
ಸಾವಿತ್ರಮ್ಮ ನಿಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 17- ಗವಿಶ್ರೀ ನಗರದ ನಿವಾಸಿ ಸಾವಿತ್ರಮ್ಮ ಗಂ. ಸಂಗಯ್ಯ ಸಿದ್ನೇಕೊಪ್ಪಮಠ (76 ) ಇವರು ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಶ್ರೀ ಗವಿಮಠದ ಸಿಬ್ಬಂದಿ ಶಾಂತಮೂರ್ತಿ ಸಿದ್ನೇಕೊಪ್ಪಮಠ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಸೇರದಂತೆ ಬಂದುಗಳನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ ಗುರುವಾರ 17 ರಂದು ಸಂಜೆ 4ಕ್ಕೆ ಕೊಪ್ಪಳದ ವೀರಶೈವ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.