5 (2)

ಅಂಗನವಾಡಿ ಮೇಲ್ಛಾವಣಿ ಕುಸಿದು ನಾಲ್ಕು ಮಕ್ಕಳು ಆಸ್ಪತ್ರೆಗೆ ದಾಖಲು

ಕರುನಾಡ ಬೆಳಗು ಸುದ್ದಿ
ಗಂಗಾವತಿ, 23- ನಗರದ ಮಹಿಬೂಬ ನಗರ  ೭ವಾರ್ಡಿನ ೧೧ನೇ ಅಂಗನವಾಡಿ ಕೇಂದ್ರದಲ್ಲಿ ಮೇಲ್ಛಾವಣಿ  ಕುಸಿದು ಬಿದ್ದು ನಾಲ್ಕು ಮಕ್ಕಳು ಗಾಯಗೊಂಡು ಸಾರ್ವಜನಿಕ ಉಪ ವಿಭಾಗ ಆಸ್ಪತ್ರೆ ಗೆ ದಾಖಲಾದ ಘಟನೆ  ನಗರ ಪೋಲಿಸಠಾಣೆಯಲ್ಲಿ ಜರುಗಿದೆ.
ಅಂಗನವಾಡಿ ಕೇಂದ್ರದಲ್ಲಿ ಬೆಳ್ಳಿಗ್ಗೆ 20ಕ್ಕೂ ಹೆಚ್ಚು ಮಕ್ಕಳು ಆಟವಾಡುತ್ತಿದ್ದರು. ಅದರಲ್ಲಿ ಸುರಕ್ಷಾ,ಮನ್ವಿತ,ಮರ್ದಾನ,ಅಮನ್ ಎಂದು ಗುರುತಿಸಲಾಗಿದೆ.
ನಗರಸಭೆಯ ಅಧ್ಯಕ್ಷ ಮೌಲಾಸಾಬ್ ಮಾತನಾಡಿ ಶಾಸಕ ಗಾಲಿ ಜನಾರ್ಧನರೆಡ್ಡಿ ರವರ ಗಮನಕ್ಕೆ ತರಲಾಗಿದೆ.ಸರಕಾರದಿಂದ ಪರಿಹಾರಕ್ಕೆ ಒತ್ತಾಯಿಸಲಾಗುವುದು.
ಅಂಗನವಾಡಿ ಕಟ್ಟಡ ಕಟ್ಟಿದ ಗುತ್ತೆದಾರನ ಬಗ್ಗೆ ತಿಳಿದುಕೋಂಡು ಕ್ರಮಕ್ಕೆ ಪೌರಾಯುಕ್ತರಿಗೆ ಸೂಚಿಸಲಾಗಿದೆ.  ವಾರ್ಡ್ ಸದಸ್ಯ ಮನೋಹರಸ್ವಾಮಿ ಮುದೆನೂರ,  ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ, ತಾಲೂಕ ಪಂಚಾಯತ ಇಓ ಲಕ್ಷ್ಮಿ ದೇವಿ, ಸಿಡಿಪಿಓ ಜಯಶ್ರೀ ರಾಜಪುರೋಹಿತ,  ಮೇಲ್ವಿಚಾರಕಿ ಚಂದ್ರಮ್ಮ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಹಸಿನಾ,ನಗರಸಭೆ ಸದಸ್ಯರುಗಳಾದ ರಮೇಶ ಚೌಡ್ಕಿ,ಅಜಯ ಬಿಚ್ಚಾಲಿ ಉಪಸ್ಥಿತರಿದ್ದರು.
ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷ ದುರುಗಮ್ಮ,ಎಸ್.ಎಫ್.ಐ ಅಧ್ಯಕ್ಷ ಗ್ಯಾನೇಶ ಕಡಗದ ಮಾತನಾಡಿ, ನಗರದ ೧೧ನೇ ಅಂಗನವಾಡಿ ಕೇಂದ್ರದ ಕಟ್ಟಡವು ಕೇವಲ ೭ ವರ್ಷದ ಹಿಂದೆ ನಿರ್ಮಿಸಿದ್ದು, ಕೆಲವೇ ವರ್ಷಗಳಲ್ಲಿ ಮೇಲ್ಛಾವಣಿ ಕುಸಿದಿರುವುದು ಗುತ್ತರದಾರ ಬೆಜವಾಬ್ದಾರಿ ಕೆಲಸ ಕಳಪೆ ಕೂಡಿದೆ. ಈ ತಕ್ಷಣವೇ ಗುತ್ತೆದಾರನ ಮೇಲೆ ಕ್ರಮ ಜರುಗಿಸಬೇಕು ಸರಕಾರದಿಂದ ಪರಿಹಾರ ಕ್ಕೆ ಮುಂದಾಗ ಬೇಕು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!