2c136fae-be38-4577-97e1-318669006cc9

ಅತಿಥಿ ಶಿಕ್ಷಕರ ಹುದ್ದೆ : ಅರ್ಜಿ ಆಹ್ವಾನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 18- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ೨೦೨೪-೨೫ ಸಾಲಿಗೆ ಬೋಧನೆಗಾಗಿ ಅನುಭವವುಳ್ಳ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ : ಬಿ.ಎ,ಬಿ.ಎಡ್ ವಿದ್ಯಾರ್ಹತೆ ಹೊಂದಿದ ಕನಿಷ್ಠ ೨ ವರ್ಷಗಳ ಅನುಭವ ಹೊಂದಿದ ಕನ್ನಡ ಶಿಕ್ಷಕ-೦೧, ಆಂಗ್ಲ ಶಿಕ್ಷಕ-೦೧, ಉರ್ದು ಶಿಕ್ಷಕ-೦೧, ಗಣಿತ ಶಿಕ್ಷಕ(ಬಿಎಸ್ಸಿ,ಬಿ. ಎಡ್)-೦೧ ಹಾಗೂ ಸಮಾಜ ವಿಜ್ಞಾನ ಶಿಕ್ಷಕ-೦೧ ಹುದ್ದೆಗಳಿಗೆ ಸೆಪ್ಟಂಬರ್ ೨೦ರೊಳಗಾಗಿ ಅರ್ಜಿ ಸಲ್ಲಿಸ ಬಹುದಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಕೊಪ್ಪಳ ತಾಲ್ಲೂಕಿನ ಲಿಂಗದಳ್ಳಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಖುದ್ದಾಗಿ ಬಂದು ಅಥವಾ ಇಮೇಲ್ ಟಿmmmಜಡಿsಞoಠಿಠಿಚಿಟ@gmಚಿiಟ.ಛಿom ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: ೯೦೩೬೩೨೬೮೩೯ ಗೆ ಸಂಪರ್ಕಿಸಬಹುದು ಎಂದು ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!