2

ಪೌರ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆಗೇರಬೇಕು : ಹೆಚ್.ಆಂಜನೇಯ

ಕರುನಾಡ ಬೆಳಗು ಸುದ್ದಿ

ವಿಜಯನಗರ, 01- ಪೌರ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆದು ಎಸ್‌ಪಿ, ಡಿಸಿ ಗಳಂತಹ ಉನ್ನತ ಹುದ್ದೆಗೆ ಹೋಗುವಷ್ಟು ಓದಬೇಕು ಪೌರ ಕಾರ್ಮಿಕರ ಮಕ್ಕಳು ಪೌರಕಾರ್ಮಿಕರೇ ಆಗಬೇಕು ಎಂದು ಯೋಚನೆ ಮಾಡುವುದನ್ನು ಬಿಟ್ಟು ಛಲದಿಂದ ಶಿಕ್ಷಣ ಪಡೆದು ಉದ್ದಾರ ಆಗಬೇಕು ಎಂದು ಪೌರ ಕಾರ್ಮಿಕರಿಗೆ ಸಲಹೆ ನೀಡಿದರು.

ನಗರದ ಸಿದ್ದಿಪ್ರಿಯ ಕಲ್ಯಾಣ ಮಂಟಪದಲ್ಲಿ ನಡೆದ ೧೩ನೇ ವರ್ಷದ ಕಾರ್ಮಿಕ ದಿನಾಚರಣೆಯ ಅಂಗವಾಗಿ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ಕಾರ್ಮಿಕರನ್ನು ಅತ್ಯಂತ ಗೌರವದಿಂದ ಸನ್ಮಾನಿಸಿ ಮಾತನಾಡಿದರು.
ಜನರು ಬೆಳಿಗ್ಗೆ ಎದ್ದೇಳುವ ಮುಂಚೆಯೇ ಸಂಪೂರ್ಣವಾಗಿ ಊರು ಮತ್ತು ಕೇರಿಗಳನ್ನು ಸ್ವಚ್ಛ ಮಾಡಿ ನಿಮ್ಮನ್ನು ಬರ ಮಾಡಿಕೊಳ್ಳುವಂತೆ ರಸ್ತೆಗಳನ್ನು ಸ್ವಚ್ಛ ಮಾಡಿರುತ್ತಾರೆ. ಪಾರುಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಊರಿನ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡುತ್ತಾರೆ.

ತಮ್ಮ ಆರೋಗ್ಯದ ಬಗ್ಗೆ ಲೆಕ್ಕಿಸಿದೆ ಸಮಾಜದ ಆರೋಗ್ಯದ ಬಗ್ಗೆ ಜನರ ಆರೋಗ್ಯದ ಬಗ್ಗೆ ಯೋಚನೆ ಇಟ್ಟುಕೊಂಡು ಕೆಲಸ ಮಾಡುವವರು ಪೌರ ಕಾರ್ಮಿಕರು ಇಂತಹ ಪಾರದರ್ಶಕ ಕೆಲಸ ಮಾಡುವ ಪೌರಕಾರ್ಮಿಕರ ಒಳಿತಿಗಾಗಿ ನಾಲ್ಕು ದಶಕಗಳ ಕಾಲ ಹೋರಾಟವನ್ನು ಮಾಡಿಕೊಂಡು ಬಂದಿದ್ದೇವೆ.

ಆಗಿನ ಮುಖ್ಯಮಂತ್ರಿ ಆಗಿದ್ದ ದೇವರಾಜ್ ಅರಸ್ ಮತ್ತು ಪೌರಾಡಳಿತ ಸಚಿವರಾಗಿದ್ದ ಬಿ. ಬಸವಲಿಂಗಪ್ಪನವರು ಪೌರಕಾರ್ಮಿಕರ ವಿನೋಚನಗಾಗಿ ಶ್ರಮ ಹಾಕಿದ್ದಾರೆ, ಆಗ ತಲೆಯ ಮೇಲೆ ಮಲ ಹೂರುವ ಅನಿಷ್ಟ ಪದ್ದತಿ ಇತ್ತು ಇದನ್ನು ರದ್ದುಗೊಳಿಸಿ ಪೌರಕಾರ್ಮಿಕರ ವಿಮೋಚನೆಗೆ ನಾಂದಿ ಹಾಡಿದ್ದು ಆಗಿನ ಮುಖ್ಯಮಂತ್ರಿ ದೇವರಾಜ್ ಅರಸು ಎಂದು ಅವರನ್ನು ನೆನೆದರು. ಪೌರಕಾರ್ಮಿಕರು ಕುಟುಂಬ ಉದ್ದಾರಕ್ಕಾಗಿ ಮೊದಲು ಮಧ್ಯ ಕುಡಿಯುವುದನ್ನು ನಿಲ್ಲಿಸಬೇಕು ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕು ಎಂದರು.

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎನ್. ಮಂಜುನಾಥ ಪೌರ ಕಾರ್ಮಿಕರ ಬಗ್ಗೆ ಮಾತನಾಡಿ ಪೌರ ಕಾರ್ಮಿಕರಿಗಾಗಿ ಹಿಂದೆ ಮಾಡಿದ ಹೋರಾಟದ ಬಗ್ಗೆ ಮತ್ತು ಪ್ರಸ್ತುತ ಇರುವ ಸರ್ಕಾರಿ ಸೌಲಭ್ಯಗಳ ಬಗ್ಗೆ ತಿಳಿಸಿ ಹೇಳಿದರು.

ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಮಾತನಾಡಿ ನನ್ನ ಹತ್ತಿರ ಬಂದು ಯಾರೂ ಪೌರಕಾರ್ಮಿಕರ ಮಕ್ಕಳಿಗೆ ಕೆಲಸ ಕೊಡಿ ಎಂದು ಕೇಳಬಾರದು, ನನಗೆ ನನ್ನ ಮಕ್ಕಳಿಗೆ ಐಎಎಸ್, ಕೆಎಎಸ್ , ಎಂಬಿಬಿಎಸ್ ಮಾಡುತ್ತಾನೆ ಎಂದು ನನ್ನ ಬಳಿ ಹೇಳಿದರೆ ನನಗೆ ಖುಷಿಯಾಗುತ್ತದೆ. ಹಾಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿ, ನೀವು ಕೇವಲ ಸೇವಕರಲ್ಲ ನಮ್ಮ ಅತಿಥಿಗಳು ಕೂಡ ಅದಕ್ಕಾಗಿ ಹಿಂದೆ ನಡೆದ ಹಂಪಿ ಉತ್ಸವದಲ್ಲಿ ನಿಮಗೆ ವಿಐಪಿ ಪಾಸ್ ಗಳನ್ನು ಕೊಟ್ಟು ಅತಿಥಿಗಳಂತೆ ಬರಮಾಡಿಕೊಂಡಿದ್ದೇವೆ ಎಂದು ಹೇಳಿದರು. ಪೌರಕಾರ್ಮಿಕರನ್ನು ಮನುಷ್ಯರಂತೆ ನೋಡಿ ಈಗಾಗಲೇ ನಾನು ಅವರಿಗೆ ಆರು ತಿಂಗಳಿಗೊಮ್ಮೆ ಹೆಲ್ತ್ ಚೆಕ್ ಅಪ್ ಮಾಡುಸುತ್ತಿದ್ದೇನೆ. ಕೆಲವು ಜನಗಳಿಗೆ ಮಾತ್ರ ಬಿ ಪಿ ಶುಗರ್ ಇದೆ ಅಷ್ಟು ಬಿಟ್ಟರೆ ಉಳಿದ ಜನಗಳಿಗೆ ಮಧು ಮೇಹದಂತ ಕಾಯಿಲೆಗಳು ಇಲ್ಲ ಎಲ್ಲರೂ ಆರೋಗ್ಯದಿಂದ ಇದ್ದೀರಿ ಆದರೂ ಕೂಡ ತಮ್ಮ ಆರೋಗ್ಯಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಒಳಿತು ನೀವು ದೊಡ್ಡ ಮಟ್ಟದ ಚಿಕಿತ್ಸೆಗೆ ಒಳಪಟ್ಟರೆ ಬೆಂಗಳೂರಿಗೆ ಕಳಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ತೋರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದರು.

ಸರ್ಕಾರದಿAದ ಸಿಗುವಂತ ಎಲ್ಲಾ ಸೌಲಭ್ಯಗಳನ್ನು ಶಿಕ್ಷಣಕ್ಕಾಗಿ ಪ್ರತಿಷ್ಠಿತ ಶಾಲೆಗಳಲ್ಲಿ, ಹಾಸ್ಟೆಲ್ ಗಳಲ್ಲಿ ಓದುವ ಹಾಗೆ ಮಾಡಿಕೊಡುತ್ತೇವೆ ಮತ್ತು ನಿವೇಶನ, ಮನೆ ನಿರ್ಮಾಣ ಮಾಡಲು ಸರ್ಕಾರದಲ್ಲಿ ಅವಕಾಶ ಇರುವಂತಹ ಎಲ್ಲಾ ಸೌಲಭ್ಯಗಳನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ಶಾಸಕ ಡಾಕ್ಟರ್ ಎನ್ ಟಿ ಶ್ರೀನಿವಾಸ್, ಹೂಡಾ ಅಧ್ಯಕ್ಷ ಹೆಚ್ ಎಂ ಎಫ್ ಹಿಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತ, ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಕಮಿಷನರ್ ಚಂದ್ರಪ್ಪ, ಹರಪನಹಳ್ಳಿ ಮುಖ್ಯಾಧಿಕಾರಿ ಯರಗುಡಿ ಶಿವಕುಮಾರ್. ಕಮಲಾಪುರ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಾಂತೇಶ್ ಬೀಳಗಿ, ಮರಿಯಮ್ಮನಹಳ್ಳಿ ಮುಖ್ಯಧಿಕಾರಿ ಖಾಜಾ ಮೈನುದ್ದಿನ್ ಮತ್ತು ಜಿಲ್ಲೆಯ ಆರು ತಾಲೂಕಿನ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಇದ್ದರು.

ಇತ್ತೀಚಿಗೆ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಪರವಾಗಿ ಆದೇಶ ನೀಡಿದ್ದಾರೆ. ಮುಖ್ಯಮಂತ್ರಿಗಳು ಯಾವುದೋ ಒತ್ತಡದಿಂದ ವಿಳಂಬ ಮಾಡುತ್ತಿರುವುದು ಸರಿಯಲ್ಲ, ನಾವು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನೇ ನಂಬಿದ್ದೇವೆ. ಇನ್ನು ೨ತಿಂಗಳಲ್ಲಿ ಒಳ ಮೀಸಲಾತಿ ಜಾರಿಯಾಗದಿದ್ದರೆ ರಾಜ್ಯದಲ್ಲಿ ತೀವ್ರ ತರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ.
-ಮಾಜಿ ಸಚಿವ ಹೆಚ್. ಆಂಜನೇಯ

Leave a Reply

Your email address will not be published. Required fields are marked *

error: Content is protected !!