WhatsApp Image 2024-10-16 at 6.32.41 PM (1)

ಕೇಂದ್ರ ಸಚಿವೆ ಕರಂದ್ಲಾಜೆ ಪೋಟೋ ಟ್ಯಾಟೋ, ಮಟನ್ & ಚಿಕನ್ ಸೆಂಟರ್

ಕರುನಾಡ ಬೆಳಗು ಸುದ್ದಿ

ಕುಕನೂರು, 16- ಪಟ್ಟಣದ ಜಾಗದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಭಾವಚಿತ್ರ ಟ್ಯಾಟೋ ಹಾಕಿಸಿಕೊಂಡು ಈಗ ಅಂಗಡಿಗೆ ಶೋಭಾ ಕರಂದ್ಲಾಜೆ ಮಟನ್ & ಚಿಕನ್ ಸೇಂಟರ್ ಹೆಸರನ್ನು ಹಾಕಿಸಿದ್ದಾರೆ. ಅಂಗಡಿಗೆ ಕೇಂದ್ರ ಸಚಿವೆ ಹೆಸರು ಹಾಕಿಸಿರುವದು ವೈರಲ್ ಆಗಿದೆ.

ಪಟ್ಟಣದ ನಿವಾಸಿ ಖಾಧೀರ್ ಬಾಬಣ್ಣ ಕಲಾಲ ಎನ್ನುವ ಯುವಕ ಕಳೇದ 20 ವರ್ಷಗಳಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಅಪ್ಪಟ ಅಭಿಮಾನಿಯಾಗಿದ್ದಾನೆ. 2008 ರಲ್ಲಿ ಪಟ್ಟಣಕ್ಕೆ ಶೋಭಾ ಕರಂದ್ಲಾಜೆ ಅವರು ಚುನಾವಣೆಗೆ ಪ್ರಚಾರಕ್ಕಾಗಿ ಆಗಮಿಸಿದಾಗ ಅವರ ರಾಜಕೀಯ ಮಾತುಗಳನ್ನು ಕೇಳಿ ಅಭಿಮಾನಿಯಾಗಿದ್ದಾನೆ.

ಖಾಧೀರ್ ಕಲಾಲ್ 5 ವರ್ಷಗಳ ಹಿಂದೆ ಶೋಭಾ ಕರಂದ್ಲಾಜೆ ಅವರ ಪೋಟೋವನ್ನು ಕೈಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದಾನೆ. ಈಗ ಹೊಸದಾಗಿ ಪ್ರಾರಂಭಿಸಿರುವ ಅಂಗಡಿಗೆ ಶೋಭಾ ಕರಂದ್ಲಾಜೆ ಮಟನ್ & ಚಿಕನ್ ಸೆಂಟರ್ ಹೆಸರು ಬರೆಸಿದ್ದಾನೆ. ನಾಮಫಲಕದ ಹೆಸರು ವೈರಲ್ ಆಗಿದೆ.

ನಾನು ಕಳೇದ 20 ವರ್ಷಗಳಿಂದ ಶೋಭಾ ಕರಂದ್ಲಾಜೆ ಮೇಡಂ ಅವರ ಅಭಿಮಾನಿಯಾಗಿದ್ದೇನೆ, ಮಾಜಿ ಸಚಿವರಾದ ಹಾಲಪ್ಪ ಆಚಾರ್ ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ನನ್ನ ಅಂಗಡಿಗೆ ಅಭಿಮಾನಿಯಾಗಿ ಹೆಸರನ್ನು ಹಾಕಿಸಿದ್ದೇನೆ.

Leave a Reply

Your email address will not be published. Required fields are marked *

error: Content is protected !!