1

ಮೂಲಭೂತ ಸೌಕರ್ಯದೊಂದಿಗೆ ಉದ್ಯೋಗವನ್ನು ಒದಗಿಸಲು ಗ್ರಾಮಸ್ಥರ ಆಗ್ರಹ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 01- ಜಿಲ್ಲೆಯ ಸಂಡೂರು ತಾಲೂಕಿನ ದೇವಗಿರಿಹಳ್ಳಿ (ಕಮ್ಮತ್ತೂರು) ಗ್ರಾಮದ ಸುತ್ತಮುತ್ತಲಿನಲ್ಲಿರುವ ಗಣಿಗಾರಿಕೆ ಕಂಪನಿಗಳಿAದ ಹರಡುವ ಧೂಳಿನಿಂದ ಗ್ರಾಮದ ಸಾರ್ವಜನಿಕರು ಆಸ್ತಮ ಉಸಿರಾಟ ತೊಂದರೆ ಸೇರಿದಂತೆ ಹಲವಾರು ರೋಗಕ್ಕೆ ತುತ್ತಾಗುತ್ತಿದ್ದಾರೆ, ಗ್ರಾಮಕ್ಕೆ ಆರೋಗ್ಯ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕಾದ ಕಂಪನಿಗಳು ಕಣ್ಣು ಮುಚ್ಚಿ ಕುಳಿತಿವೆ ಇದರಿಂದ ಈ ಗ್ರಾಮದ ಜನರ ಬದುಕು ದುಸ್ತರವಾಗಿದೆ. ಕಾರಣ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ನಮ್ಮ ಗ್ರಾಮಕ್ಕೆ ಗಣಿಗಾರಿಕೆ ಕಂಪನಿಗಳಿAದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಆರೋಗ್ಯ ಶಿಕ್ಷಣ ವನ್ನು ಸಹ ಒದಗಿಸಿ ಕೊಡಬೇಕೆಂದು ಕಮ್ಮತೂರು ಗ್ರಾಮದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಮ್ಮತ್ತೂರು ಗ್ರಾಮದ ಸಾರ್ವಜನಿಕರು ಇಂದು ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರವನ್ನು ನೀಡಿ, ನಮ್ಮ ಗ್ರಾಮದ ಸುತ್ತಮುತ್ತ ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳು ಮತ್ತು ಕಾರ್ಖಾನೆಗಳು ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕಾಗಿರುತ್ತದೆ. ಆದರೆ ಯಾವೊಂದು ಕಂಪನಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ ನಮ್ಮ ಗ್ರಾಮವನ್ನು ಸೌಲಭ್ಯ ವಂಚಿತ ಗ್ರಾಮವನ್ನಾಗಿ ಮಾಡಿರುವುದಲ್ಲದೆ, ಗಣಿ ಧೂಳಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಜೀವಮಾನಪೂರ ಅದೇ ರೋಗ ಅನುಭವಿಸಬೇಕಾಗಿದೆ. ಕಾರಣ ಗಣಿಗಾರಿಕೆ ಕಂಪನಿಗಳು ಶೈಕ್ಷಣಿಕ ಮತ್ತು ಆರೋಗ್ಯದ ಕುರಿತು ಗ್ರಾಮದಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡಬೇಕಾಗಿರುತ್ತದೆ, ಆದರೆ ಗಣಿ ಕಂಪನಿಗಳು ಇದು ಯಾವುದನ್ನು ಮಾಡದೆ ಸಾಮಾಜಿಕ ಹೊಣೆಗಾರಿಕೆಯಿಂದ ನುಣಚ್ಚಿಕೊಂಡಿವೆ. ಈ ಕುರಿತು ಜಿಲ್ಲಾಧಿಕಾರಿಗಳು ಆಸಕ್ತಿ ವಹಿಸಿ ಮಧ್ಯಪ್ರವೇಶಿಸಿ ಗಣಿ ಕಂಪನಿಗಳಿAದ ಮತ್ತು ಕಾರ್ಖಾನೆಗಳಿಂದ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ನಮ್ಮ ಗ್ರಾಮಕ್ಕೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ಆ ಗ್ರಹಿಸಿದ್ದಾರೆ.

ಅಷ್ಟೇ ಅಲ್ಲದೆ ಗಣಿ ಗಾರಿಕೆಯಲ್ಲಿ ನಡೆಸುತ್ತಿರುವ ಸ್ಪೋಟಗಳಿಂದ ನಮ್ಮ ಗ್ರಾಮದ ಮನೆಗಳಲ್ಲಿ ಬಿರುಕು ಬಿಟ್ಟಿರುತ್ತದೆ ಮತ್ತು ಇಂಥ ಮನೆಗಳು ಯಾವಾಗ ಬೀಳುವವೋ ಎಂಬುದು ತಿಳಿಯದಾಗಿದೆ. ಮತ್ತು ಗ್ರಾಮದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಧೂಳು ತುಂಬಿದ್ದು ಈ ಧೂಳಿನಿಂದ ಗ್ರಾಮದ ಸಾರ್ವಜನಿಕರಿಗೆ ಅನಾರೋಗ್ಯ ಉಂಟಾಗಿರುತ್ತದೆ. ಅಲ್ಲದೆ ಈ ಧೂಳಿನಿಂದಾಗಿ ನಾವು ಬೆಳೆದ ಬೆಳೆಗಳ ಮೇಲೆ ಸಹ ದುಷ್ಪರಿಣಾಮ ಉಂಟಾಗಿ ಬೆಳೆ ಕೈಗೆ ಸಿಗದೇ ನಷ್ಟ ಅನುಭವಿಸುತ್ತಿದ್ದೇವೆ. ಈ ರಸ್ತೆ ಮೇಲಿನ ಧೂಳನ್ನು ಗುಡಿಸಲು ಸ್ಮಯಾರ್ರ್ ಮತ್ತು ಎನ್‌ಎಂಡಿಸಿ ಕಂಪನಿಗಳ ತರಹ ನಮ್ಮ ಗ್ರಾಮದ ಮಹಿಳೆಯರಿಗೆ ಕೆಲಸವನ್ನು ನೀಡಬೇಕು, ಮತ್ತು ಗ್ರಾಮದ ಪ್ರತಿಮನೆಗೆ ವಾರ್ಷಿಕವಾಗಿ ೯೦ ಸಾವಿರ ರೂಪಾಯಿಗಳನ್ನು ನೀಡಬೇಕು ಜೊತೆಗೆ ಬೆಳೆ ನಷ್ಟ ಎಂದು ವಾರ್ಷಿಕ ೪೦ ಸಾವಿರ ರೂಪಾಯಿಗಳ ಪರಿಹಾರವನ್ನು ಕಲ್ಪಿಸಿ ಕೊಡಬೇಕು ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ಗಣಿಗಾರಿಕೆಯಿಂದ ಕೇವಲ ಮನುಷ್ಯರ ಮೇಲೆ ಮಾತ್ರವಲ್ಲದೆ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳು ಮತ್ತು ಜಲಚರಗಳು ಹಾಗೂ ವನ್ಯ ಮೃಗಗಳ ಮೇಲೆ ಸಹ ದುಷ್ಪರಿಣಾಮ ಬೀರುತ್ತದೆ. ಈ ಭೂಮಿ ಮೇಲೆ ಎಲ್ಲರಿಗೂ ಬದುಕುವ ಹಕ್ಕಿದೆ ಅದರಂತೆ ಈ ಪ್ರದೇಶದಲ್ಲಿ ಫೋಟೋಗಳು ನಡೆಸುವುದರಿಂದ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ, ಸ್ಪೋಟ ನಡೆಸುವುದನ್ನು ನಿಲ್ಲಿಸಿ ಗಣಿಗಾರಿಕೆಯನ್ನು ಮುಂಜಾನೆ ಎಂಟು ಗಂಟೆಯಿAದ ಸಂಜೆ ೪ ಗಂಟೆ ೩೦ ನಿಮಿಷಗಳವರೆಗೆ ಮಾತ್ರ ನಡೆಸಬೇಕೆಂದು ಸರಿ ಒತ್ತಾಯಿಸಿದ್ದಾರೆ.

ಗಣಿಗಾರಿಕೆಗೆ ಪರಾವಣಿಗೆ ಪಡೆಯುವ ಸಂದರ್ಭದಲ್ಲಿ ದೇವಗಿರಿ ಹಳ್ಳಿ ಗ್ರಾಮವನ್ನು. ದತ್ತು ತೆಗೆದುಕೊಂಡು ಸಮಗ್ರವಾಗಿ ಸರ್ವತೋಮುಖ ಅಭಿವೃದ್ಧಿಗೊಳಿಸಿತ್ತೇವೆ ಎಂದು ತಿಳಿಸುತ್ತಾರೆ ಆದರೆ ಇಲ್ಲಿಯವರೆಗೂ ಅವರು ಕೊಟ್ಟ ಭರವಸೆ ಈಡೇರದೆ ಹುಸಿಯಾಗಿದೆ.

ನಮ್ಮ ಗ್ರಾಮದ ಸುತ್ತು ಮುತ್ತಲಿನಲ್ಲಿರುವ ಗಣಿಯಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಗಳಿಸುತ್ತಿರುವ ಗಣಿ ಕಂಪನಿಗಳು ಮತ್ತು ಗಣಿ ಕಾರ್ಖಾನೆಗಳು ನಮ್ಮ ಗ್ರಾಮದ ಅಭಿವೃದ್ಧಿ ಕೆಲಸದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ, ನಾವು ಹಲವಾರು ಸಲ ಸಿಎಸ್‌ಆರ್ ನಿಧಿಯಲ್ಲಿ, ಡಿಎಂಎಫ್ ಅಥವಾ ಕೆಎಂಈಆರ್‌ಸಿ ನಿಧಿ ಅಡಿಯಲ್ಲಿ ನಮ್ಮ ಗ್ರಾಮವನ್ನು ಅಭಿವೃದ್ಧಿಗೊಳಿಸಿ ಎಂದು ಕೇಳಿಕೊಂಡರು ಯಾರು ಯಾವ ಕ್ರಮ ಕೈಗೊಂಡಿರುವುದಿಲ್ಲ.

ಕಾರಣ ದಯವಿಟ್ಟು ತಾವುಗಳು ನಮ್ಮ ಗ್ರಾಮವನ್ನು ತೆಗೆದುಕೊಂಡು ಸಿಎಸ್ಆರ್ ನಿಧಿ ಅಡಿ ಅಥವಾ ಯಾವುದೇ ನಿಧಿ ಅಡಿಯಲ್ಲಿ ಸಮಗ್ರ ಸರ್ವತೋಮುಖ ಅಭಿವೃದ್ಧಿಗೊಳಿಸಬೇಕೆಂದು ಗಣಿಗಾರಿಕೆ ಕಂಪನಿ ಮತ್ತು ಕಾರ್ಖಾನೆಗಳಿಗೆ ಸೂಚಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎನ್ ಹೆಚ್ ಮಲ್ಲಿ ಸ್ವಾಮಿ, ಶಿವಮೂರ್ತಿ, ಪರಶುರಾಮ್, ಬಿ ಸುಂಕಣ್ಣ ಕುಮಾರಸ್ವಾಮಿ ದುರ್ಗಪ್ಪ ಅಜ್ಜಪ್ಪ ವಿ ಕುಮಾರಸ್ವಾಮಿ ತಿಮ್ಮಪ್ಪ ಷಣ್ಮುಖ ಮಲಿಯಪ್ಪ ದೊರೆಸ್ವಾಮಿ ಸೇರಿದಂತೆ ಇನ್ನು ಹಲವಾರು ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *

error: Content is protected !!