3

ಶೇಖರಗೌಡರು ಸಹಕಾರ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ ರಂಗದ ಶಿಖರವಿದ್ದಂತೆ : ಬಿ.ಕೆ.ಬೂತೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 23- ಕನಕಗಿರಿಯ ಹಿರಿಯ ಸಹಕಾರಿ ಧುರೀಣ ಶೇಖರಗೌಡ ಮಾಲಿಪಾಟೀಲ ನಮ್ಮ ಜಿಲ್ಲೆಯ ಸಹಕಾರ ರಂಗ, ರಾಜಕೀಯ ರಂಗ, ಶೈಕ್ಷಣಿಕ, ಸಾಮಾಜಿಕ ರಂಗದ ಶಿಖರವಿದ್ದಂತೆ ಎಂದು ನಿವೃತ್ತ ಹಿರಿಯ ಜಿಲ್ಲಾ ನ್ಯಾಯಾಧೀಶ ಬಿ.ಕೆ.ಬೂತೆ ಹೇಳಿದರು.

ಅವರು ಕನಕಗಿರಿಯಲ್ಲಿ ಸಹಕಾರಿ ಧುರೀಣ ಶೇಖರಗೌಡ ಐ.ಮಾಲಿಪಾಟೀಲ ಅವರ ಅಭಿನಂದನಾ ಗ್ರಂಥವಾದ ಸಜ್ಜನಿಕೆಯ ಶಿಖರ ಮತ್ತು ಸ್ವರಚಿತ ಕವನ ಸಂಕಲನ ಕನಕಾಂಬರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಶೇಖರಗೌಡರು ಮುಖ್ಯವಾಗಿ ನಮ್ಮ ಸಹಕಾರ ರಂಗದಲ್ಲಿ ಅದರಲ್ಲೂ ವಿಶೇಷವಾಗಿ ಹಿಂದುಳಿದ ಕನಕಗಿರಿ ತಾಲೂಕಿನಲ್ಲಿ ಸಹಕಾರಿ ರಂಗ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಂಸದ ಎಸ್.ಶಿವರಾಮೇಗೌಡರು ಮಾತನಾಡಿ, ಇಂದು ಕಲುಷಿತಗೊಂಡಿರುವ ರಾಜಕಾರಣದಲ್ಲಿ, ಶೇಖರಗೌಡರು ತಮ್ಮ ಜೀವನದ ರಾಜಕೀಯುದ್ದಕ್ಕೂ ಪ್ರಾಮಾಣಿಕತೆ ಸರಳತೆಯನ್ನು ಮೈಗೂಡಿಸಿಕೊಂಡವರು. ಇವರಿಗೆ ಶಾಸಕರಾಗುವ ಯೋಗದಿಂದ ವಂಚಿತರಾಗಬೇಕಾಯಿತು. ಆದರೂ ಅವರು ಹತಾಶರಾಗದೇ ರಾಜಕಾರಣದಲ್ಲಿ ಗುರುತಿಸಿಕೊಂಡರು ಎಂದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮಾತನಾಡಿ, ಶೇಖರಗೌಡರ ಸಂಬ0ಧಿ ಕುಟುಂಬದವರು ಜಿಲ್ಲೆಯಲ್ಲಿಯೇ ಜನಪರ, ಜೀವಪರ ಅಭಿವೃದ್ಧಿಪರ ಕಾರ್ಯಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ ಎಂದರು.

ಗ್ರ0ಥ ಬಿಡುಗಡೆ ಮಾಡಿದ ಕನಕಗಿರಿಯ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಸ್ವಾಮೀಜಿಗಳಾದ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ಶೇಖರಗೌಡರು ಪಾದರಸದಂತಹ ವ್ಯಕ್ತಿತ್ವವುಳ್ಳವರು. ತಮ್ಮ 20 ರ ವಯಸ್ಸಿನಲ್ಲಿಯೂ ಯುವಕರು ನಾಚುವಂತೆ ಕಾರ್ಯ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಬೃಹನ್ಮಠದ ಸೂಳಿಕೆರಿಯ ಭುವನೇಶ್ವರ ತಾತನವರು. ರಾಜರಾಜೇಶ್ವರಿ ಅರಳಿಹಳ್ಳಿ ಮಠದ ಗವಿಸಿದ್ಧಯ್ಯ ಸ್ವಾಮಿಗಳು, ಗೊರೆಬಾಳ ಕ್ಯಾಂಪಿನ ಮರುಳಸಿದ್ದೇಶ್ವರ ಮಠದ ಸಿದ್ದಯ್ಯ ಸ್ವಾಮಿಗಳು, ಕನಕಗಿರಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಸುಲೋಚನಾ ಜೀ ಯವರು, ಮೊಳಕಾಲ್ಮುರಿನ ಕರಡಿಹಳ್ಳಿಯ ಚನ್ನಬಸವ ಸ್ವಾಮಿಗಳು ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿ.ಬಿ.ಚಿಲ್ಕರಾಗಿ ಕೃತಿ ಕುರಿತು ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ ಸಜ್ಜನಿಕೆಯ ಶಿಖರ ಕೃತಿಯ ಪ್ರಧಾನ ಸಂಪಾದಕ ಎಸ್.ವಿ.ಪಾಟೀಲ ಗುಂಡೂರು, ಕೆ.ಎಸ್.ಆಸ್ಪತ್ರೆ ಮುಖ್ಯಸ್ಥ ಡಾ.ಬಸವರಾಜ ಕ್ಯಾವಟರ, ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಶ್ರೀಶೈಲ ಬಿರಾದಾರ, ಬೆಂಗಳೂರಿನ ನವೋದಯ ವಿದ್ಯಾಲಯದ ಇಂಗ್ಲೀಷ್ ಅಧ್ಯಾಪಕ ಎಂ.ಪ್ರಲ್ಹಾದ, ಸಂಪಾದಕೀಯ ಮಂಡಳಿಯ ದುರ್ಗಾದಾಸ ಯಾದವ, ಸಂಪಾದಕರಾದ ದಿವ್ಯಾ ಶರಣಬಸವ ಗಂಗನಗೌಡರ, ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಗಂಗಾಧರಸ್ವಾಮಿ, ಸಂಪಾದಕೀಯ ಮಂಡಳಿಯ ಸ.ಶರಣಪ್ಪ ಪಾಟೀಲ, ಮನೋಹರ ಬೋಂದಾಡೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶೇಖರಗೌಡ ಮಾಲಿಪಾಟೀಲ ಮತ್ತು ನೀಲಮ್ಮ ದಂಪತಿಯನ್ನು ವಿವಿಧ ಗಣ್ಯರು ಸನ್ಮಾನಿಸಿದರು. ಅಲ್ಲಾಗಿರಿರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಗಂಗಾಧರಸ್ವಾಮಿ ಸ್ವಾಗತಿಸಿದರು. ಮಹಿಬೂಬ ಹುಸೇನ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!