ಸೇತುವೆ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ, ಕಾಮಗಾರಿಯಲ್ಲಿ ಗುಣಮಟ್ಟ ಪಾಲನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 12 ಹಲವಾರು ವರ್ಷಗಳಿಂದ ವೆಂಡಿAಗ್ ನಲ್ಲಿ ಇದ್ದ, ಕಾಕರ ತೋಟದಿಂದ ಮಿಂಚೇರಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ, ಇಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಭೂಮಿ ಪೂಜೆ ನೆರವೇರಿಸಿದರು.
ಶಾಸಕರ ವಿಶೇಷ ಅನುದಾನದಲ್ಲಿ ೮ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಈ ಸೇತುವೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಕಾಕರ್ಲಾ ತೋಟ ನಿವಾಸಿಗಳಿಗೆ ಬಳ್ಳಾರಿಗೆ ಬರಲು ಎಷ್ಟು ಅನುಕೂಲವಾಗುತ್ತದೆ ಎಂದರು.
ಹಿಂದಿನ ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಗೌರಿ ತ್ರಿವೇದಿಯವರು ಎಪಿಎಂಸಿಯಿAದ ಕಾಕರಲ್ಲಿ ತೋಟಕ್ಕೆ ತರಲು ಒಂದು ಸಣ್ಣ ಸೇತುವೆಯಲ್ಲಿ ನಿರ್ಮಿಸಿದ್ದರು ಎಂದು ಹೇಳಬಹುದು. ದಾರ ಬರುತ್ತೆ ರೆಡ್ಡಿ ಅವರು ಈ ವಿಷಯದ ಮೇಲೆ ಪ್ರತ್ಯೇಕ ಗಮನವನ್ನು ಹರಿಸಿ ಜನರ ಅನುಕೂಲಕ್ಕಾಗಿ ಕೈಗೊಳ್ಳುವ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟ ಪಾಲನೆ ಮಾಡಬೇಕೆಂದು, ಪಾಲಿಕೆಯ ಇಂಜಿನಿಯರ್ಗಳು ಮತ್ತು, ಗುತ್ತಿಗೆದಾರರಿಗೆ ಯೋಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯಡಿಜಿ ಡಿ.ಸುಕುಂ, ಐದನೇ ವಾರ್ಡಿನ ಸದಸ್ಯ ರಾಜಶೇಖರ್, ಪಾಲಿಕೆ ಸದಸ್ಯ ಪ್ರಬಂಧ ಕುಮಾರ್ ಮುಂಡ್ಲೂರು, ವಿಜಯಕುಮಾರ್ ಕನಗೋಲು, ಸೋದೇನಾರಾಯಣ ಕಾಕರತೋಟ, ಮಲ್ಲಿಕಾರ್ಜುನ ಡಾಬಾ, ಹರಿಕೃಷ್ಣ ನಾರಾಯಣಸ್ವಾಮಿ, ಕಾಕರ ತೋಟ ವೀರೇಶ್ ನಾಗರಾಜ್ ಸೇರಿದಂತೆ ನಿವಾಸಿಗಳು ಪಾಲ್ಗೊಂಡಿದ್ದರು.
