4

ರಾಜೀವ್ ಗಾಂಧಿವಸತಿ ನಿಗಮದ ಪ್ರಯೋಜನ ಪಡೆದುಕೋಳ್ಳಿ : ಲಕ್ಸ್ಮಿದೇವಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 26- ರಾಜೀವ ಗಾಂಧಿ ವಸತಿ ನಿಗಮದ ಪ್ರಯೋಜನ ಪಡೆದುಕೋಳ್ಳಿ,ಫಲಾನುಭವಿಗಳಿಗೆ ತಲುಪಿಸಲು ಮುಂದಾಗಿ ಎಂದು ನಿಗಮದ ಅಧಿಕಾರಿ ಎ.ಜಿ.ಎಂ ಆಶಾ ಬೆಂಗಳೂರ ಹೇಳಿದರು.

ನಗರದ ಮಂಥನ ಸಭಾಂಗಣದಲ್ಲಿ ನಡೆದ ರಾಜೀವ್ ಗಾಂಧಿ ನಿಗಮ ದಿಂದ ದೊರೆಯುವ ಸೌಲಭ್ಯ ಗಳಬಗ್ಗೆ ತಾಲೂಕ ಪಂಚಾಯಿತಿ ಕಾರ್ಯನಿವಾರ್ಹಕ ಅಧಿಕಾರಿ ಲಕ್ಸ್ಮಿದೇವಿ ನೇತೃತ್ವದಲ್ಲಿ ಗಂಗಾವತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿ ಪಂಚಾಯತ್ ವ್ಯಾಪ್ತಿಯಲ್ಲಿ ಸಭೆ ನಡೆಸಿ ಮಾತನಾಡಿ, ಮನೆ ಇಲ್ಲದ ಪಲಾನುಭವಿಗಳ ವಿವರಗಳನ್ನು ಸಂಪೂರ್ಣವಾಗಿ ಪಡೆದು ಮನೆಗಳನ್ನು ನೀಡುವುದು ಸರ್ವೆ ಮಾಡುವಾಗ ಪಕ್ಕಾ ಮನೆ ಅಥವಾ ಕಚ್ಚಾ ಮನೆ ಮೊದಲು ಕಾತರಿ ಮಡಿಕೊಳ್ಖಬೇಕು ಎಂದರು.

ಈಗಾಗಲೇ ಬಿಡುಗಡೆಯಾಗಿರುವ ಮನೆಗಳಲ್ಲಿ ಕಂತಿನ ಹಣ ಕೆಲವು ಪಲಾನುಭವಿಗಳಿಗೆ ಬಂದಿರುವುದಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು.

ತಾ.ಪಂ.ಅಧಿಕಾರಿ ಲಕ್ಷ್ಮಿದೇವಿ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಲ್ಲರು ಸರಿಯಾದ ರೀತಿಯಲ್ಲಿ ನಿಗಾವಹಿಸಿ ಕೆಲಸ ಮಾಡಿ ಎಂದರು.

ಈ ಸಂದರ್ಭದಲ್ಲಿ ತಾಲೂಕ್ ಪಂಚಾಯಿತಿ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!