈ ಕಾರ್ಯಕ್ರಮದಲ್ಲಿ ಮತ್ತು ಈ ತರಬೇತಿ ಶಿಬಿರದಲ್ಲಿ ೨೦೦ ಕ್ಕೂ ಹೆಚ್ಚು ವೈಜ್ಞಾನಿಕ ವಿವರಗಳನ್ನು ನೀಡುವವರು ಹಾಗೂ ೩೫೦ ಕ್ಕೆ ಹೆಚ್ಚು ವೈದ್ಯರು ನುರಿತ ತಂತ್ರಜ್ಞರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ನಂದಕುಮಾರ್ ಹಾಗೂ ಡಾಕ್ಟರ್ ಪ್ರಕಾಶ್ ತಂದೂರ್ ಅವರನ್ನು ಜೀವಮಾನದ ಸಾಧನೆಯನ್ನು ಪರಿಗಣಿಸಿ ದಂತ ವೈದ್ಯಕೀಯ ಸಂಘದ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಬಸವರಾಜ್. ಆರ್ಗನೈಸಿಂಗ್ ಸೆಕ್ರೆಟರಿ ಗುರುಪ್ರಸಾದ್ ಎಡೆಹಳ್ಳಿ ಸೇರಿದಂತೆ ಹಲವರಿದ್ದರು.
