6

ಪಾಲನಹಳ್ಳಿಮಠಕ್ಕೆ ೩ ಸಾವಿರ ಎಕರೆ ಭೂಮಿ ದಾನ
ಜೈನ್ ಅಂತಹ ದಾನಿಗಳು ಅಪರೂಪವಾಗಿದ್ದಾರೆ : ಶ್ರೀ ಗದಿಗೇಪ್ಪಜ್ಜ

ಕರುನಾಡ ಬೆಳಗು ಸುದ್ದಿ

ಕುಕನೂರು, 10- ರಾಜ್ಯದ ಹೆಸರಾಂತ ಮಠಗಳಲ್ಲಿ ಒಂದಾದ ಪೂಜ್ಯ ಡಾ. ಶ್ರೀ ಸಿದ್ದರಾಜು ಮಹಾಸ್ವಾಮಿಗಳ ಪಾಲನಹಳ್ಳಿಮಠಕ್ಕೆ ಉದ್ಯಮಿಯೊಬ್ಬರು ಭೂಮಿ ದಾನ ಮಾಡಿರುವದು ಜೈನ್ ಅಂತಹ ದಾನಿಗಳು ಅಪರೂಪವಾಗಿದ್ದಾರೆ ಎಂದು ಶಿವಶರಣ ಶ್ರೀ ಗದಿಗೇಪ್ಪಜ್ಜ ನವರ್ ಪ್ರಸಂಶೆ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಇಟಗಿಯ ಶ್ರೀಮರಳಸಿದ್ದೇಶ್ವರ ಪುಣ್ಯಾಶ್ರಮದ ಶಿವಶರಣ ಶ್ರೀಗದಿಗೇಪ್ಪಜ್ಜನವರ್ ಮಾತನಾಡಿ, ಬೆಂಗಳೂರಿನ ಉದ್ಯಮಿ ಪಿ.ವಿ.ಓಸ್ವಲ್ ಜೈನ್ ಅವರು ತಮ್ಮ ಸ್ವಂತ ಆಸ್ತಿಯಾದ ೩ ಸಾವಿರ ಎಕರೆ ಭೂಮಿಯನ್ನು ಶ್ರೀಸಿದ್ದರಾಜು ಮಹಾಸ್ವಾಮಿಗಳ ಪಾಲನಹಳ್ಳಿಮಠಕ್ಕೆ ದಾನವಾಗಿ ಕೊಟ್ಟಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಶ್ರೀಸಿದ್ದರಾಜು ಸ್ವಾಮೀಜಿಗಳು ಧಾರ್ಮಿಕ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾರ್ಯವನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಅವರ ಕಾರ್ಯವನ್ನು ಮೆಚ್ಚಿ ಕೋಟ್ಯಾಂತರ ರೂ. ಬೆಲೆ ಬಾಳುವಂತಹ ಭೂಮಿಯನ್ನು ನೀಡಿ, ಆಸ್ತಿಪತ್ರಗಳನ್ನು ನೀಡಿರುವದು ಕಲಿಯುಗದಲ್ಲಿ ಇಂತಹ ದಾನಿಗಳು ಇರುವದು ಅಭಿಮಾನದ ಸಂಗತಿಯಾಗಿದೆ. ನಾವು ಶ್ರೀಸಿದ್ದರಾಜು ಸ್ವಾಮೀಜಿ ಅವರನ್ನು ಇಟಗಿಯ ಬಸವಪ್ರಭು ಪಾಟೀಲ್ ಅವರ ಸಂಸ್ಥೇಯ ಆವರಣದಲ್ಲಿ ಜರುಗಿದ ಸಾಮೂಹಿಕ ವಿವಾಹಗಳ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು ಎಂದು ನೆನಪು ಮಾಡಿಕೊಂಡರು.

ಈ ಸಂದರ್ಭದಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ಈಶಪ್ಪ ದೊಡ್ಡಮನಿ, ಮುಖಂಡ ಯಲ್ಲಪ್ಪ ದೊಡ್ಡಮನಿ ಇದ್ದರು.

Leave a Reply

Your email address will not be published. Required fields are marked *

error: Content is protected !!