4

ಪಂಪಾಸರೋವರದಲ್ಲಿ ನಾಯಿ ಹೊತ್ತೊಯ್ದ ಚಿರತೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 12- ತಾಲೂಕಿನ ಆನೆಗೊಂದಿ ಭಾಗದ ಪುರಾಣ ಪ್ರಸಿದ್ದ ಏಳು ಸರೋವರಗಳಲ್ಲಿ ಶ್ರೇಷ್ಠವಾದ ರಾಮಾಯಣ ಕಾಲದ ಪಂಪಾಸರೋವರದಲ್ಲಿ ಚಿರತೆ ಪ್ರತ್ಯಕ್ಷವಾಗಿ ನಾಯಿ ಮೇಲೆ ದಾಳಿ ಮಾಡಿ ಹೊತ್ತೊಯ್ದ ಘಟನೆ ಜರುಗಿದೆ.

ವಿಜಯಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಮಲಗಿದ್ದ ನಾಯಿಯ ಮೇಲೆ ದಾಳಿ ಮಾಡಿದ ಚಿರತೆ, ನಾಯಿಯನ್ನು ಅಲ್ಲಿಂದ ಹೊತ್ತು ಬೆಟ್ಟದ ಕಡೆಗೆ ಒಯ್ದ ಘಟನೆ ದೇಗುಲದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ದೇವಸ್ಥಾನಕ್ಕೆ ಸಮೀಪದಲ್ಲಿರುವ ಬೆಟ್ಟದಿಂದ ಇಳಿದು ನಿಧಾನವಾಗಿ ಬರುವ ಚಿರತೆಯು, ದೇವಸ್ಥಾನದ ಆವರಣಕ್ಕ ಆಗಮಿಸುತ್ತದೆ. ಬಳಿಕ ಅಲ್ಲಿ ಮಲಗಿರುವ ನಾಯಿ ಮೇಲೆ ಏಕಾಏಕಿ ದಾಳಿ ಮಾಡುವ ದೃಶ್ಯ ಕ್ಯಾಮರದಲ್ಲಿ ಸೆರೆಯಾಗಿದೆ.
ದಿನ ನಿತ್ಯ ಪಂಪಾಸರೋವರಕ್ಕೆ ಬೇರೇ ರಾಜ್ಯಗಳಿಂದಲೂ ಸೇರಿ ಸಹಸ್ರರಾರು ಭಕ್ತರು ಆಗಮಿಸುತ್ತಾರೆ ಚಿರತೆ ಪ್ರತ್ಯೇಕ್ಷವಾಗಿರುವದರಿಂದ ಭಕ್ತರು ಆತಂಕಕ್ಕಿಡಾಗಿದ್ದಾರೆ. ಅರಣ್ಯ ಇಲಾಖೆಯವರ ಬೋನು ಅಳವಡಿಸಿ ಚಿರತೆ ಹಿಡಿಯಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!