3

ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 14- ದೇಶಾದ್ಯಂತ ಮುಸಲ್ಮಾನರನ್ನು ದುರ್ಬಲಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟದ ಎನ್‌ಡಿಎ ಸರ್ಕಾರ ಪ್ರಯತ್ನಿಸುತ್ತಿದೆ ವಕ್ಫ್ ಕಾಯ್ದೆ ಹೊಸ ತಿದ್ದುಪಡಿಯಲ್ಲಿ ಮುಸಲ್ಮಾನರ ಹಕ್ಕುಗಳನ್ನು ಮೊಟಕು ಗೊಳಿಸುವ ಹುನ್ನಾರ ಅಡಗಿದೆ ಇದು ಸಂವಿಧಾನ ವಿರೋಧಿಯಾಗಿದೆ ಎಂದರು.

ದುರುದ್ದೇಶ ಪೂರಿತ ಹೆಜ್ಜೆಯಾಗಿದ್ದು ಕೇಂದ್ರೀಯ ಮತ್ತು ಇತರ ಸಂಸ್ಥೆಗಳಲ್ಲಿ ಮುಸ್ಲಿಮೇತರರನ್ನು ನೇಮಿಸುವುದು ಮುಸಲ್ಮಾನರ ಹಕ್ಕುಗಳನ್ನು ಉಲ್ಲಂಘನೆಯಾಗಿದೆ ವಕ್ಫ್ ಕಾಯ್ದೆ ತಿದ್ದುಪಡಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸು ಪಡೆಯಬೇಕು ರಾಜ್ಯ ಸರ್ಕಾರ ಸಹ ಮುಂದಿನ ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳಿಸಬೇಕು ಎಂದು ರಾಷ್ಟ್ರೀಯ ಸಾಕ್ಷರತಾ ಸದಸ್ಯ ಕರ್ನಾಟಕ ವಕ್ಫ್ ಬೋರ್ಡ್ ಬಳ್ಳಾರಿ ಜಿಲ್ಲಾ ಮಾಜಿ ಸದಸ್ಯ ಜನ ಅಭಿಪ್ರಾಯ ಮುಖಂಡ ಹಾಜಿ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಜಿಲ್ಲಾ ವಕ್ಫ್ ಮಾಜಿ ಉಪಾಧ್ಯಕ್ಷರಾದ ಹಾಜಿ ಸೈಯದ್ ಮೋಹಿದ್ದೀನ್ ಖಾದ್ರಿ ಸರ್ ಖಾಜಿ ಸೈಯದ್ ಜಿಲಾನ್ ಪಾಶ ಖಾದ್ರಿ ಹಾಜಿ ಹಂಡಿ ಹುಸೇನ್ ಭಾಷಾ ಡಾ ಮಹಮ್ಮದ್ ಅಲಿ ಹಾಜಿ ಹಮೀದ್ ಫಾರೂಕಿ ಸಿರುಗುಪ್ಪ ತಾಲೂಕು ವಿವಿಧ ಮುಸ್ಲಿಂ ಸಂಸ್ಥೆಗಳ ಸಂಘಟನೆಯ ಒಕ್ಕೂಟದ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮಸೂದೆ ೨೦೨೪ ನ್ನು ಕೈ ಬಿಡುವಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರೆ ಟಿಕ್ ಆಫ್ ಇಂಡಿಯಾ ಸಾಂಕೇತಿಕವಾಗಿ ಪ್ರತಿಭಟಿಸಿ ಸಂಸತ್ ಕಮಿಟಿ ಅಧ್ಯಕ್ಷರಿಗೆ ಬರೆದ ಮನವಿ ಪತ್ರವನ್ನು ಸಿರುಗುಪ್ಪ ತಾಲೂಕು ತಹಶೀಲ್ದಾರ್ ಕಚೇರಿಗೆ ತೆರಳಿ ಎಸ್‌ಡಿಪಿಐ ತಾಲೂಕ ಅಧ್ಯಕ್ಷ ಖಾಜಾಮೋದಿನ್ ಅತವುಲ್ಲಾ ಖಾಜಾ ಸಲೀಂ ಹುಸೇನ್ ಜಿಲಾನ್ ಭಾಷಾ ಎಸ್‌ಡಿಪಿಐ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಮತ್ತಿತರ ಸಮ್ಮುಖದಲ್ಲಿ ತಹಸಿಲ್ದಾರ್ ಅವರ ಶಿರಸ್ತೆದಾರ ರಾಘವೇಂದ್ರ ನವರ ಮೂಲಕ ಜಂಟಿ ಪಾರ್ಲಿಮೆಂಟ್ ಸಮಿತಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವಕ್ಫ್ ಆಸ್ತಿ ಸಾರ್ವಜನಿಕ ಆಸ್ತಿ ಅಲ್ಲ ಮುಸ್ಲಿಂ ಸಮುದಾಯ ಕಲ್ಯಾಣಕ್ಕೆ ದಾನವಾಗಿ ಪ್ರಮುಖ ಗಣ್ಯ ವ್ಯಕ್ತಿಗಳು ನೀಡಿದ ಜನ ಸದೃಢ ರಾಗಲು ಅಭಿವೃದ್ಧಿಗಾಗಿ ಉದ್ದೇಶದಿಂದ ಮಾರ್ಪಾಡಾಗಿ ಸಂಪನ್ಮೂಲವಾಗಿ ವಿನಹ ಯಾರಿಂದಲೂ ಇದನ್ನು ಕಿತ್ತುಕೊಂಡದ್ದಲ್ಲ ವಕ್ಫ್ ಆಸ್ತಿ ಇದಾಗಿದೆ ಮುಸ್ಲಿಂ ಸಮುದಾಯದ ಕ್ಷೇಮಾಭಿವೃದ್ಧಿಗೆ ಇರುವ ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ ಬಿಜೆಪಿ ಪಕ್ಷದ ಅಜಂಡ ಆಗಿರುತ್ತದೆ ಇದು ಜಾತ್ಯತೀತ ಮೌಲ್ಯಗಳ ವಿರುದ್ಧವಾಗಿದೆ ಮನವಿ ಪತ್ರದಲ್ಲಿ ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!