1

ಊಟಕ್ಕೆ ಪರದಾಡಿದ ಕ್ರೀಡಾಪಟುಗಳು ಕಾಟಾಚಾರಕ್ಕೆ ನಡೆದ ದಸರಾ ಕ್ರೀಡಾಕೂಟ

ಕರುನಾಡ ಬೆಳಗು ಸುದ್ದಿ

ಕುಕನೂರು, ೨೩- ತಾಲೂಕಿನ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆ, ಕುದುರೆಮೋತಿಯಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತಿ ಕೊಪ್ಪಳ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕೊಪ್ಪಳ ಹಾಗೂ ಶ್ರೀ ಕೂಡಲ ಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ರೀ,ಬೇವೂರ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕುಕನೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಕಾಟಾಚಾರಕ್ಕೆ ಮಾತ್ರ ನಡೆದಿದೆ.

ಏಕಾಏಕಿ ಕ್ರೀಡಾಕೂಟ ಏರ್ಪಡಿಸುವುದರಿಂದ ಪ್ರಚಾರವು ಸಿಗದೇ ತಾಲೂಕಿನ ೧೨ ಗ್ರಾಮ್ ಪಂಚಾಯತಿಗಳು ಕೂಡ ಮಾಹಿತಿ ನೀಡಿಲ್ಲ ಎಂಬ ದೂರುಗಳು ಕೇಳಿ ಬಂದವು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲದ ಕಾರಣ ಕ್ರೀಡಾ ಚಟುವಟಿಕೆಗಳಿಲ್ಲದೆ ಕ್ರೀಡಾಂಗಣ ಬಿಕೋ ಎನ್ನುತ್ತಿದ್ದು ಕ್ರೀಡಾ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಮನ್ವಯ ಕೊರತೆಯಿಂದ ಖಾಸಗಿ ದೈಹಿಕ ಶಿಕ್ಷಕರ ಬಳಕೆ ಮಾಡಲಾಗಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಸರಿಯಾದ ರೀತಿಯ ಊಟದ ವ್ಯವಸ್ಥೆ ಕೂಡ ಕ್ರೀಡಾಪಟುಗಳಿಗೆ ಇಲ್ಲ ಒಟ್ಟಾರೆಯಾಗಿ ಹೇಳುವುದಾದರೆ ಇಲಾಖೆ ಹಣವನ್ನು ಆಯೋಜಕರು ಮತ್ತು ಯುವಜನ ಕ್ರೀಡಾ ಇಲಾಖೆ ಅವರು ನುಂಗಿ ನೀರು ಕುಡಿಯುತ್ತಿದ್ದಾರೆ ಎಂದು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಾವುದೇ ಇಲಾಖೆಗಳಿಗೂ ಮಾಹಿತಿ ನೀಡದೆ ಕ್ರೀಡೆಯನ್ನು ಆಯೋಜನೆ ಮಾಡಿದ್ದು ಕೂಡ ಅಧಿಕಾರಿ ವರ್ಗದವರಿಂದ ಕೇಳಿ ಬರುತ್ತಿರುವ ಮಾಹಿತಿ. ಊಟದ ವ್ಯವಸ್ಥೆಯು ಕೂಡ ಸರಿಯಾದ ರೀತಿಯಲ್ಲಿ ಆಗದ ಕಾರಣ ಕ್ರೀಡಾಪಟುಗಳು ಊಟಕ್ಕೆ ಪರದಾಡಿದ್ದಾರೆ.

ಸರ್ಕಾರ ಮತ್ತು ಇಲಾಖೆಯಿಂದ ಬರುವ ಅನುದಾನವನ್ನು ಏನು ಮಾಡುತ್ತಿದ್ದಾರೆ ಎಂಬುದು ಕೂಡ ಯಾರಿಗೂ ತಿಳಿಯುತ್ತಿಲ್ಲ ಸಂಬAಧಪಟ್ಟ ಕ್ರೀಡಾ ಇಲಾಖೆಯು ಕೂಡ ಇತ್ತ ಕಡೆ ಗಮನ ಹರಿಸಲಿಲ್ಲ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಭಾಗವಹಿಸಬೇಕಾದ ಈ ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿಲ್ಲ ಪ್ರಶಸ್ತಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ ಮತ್ತು ದೈಹಿಕ ಶಿಕ್ಷಕರ ಕೊರತೆ ಕೂಡ ಕಾಡಿದೆ ಸಂಬAಧಪಟ್ಟ ಅಧಿಕಾರಿಗಳು ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!