ಶ್ರಿಪಾದಪ್ಪ ಅಧಿಕಾರಿ ತಾಲೂಕು ಕಂಡ ಅಪರೂಪದ ನಾಯಕ : ಶರಣಪ್ಪ ರಾಂಪೂರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 15- ತಾಲ್ಲೂಕಿನ ರಾಜಕೀಯ ರಂಗದಲ್ಲಿ ಕಳೆದ ೪೦ ವರ್ಷಗಳಿಂದ ತಮ್ಮದೇ ಆದ ಇತಿ-ಮಿತಿಯೊಳಗೆ ತಾಲ್ಲೂಕಿನ ಜನತೆಯ ಸೇವೆ ಸಲ್ಲಿಸಿದ ಅಪರೂಪದ ನಾಯಕನಾಗಿದ್ದು ಇವರು ನಮ್ಮ ತಾಲ್ಲೂಕಿಗೆ ಒಮ್ಮೆ ಶಾಸಕರಾಗಬೇಕಾಗಿತ್ತು. ಆದರೆ ಕೆಲ ಕುತಂತ್ರಿಗಳ ಕುತಂತ್ರಕ್ಕೆ ಬಲಿಯಾಗಬೇಕಾಯಿತು ಎಂದು ತಾಲ್ಲೂಕಿನ ಹಿರಿಯ ಮುಖಂಡ ಶರಣಪ್ಪ ರಾಂಪೂರ ಹೇಳಿದರು.
ಅವರು ಪಟ್ಟಣದಲ್ಲಿ ಶ್ರೀಪಾದಪ್ಪ ಅಧಿಕಾರಿಯವರ ೭೮ನೇ ಹುಟ್ಟು ಹಬ್ಬದ ಪ್ರಯುಕ್ತ ಸನ್ಮಾನಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ನಮ್ಮ ಸಮಕಾಲಿನವರು ಶ್ರೀಪಾದಪ್ಪನವರ ರಾಜಕೀಯ ಜೀವನದಲ್ಲಿ ಕಷ್ಟ ಸುಖದಲ್ಲಿ ಭಾಗಿಯಾಗಿದ್ದೇವೆ ಎಂದರು.
ಭವಿಷ್ಯದ ರಾಜಕಾರಣದಲ್ಲಿ ಶ್ರೀಪಾದಪ್ಪ ನವರಂತಹ ಮುತ್ಸದ್ದಿ ನಾಯಕರು ಹುಟ್ಟಿ ಬರುವುದು ಸಾಧ್ಯವಿಲ್ಲ ಎಂದರು.
ಹಿರಿಯ ವಕೀಲ ಶಂಕರಗೌಡ ಗೆದಗೇರಿ ಮಾತನಾಡಿ, ಶ್ರೀಪಾದಪ್ಪ ಒಬ್ಬ ನಿಷ್ಠುರ, ನೇರ, ದಿಟ್ಟ ನಿರಂತರ ನಾಯಕರಾಗಿದ್ದು ಇವರು ಸದಾ ಕಾಲ ತಾಲೂಕಿನ ಜನತೆಯ ಕಣ್ಣಿರು ಒರೆಸಲು ಹೋರಾಟ ಮಾಡಿದ ವ್ಯಕ್ತಿ ಎಂದರು.
ಸಾಮಾಜಿಕ ಹೋರಾಟಗಾರ ಸ.ಶರಣಪ್ಪ ಪಾಟೀಲ್ ಕರಮುಡಿ ಮಾತನಾಡಿ, ತಾಲೂಕಿನ ದೀನ ದಲಿತರ, ಧ್ವನಿ ಇಲ್ಲದವರ ಧ್ವನಿಯಾಗಿ ಸದಾ ಕಾಲ ಚಿಂತಿಸಿದ ಸಾಮಾಜಿಕ ಹೋರಾಟಗಾರ ಇಂತಹ ನಾಯಕನನ್ನು ಪಡೆದ ನಮ್ಮ ತಾಲೂಕು ಪುಣ್ಯ ಎಂದರು.
ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ಯುವ ವಕೀಲ ರಾಜಶೇಖರ ನಿಂಗೋಜಿ, ಯುವ ಮುಖಂಡ ಗಿರೀಶ ಅಧಿಕಾರಿ, ಬಾಳನಗೌಡ ಚಂಪಗೌಡ್ರ ಹಾಗೂ ಇನ್ನಿತರರು ಇದ್ದರು.
