1

ಸೌರಶಕ್ತಿ ಈರುಳ್ಳಿ ಸಂಗ್ರಹಣೆ ಸಿರಿಧಾನ್ಯ ಘಟಕಕ್ಕೆ ಶಾಸಕರಿಂದ ಚಾಲನೆ

ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿ : ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 11- ಈ ಭಾಗದ ರೈತರ ಶ್ರೆಯೋಭಿವೃದ್ಧಿಗಾಗಿ ರೈತ ಭವನ ನಿರ್ಮಾಣಕ್ಕೆ ಮಂಜೂರುಗೊಳಿಸಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿವಿ ರಾಷ್ಟಿಯ ಕೃಷಿ ವಿಕಾಸ ಯೋಜನೆ, ಕೃ.ತಾ.ವಿ.ವಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಭಾರತೀಯ ಸಿರಿಧಾನ್ಯ ಸಂಶೊಧನಾ ಸಂಸ್ಥೆ ಹಾಗೂ ಕುಕನೂರು ಧರಣಿ ಸಿರಿಧಾನ್ಯ ಉತ್ಪಾದಕರ ಕಂಪನಿ ನೇತೃತ್ವದಲ್ಲಿ ಸೌರಶಕ್ತಿ ಚಾಲಿತ ಈರುಳ್ಳಿ ಸಂಗ್ರಹಣೆ ಮತ್ತು ಒಣಗಿಸುವ ಘಟಕ ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನೆಗೊಳಿಸುವ ಘಟಕ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ಈ ಭಾಗದಲ್ಲಿ ರೈತರು ಸರ್ವಾಂಗೀಣ ಅಭಿವೃದ್ಧಿಗೊಳಿಸಲು ಪ್ರಾಮಾಣಿಕವಾಗಿ ಕಾರ್ಯ ಮಾಡಲಾಗುತ್ತದೆ. ಪ್ರತಿವರ್ಷವೂ ಹೆಚ್ಚಳವಾಗುತ್ತಿದೆ.ಆದರೆ ಕೃಷಿಕಡೆ ಹೆಚ್ಚಿನ ಆಧ್ಯತೆ ನೀಡಬೇಕು. ಉತ್ತಮ ಕೃಷಿ ಪ್ರಗತಿ ಕಾಣಲು ವಿನೂತನ ಪದ್ಧತಿ ಅಳವಡಿಸಿಕೊಳ್ಳಲು ಮುಂದಾಗಬೇಕು. ರೈತರು ಹೊಸ ಬೆಳೆಗಳನ್ನು ಬೆಳೆಯಲು ವಿಜ್ಞಾನಿಗಳ, ತಜ್ಞರ ಸಲಹೆ ಪಡೆಯಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿಗಳಿಗೆ ಜನರು ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಗ್ರಾಮದ ಮೈಸೂರುಮಠದ ಶ್ರೀವಿಜಯಮಹಾಂತ ಮಹಾ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಹುತೇಕ ರೈತರು ಸಿರಿಧಾನ್ಯ ಬೆಳೆಗಳತ್ತಾ ವಾಲಬೇಕಿದೆ. ಸರಕಾರ ನೀಡುವ ಆಹಾರದ ಕಡೆ ಹೆಚ್ಚು ಸೇವನೆ ಮಾಡಲಾಗಿದೆ.

ಪೂರ್ವಜರ ಕಾಲದ ಸಿರಿಧಾನ್ಯ ಬೆಳೆಯುವುದು, ಆಹಾರ ಸೇವನೆ ಬಹಳ ವಿರಳಾದಿವಿರಳ. ಅನ್ನದಾತರ ಎಲ್ಲ ಬೆಳೆಗಳನ್ನು ಬೆಳೆಸಲು ಮುಂದಾಗಬೇಕು. ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕಾಳಜಿ ವಹಿಸಿ ಆಡಳಿತ ನಡೆಸುವ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಂತ್ರಿಯಾಗಿದೇ ಇರುವುದು ಮತ ಕ್ಷೇತ್ರದಲ್ಲಿ ನೋವಿನ ಸಂಗತಿ. ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ದೊರೆಯಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರೀದಾಬೇಗಂ ಅಧ್ಯಕ್ಷತೆ ವಹಿಸಿದ್ದರು.ರಾಯಚೂರು ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ತಿಪ್ಪಣ್ಣ ಚವಡಿ, ಜಿಲ್ಲಾ ಕೃಷಿ ವಿಸ್ತಾರಣಾ ಶಿಕ್ಷಣ ಕೇಂದ್ರದ ಪ್ರಾಧ್ಯಾಪಕ ಡಾ.ಎಂ.ವಿ.ರವಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ರುದ್ರೇಶಪ್ಪ ಟಿ.,ಎಸ್., ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ್, ವಿಜ್ಞಾನಿ ಡಾ.ವಾಮನಮೂರ್ತಿ, ದಳಪತಿ ಹಮನಗೌಡ ಗೌಡ್ರ, ಹಾಪಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಿ.ಪಂ.ಮಾಜಿ ಸದಸ್ಯರಾದ ಮಹೇಶ ಹಳ್ಳಿ, ಅಶೋಕ ತೋಟದ್, ಶ್ರೇಷ್ಠ ಕೃಷಿಕ ಪಂಡಿತ ಪ್ರಶಸ್ತಿ ಪುರಸ್ಕೃತ ಹಾಗೂ ಪ್ರಗತಿಪರ ರೈತ ಸುರೇಶ ಚೌಡ್ಕಿ, ಮುಖಂಡರಾದ ರಾಮಪ್ಪ, ಫಕೀರಪ್ಪ, ತ್ರೀನಾಥರಡ್ಡಿ ಸೇರಿದಂತೆ ರೈತ ಮುಖಂಡರು ಹಾಗೂ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!