ಕೊಪ್ಪಳ : ಐಟಿಐ ವಿಧ್ಯಾರ್ಥಿಗಳಿಗೆ ಸಂದರ್ಶನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 15- ಇದೇ ಸೆ, 19 ಗುರುವಾರ ದಂದು ಬೆಳಿಗ್ಗೆ 10.30 ಕ್ಕೆ ಕೊಪ್ಪಳದಲ್ಲಿ ಕ್ಯಾಂಪಸ್ ಸಂದರ್ಶ ಜರುಗಲಿದೆ.
ಈ ಸಂದರ್ಶನವು ನಗರದ S G GUNJ (APMC) ಕೊಪ್ಪಳದಲ್ಲಿರುವ ಸರ್ವೋದಯ ರೂರಲ್ ಕೈಗಾರಿಕಾ ತರಬೇತಿ ಸಂಸ್ಥೆ (ITI) ಯಲ್ಲಿ ಕೊಪ್ಪಳ ಜಿಲ್ಲೆಯ ಗಿಣಿಗೇರಾದ ಬೇವಿನಹಳ್ಳಿಯಲ್ಲಿರುವ ಮೆ: ಕಿರ್ಲೊಸ್ಕರ ಫೇರಸ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ರವರಿಂದ ಶಿಶುಕ್ಷು ತರಬೇತಿ (ಅಪರೆಂಟಿಶಿಪ್ ಟ್ರೈನಿಂಗ್) ಗಾಗಿ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಂಡಿದೆ.
ಸದರಿ ಸಂದರ್ಶನದಲ್ಲಿ ಕರ್ನಾಟಕ ರಾಜ್ಯದ್ಯಂತ ವಿವಿಧ ಸರಕಾರಿ/ ಅನುದಾನಿತ/ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಟರ್ನರ್, ಎಂ. ಎಂ. ವಿ, ಮೆಕ್ಯಾನಿಕ್ ಡೀಸೆಲ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಮತ್ತು ವೆಲ್ಡರ್ ವೃತ್ತಿಗಳಲ್ಲಿ 2022 & 2023 ನೇ ಸಾಲಿನ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಪಾಸಾದ ಮತ್ತು ಪ್ರಸ್ತುತ ಅಗಸ್ಟ್ 2024 ರಲ್ಲಿ AITT ( ITI ) ಪರೀಕ್ಷೆ ಬರೆದಂತಹ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು. ಹಾಜರಾಗುವ ಅಭ್ಯರ್ಥಿಗಳು 18 ರಿಂದ 23 ವರ್ಷದವರಾಗಿರಬೇಕು. ಕಾರಣ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಜಾತಿ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡುಗಳ ಎರಡು ಜೆರಾಕ್ಸ್ ಪ್ರತಿಗಳು ಹಾಗೂ ಐದು ಪಾಸ್ಪೋರ್ಟ್ ಸೈಜ್ ಫೋಟೋಗಳೊಂದಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8105369692 ಸಂಪರ್ಕಿಸಲು ಕೋರಲಾಗಿದೆ.
