ಶ್ರೀಶ್ರೀ 1008 ವಿದ್ಯಾಸಂಪೂರ್ಣ ತಿರ್ಥರ 133ನೇ ಆರಾಧನಾ ಮಹೋತ್ಸವ
ಕರುನಾಡ ಬೆಳಗು ಸುದ್ದಿ
ತಾವರಗೇರಾ, 12- ಪಟ್ಟಣದ ಸಮೀಪದ ಶ್ರೀಕ್ಷೇತ್ರ ಗೊರಲೂಟಿ ಗ್ರಾಮದಲ್ಲಿ ದಿ.೧೩-೦೯-೨೦೨೪ರಿಂದ ೧೬-೦೯-೨೦೨೪ರವರೆಗೆ ಶ್ರೀಶ್ರೀ೧೦೦೮ ವಿದ್ಯಾಸಂಪೂರ್ಣ ತಿರ್ಥರ ಆರಾಧನೆ ನಡೆಯಲಿದೆ.
ಕನಕಗಿರಿ ಹನುಮಂತಾಚಾರ್ಯ ಎಂಬುದು ಇವರ ಪುರ್ವಾಶ್ರಮದ ನಾಮಧೇಯ, ಕಾಶ್ಯಪ ಗೊತ್ರೋತ್ಪನ್ನರಾದ ಕನಕಗಿರಿಯ ಗುರುರಾಜಾಚಾರ್ಯ ಜೇಷ್ಟ ಪುತ್ರರು. ಪುಜ್ಯ ಹನುಮಂತಾಚಾರ್ಯರು ಶಾ.ಶ.೧೭೮೮(ಕ್ರಿ.ಶ.೧೮೬೬)ರಲ್ಲಿ ಯತ್ಯಾಶ್ರಮವನ್ನು ಸ್ವೀಕರಿಸಿ ಕಣ್ವ ಮಠದ ಪೀಠಾರೋಹಣ ಮಾಡಿದ ಇವರು ರತ್ನ ಪಂಚಕವೆಂಬ ವಿದ್ವತ್ಪೂರ್ಣವಾದ ಗ್ರಂಥವನ್ನು ರಚಿಸಿದರು. ಇದರಲ್ಲಿ ಮಾಧವತಿರ್ಥಾದಿ ಗುರುಪರಂಪರಾಗತ ಕಾಲ ನಿರ್ಣಯ ಸ್ತೋತ್ರವು ಇರುವುದು.
ಇವರು ಮುಂಬಯಿ, ಸೊಲ್ಲಾಪೂರ, ಪಂಡರಪುರ ಮತ್ತು ಅಲ್ಲಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಹಾಗು ಕರ್ನಾಟಕದ ಧಾರವಾಡ ಜಿಲ್ಲೆಯ ಹಾವೇರಿ, ಹಾನಗಲ್ಲ ಅಗಡಿ, ಅನವಟ್ಟಿ ಮುಂತಾದ ಕಡೆಗಳಲ್ಲಿ ಸಂಚರಿಸಿದರು. ಅಗಡಿಯ ಬಹದ್ದೂರ ದೇಶಾಯಿ ದೊರೆಗಳಂತೂ ಸಕಲ ಬ್ರಹ್ಮವೃಂದದಿಂದ ಕುಡಿಕೊಂಡು ರಾಜವೈಭವದಿಂದ ಶ್ರೀಗಳನ್ನು ಬರಮಾಡಿಕೊಂಡು ತಮ್ಮವಾಡೆಯಲ್ಲಿ ಶ್ರೀಗಳವರ ಪೂಜೆ ಭಿಕ್ಷೆಗಳಿಗೆ ಸಂಬ್ರಮದ ಏಪ್ರಾಡು ಮಾಡಿದರು.
ಅನವಟ್ಟ ಸಂಚಾರ ಮುಗಿಸಿಕೊಂಡು ವೀರಘಟ್ಟ ಹುಣಸಿಹೊಳೆಗೆ ತೆರಳಿದರು, ಅಲ್ಲಿ ಕೆಲಕಾಲ ಕಳೆದು ಶಿಷರ ಆಗ್ರಹದ ಅಮಂತ್ರಣದ ಮೇರೆಗೆ ರಾಯಚುರು ಜಿಲ್ಲೆ ಸಿಂಧನೂರು ತಾಲುಕಿನ ಗೊರಲೂಟಿ ಗ್ರಾಮಕ್ಕೆ ಆಗಮಿಸಿದರು.
ಅಲ್ಲಿಯೇ ಶ್ರೀವಿದ್ಯಾಧಿರಾಜತಿರ್ಥರೆಂಬುವವರಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟು ಮಠದಾಡಳಿತವನ್ನ ಒಪ್ಪಿಸಿ ಮುಂದೆ ಶಾ.ಶ. ೧೮೧೦ (ಕ್ರಿ.ಶ.೧೮೮೮) ಸರ್ವಧಾರಿನಾಮ ಸಂವತ್ಸರ ಭಾದ್ರಪದ ಶುಕ್ಲ ಪಕ್ಷ ಏಕಾದಶಿ ದಿವಸ ಹರಿಪಾದವನ್ನು ಸೇರಿದರು.
ಆರಾಧನೆ ನಿಮಿತ್ಯ ೧೩/೦೯/೨೦೨೪ರಂದು ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಹೋಮ ೧೪ರಂದು ಸಾಯಂಕಾಲ ಪ್ರವಚನ ಭಜನಾ ಕಾರ್ಯಕ್ರಮ, ೧೫ರಂದು ಸಾಯಂಕಾಲ ಪಾಲಕಿಸೇವೆ, ನಂತರ ಶ್ರೀ ವೇ.ಮೂ. ಪಾಂಡುರAಗ ಆಚಾರ ಕನಸಾವಿ ಇವರಿಂದ ಭಾಗವತ ಪ್ರವಚನ. ೧೬ ರಂದು ಮಧ್ಯಾರಾಧನೆ ರತೋತ್ಸವ, ನೈವೆದ್ಯ, ಅಲಂಕಾರ ಭೋಜನ, ಹಸ್ತೋದಕ, ಮಹಾಮಂಗಳಾರತಿ, ತಿರ್ಥ ಪ್ರಸಾದ, ರಾತ್ರಿ ಅಷ್ಟಾವಧನ ಸೇವೆ ನಡೆಯುತ್ತವೆ ಭಕ್ತರು ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿದ್ಯಾಸಂಪೂರ್ಣ ತಿರ್ಥರ ಸೇವಾ ವಿಶ್ವಸ್ಥ ಸಮೀತಿ ವಿನಂತಿಸಿಕೊAಡಿದೆ.
