ಕುಂಭದೊಂದಿಗೆ ಗಣೇಶ ವಿರ್ಸಜನೆ ಮಾಡಿರುವುದು ಅರ್ಥಪೂರ್ಣ : ಶಾಸಕ ಜನಾರ್ಧನರೆಡ್ಡಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 18- ನಗರದ ಗುಂಡಮ್ಮ ಕ್ಯಾಂಪ ಗಣೇಶ ವಿರ್ಸಜನೆ ಕಾರ್ಯ ಪಲ್ಲಕಿಯ ಮೂಲಕ ಪೂರ್ಣ ಕುಂಭದೋಂದಿಗೆ ಗಣೇಶ ವಿರ್ಸಜನೆ ಮಾಡಿರುವುದು ಅರ್ಥಪೂರ್ಣವಾಗಿದೆ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ನಗರದ ಸಿಬಿಎಸ್ ವೃತ್ತದಲ್ಲಿ ಗುಂಡಮ್ಮ ಕ್ಯಾಂಪ ಗಣೇಶ ವಿರ್ಸಜನೆ ಸಮಯದಲ್ಲಿ ಪಾಲಗೋಂಡು ಮಾತನಾಡಿ ಗಣೇಶ ಸರ್ವರಿಗೂ ಒಳಿತನ್ನು ಮಾಡುವ ದೇವರಾಗಿದ್ದಾನೆ. ಸರ್ವರು ಪಾಲಗೊಳ್ಳುವಂತೆ ಮಾಡಿದ್ದು ಶ್ಯಾಘನೀಯ ಎಂದರು.
ಈಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಘನಾಳ, ಮುಖಂಡ ಮನೋಹರಗೌಡ ಹೇರೂರ, ಅಲಿಖಾನ,ನಗರಸಭೆ ಸದಸ್ಯ ಅಜಯ ಬಿಚ್ಚಾಲಿ,ಕನ್ನಡಪರ ಸಂಘನೆಯ ವಿರುಪಾಕ್ಷಿಗೌಡ,ರೈತ ಸಂಘದ ದಳಪತಿ ದುರುಗಪ್ಪ ನಾಯಕ ಜೋಗದ ಮುಂತಾದವರು ಉಪಸ್ಥಿತರಿದ್ದರು.
