ಹೋಟೆಲ್ ಮಯೂರ ಭುವನೇಶ್ವರಿಯಲ್ಲಿ ನೂತನ ಬಾರ್ ಉದ್ಘಾಟನೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 3- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲ್ ಮಯೂರ ಭುವನೇಶ್ವರಿ ಕಮಲಾಪುರ ಹಂಪಿ ಘಟಕದಲ್ಲಿ ಪ್ರವಾಸಿಗರಿಗೆ ಮತ್ತೊಂದು ಸೇವೆಯನ್ನು ಆರಂಭಿಸಿದ್ದು, ನೂತನ ‘ಮಯೂರ ಬಾರ್’ನ್ನು ಕಲಬುರ್ಗಿ ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕರು ಆಗಿರುವ ಹೊಸಪೇಟೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಪ್ರಭುಲಿಂಗ ಎಸ್ ತಳಕೇರಿ ಅವರು ಅಕ್ಟೋಬರ್ ೩ರಂದು ಉದ್ಘಾಟಿಸಿದರು.
ಇದೇ ವೇಳೆ ಹೋಟೆಲ್ ಮಯೂರ ಭುವನೇಶ್ವರಿ ವ್ಯವಸ್ಥಾಪಕರಾದ ಸುನಿಲ್ ಕುಮಾರ್ ಎಸ್ ಅವರು ಮಾತನಾಡಿ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ ಕೆ.ವಿ.ರಾಜೇಂದ್ರ, ಪ್ರಧಾನ ವ್ಯವಸ್ಥಾಪಕರಾದ ಮಹೇಶಬಾಬು ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಹೆಚ್.ಎಸ್.ದೇವರಾಜು ಇವರ ನಿರ್ದೇಶನದಂತೆ ಹೋಟೆಲ್ ಮಯೂರ ಭುವನೇಶ್ವರಿ ಕಮಲಾಪುರ ಘಟಕಕ್ಕೆ ಆಗಮಿಸುವ ಪ್ರವಾಸಿಗರ ಹಾಗೂ ಆತಿತ್ಯ ಸೇವೆ ಪಡೆಯುವ ಅತಿಥಿಗಳಿಗೆ ಉತ್ತಮ ಸೇವೆಯನ್ನು ಒದಗಿಸುವ ಹಿತದೃಷ್ಟಿಯಿಂದ ದೇಶ-ವಿದೇಶಿ ಪ್ರವಾಸಿಗರು ಅತಿ ಹೆಚ್ಚಾಗಿ ಆಗಮಿಸುವ ಹಂಪಿಗೆ ಈ ಸುಸಜ್ಜಿತವಾದ ಸೇವೆಯನ್ನು ಇಂದಿನಿಂದ ಆರಂಭಿಸಲಾಗಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಟಿ.ಬಿ.ಡ್ಯಾಂಘಟಕದ ಹೋಟೆಲ್ ಮಯೂರ ವ್ಯವಸ್ಥಾಪಕರಾದ ಪ್ರಕಾಶ ಎಂ ಸೇರಿದಂತೆ ಹೋಟೆಲ್ ಮಯೂರ ಭುವನೇಶ್ವರಿ ಕಮಲಾಪುರ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.
