2

ತಾಲೂಕ ಆಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕರುನಾಡ ಬೆಳಗು ಸುದ್ದಿ

ಕುಷ್ಟಗಿ, 16- ತಾಲೂಕ ಆಡಳಿತ ಹಾಗೂ ತಾಲೂಕ ಪಂಚಾಯತ ಕುಷ್ಟಗಿ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಇಂದು ಗುರುವಾರ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಮಾನಪ್ಪ ತಳವಾರ ಮಾತನಾಡಿ ಸಮಾಜದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಬೆಳಗ್ಗೆ ಕಲಾತಂಡದೊ0ದಿಗೆ ಸಕಲ ವಾದ್ಯ ಮೇಳದೊಂದಿಗೆ ನಗರದ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಪ್ರಾರಂಭಗೊ0ಡು ಕುಷ್ಟಗಿ ಪಟ್ಟಣದ ಪ್ರಮುಕ ಬೀದಿಗಳಲ್ಲಿ ೧೦೧ ಕುಂಭದ ಮೆರವಣಿಗೆ ನಡೆಯಲಿದೆ. ನಂತರ ತಾಲೂಕ ಕ್ರೀಡಾಂಗಣದಲ್ಲಿ ಬಹಿರಂಗ ಸಮಾರಂಭ ಜರುಗಲಿದೆ. ಮಹರ್ಷಿ ವಾಲ್ಮೀಕಿಯವರು ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ. ಇಡೀ ನಾಡಿಗೆ ಸೀಮಿತವಾಗಿದ್ದು ಎಲ್ಲಾ ಸಮಾಜದವರು ಸಹ ಈ ಕಾರ್ಯಕ್ರಮಕ್ಕೆ ಬರಬೇಕು ಎಂದು ವಿನಂತಿಸಿದರು.

ಸ್ಥಳೀಯ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ತಾಲೂಕ ಆಡಳಿತದ ತಹಶೀಲ್ದಾರರು, ತಾಲೂಕ ಪಂಚಾಯತ ಇಓ, ಪುರಸಭೆ ಮುಖ್ಯಾಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡ ರಮೇಶ ಕೊಳ್ಳಿ, ಹನುಮೇಶ ಬುರ್ಲಿ, ಈರಪ್ಪ ನಾಯಕ, ಚಂದ್ರಹಾಸ ಭಾವಿಕಟ್ಟಿ, ರಮೇಶ ಕೊನಸಾಗರ, ದೊಡ್ಡಪ್ಪ ನಾಯಕ, ಭೀಮನಗೌಡ್ರ ನಾಯಕ, ರವಿಕುಮಾರ ಕೆಳಗಡೆ, ಶಿವನಗೌಡ ಮದಲಗಟ್ಟಿ ಇದ್ದರು.

Leave a Reply

Your email address will not be published. Required fields are marked *

error: Content is protected !!