9

ನಮ್ಮ ಸಮಾಜ ಹಿಂದುಳಿದ್ದು ಸರ್ಕಾರಿ ಸೌಲಭ್ಯಗಳು ಪಡೆಯುವಲ್ಲಿ ವಿಫಲರಾಗದಿರಿ : ಕಲೀಲ್‌ಸಾಬ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 23-  ಕರ್ನಾಟಕ ರಾಜ್ಯದ ನದಾಫ್ ಪಿಂಜಾರ ಸಂಘ ಜಿಲ್ಲಾ ಘಟಕ ಬಳ್ಳಾರಿ ವತಿಯಿಂದ ನಗರದ ಅನಂತಪುರ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಾಧಕರಿಗೆ ಸನ್ಮಾನ ಮತ್ತು ಸಮಾಜದ ಅಧಿಕಾರಿಗಳಿಗೆ ಗೌರವ ಸಮರ್ಪಣೆ ಹಾಗೂ ಜಿಲ್ಲಾ ಮಹಿಳಾ ಘಟಕವನ್ನು ಅವಿರೋಧವಾಗಿ ಆಯ್ಕೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಹಾನಗರ ಪಾಲಿಕೆ ಆಯುಕ್ತ ಮಾತನಾಡಿ, ನಮ್ಮ ಸಮಾಜ ಬಹಳ ಹಿಂದುಳಿದ್ದು ಸರ್ಕಾರಿ ಸೌಲಭ್ಯಗಳು ಪಡೆಯುವಲ್ಲಿ ವಿಫಲರಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.
ಮಹಾಪೌರರಾದ ಮುಲ್ಲಂಗಿ ನಂದೀಶ್ ಮಾತನಾಡಿ, ಸಮಾಜದ ಕಚೇರಿ ಕಟ್ಟಲಿಕ್ಕೆ ಅವಕಾಶವಿದ್ದಲ್ಲಿ ಅನುದಾನ ನೀಡುವುದಾಗಿ ಘೋಷಿಸಿದರು.

ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಅಮಿನಾಬಿ ಮತ್ತು ಅವರ ತಂಡದವರು ಅವಿರೋಧವಾಗಿ ಆಯ್ಕೆಯಾದರು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಘಟಕ ಸಂಘಟನೆ ನಡೆಯಲೆಂದು ಈ ಮೂಲಕ ಸಭೆಯ ನಿರ್ಣಯಿಸಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಆಯುಕ್ತ ಪಿಂಜಾರ ಸಮುದಾಯದ ಕಲೀಲ್‌ಸಾಬ್ ಹಾಗೂ ವಿಶೇಷ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಮಹಾಪೌರ ಮುಲ್ಲಂಗಿ ನಂದೀಶ್, ಎಲ್ಲ ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು, ವಿಭಾಗಿಯ ಉಪಾಧ್ಯಕ್ಷರು ಹಾಗೂ ರಾಜ ಕಾರ್ಯಕಾರಿ ಸಮಿತಿ ಸದಸ್ಯರು, ಪಿ.ಅಲ್ಲಾಬಕಶ್ ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಪಿ.ಮೌಲಾಲಿ ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!