ಬಸ್ ನಿಲ್ದಾಣ ನಿರ್ಮಿಸಲು ಗ್ರಾಮಸ್ಥರ ಸಹಕಾರ ಅವಶ್ಯವಾಗಿದೆ : ರಾಯರಡ್ಡಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 198- ತಾಲೂಕಿನ ಬೇವೋರು ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುವದು ಎಲ್ಲಾ ಗ್ರಾಮಸ್ಥರು ಇದಕ್ಕೆ ಸಹಕಾರ ನೀಡುವಂತೆ ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಬೇವೂರು ಗ್ರಾಮದ ಗ್ರಾಮಸ್ಥರೊಂದಿಗೆ ಮಾತನಾಡಿ, ಗ್ರಾಮವು ಹೆಚ್ಚಿನ ರೀತಿಯಲ್ಲಿ ಬೆಳೆಯುತ್ತಿದೆ ಹಿಗಾಗಿ ಈ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅನುಕೂಲವಾಗಲಿ ಎಂದು ಈಗಾಗಲೇ ಕ್ಷೇತ್ರಕ್ಕೆ ಬಸ್ ನಿಲ್ದಾಣವನ್ನು ಮಂಜೂರು ಮಾಡಿಸಲಾಗಿದೆ. ಈ ನಿಟ್ಟಿನಲ್ಲಿ ಬೇವೂರು ಗ್ರಾಮಕ್ಕೂ ಕೂಡ ಮಂಜೂರ ಆಗಿದ್ದರಿಂದ ಗ್ರಾಮದಲ್ಲಿರುವ ನಿಗದಿ ಮಾಡಿರುವ ಸ್ಥಳದಲ್ಲಿಯೇ ಬಸ್ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ ಇದಕ್ಕೆ ಗ್ರಾಮಸ್ಥರು ಸಹಕಾರ ಅಗತ್ಯವಿದೆ ಸರ್ಕಲ್ ಹತ್ತಿರವೇ ಬಸ್ ನಿಲ್ದಾಣ ನಿರ್ಮಿಸಬೇಕು ಎಂಬ ಬೇಡಿಕೆ ತಮ್ಮದು ಆದರೆ ಸುಂದರವಾಗಿ ನಿಲ್ದಾಣ ಮಾಡಲು ನಿಗದಿ ಮಾಡಿರುವ ಸ್ಥಳದಲ್ಲಿ ಅಗತ್ಯ ಕ್ರಮಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ ಈ ಕಾರಣದಿಂದ ಈಗಾಗಲೇ ಗುರುತಿಸಿದ ಸ್ಥಳದಲ್ಲಿಯೇ ಹೊಸ ನಿಲ್ದಾಣ ನಿರ್ಮಿಸುವುದ ಸೂಕ್ತವಾಗಿದೆ ಇದು ಸತ್ರ ಹಂತದಲ್ಲಿ ಅಂತಿಮಗೊAಡು ಟೆಂಡರ್ ಪ್ರಕ್ರಿಯೆ ನಡೆಯುವ ತಿರುವದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಗ್ರಾಮಸ್ಥರು ಒತ್ತಾಯದ ಮೇರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ವೃತ್ತದಲ್ಲಿಯೇ ಮಿನಿ ನಿಲ್ದಾಣ ಮಾಡಬಹುದಾಗಿದೆ ಈಗಿರುವ ನಿಲ್ದಾಣ ಸ್ಥಳದಲ್ಲಿಯೇ ಸಣ್ಣ ನಿಲ್ದಾಣ ಮಾಡಲು ಕ್ರಮ ಕೈಗೊಳ್ಳಬಹುದಾಗಿದೆ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿ ಸಮಾಧಾನಗೊಳಿಸಿದರು.
ಗ್ರಾಮಸ್ಥರು ನಿಯೋಗದ ಉಸ್ತುವಾರಿ ವಹಿಸಿದ್ದು ಮಲ್ಲನಗೌಡ ಕೊನನಗೌಡ್ರ ಮಾತನಾಡಿ, ಗ್ರಾಮಸ್ಥರ ಅನುಕೂಲಕ್ಕಾಗಿ ದೊಡ್ಡ ನಿಲ್ದಾಣ ಜೊತೆಗೆ ವೃತ್ತದಲ್ಲಿ ಸಣ್ಣ ನಿಲ್ದಾಣ ನಿರ್ಮಾಣಕ್ಕೆ ಶಾಸಕರ ಮನಸ್ಸು ಮಾಡಿದ್ದು ಖುಷಿಯಾಗಿದೆ ದೂರದೃಷ್ಟಿಯಲ್ಲಿ ಹಿನ್ನಲೆಯಲ್ಲಿ ಸ್ವಲ್ಪ ದೂರದಲ್ಲಿ ಬಸ್ ನಿಲ್ದಾಣ ಮಾಡುವ ಉದ್ದೇಶದ ಬಗ್ಗೆ ಶಾಸಕರು ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದರಿಂದ ಹೊಸ ನಿಲ್ದಾಣ ನಿರ್ಮಾಣಕ್ಕೆನಮ್ಮ ಸಹಮತವಿದೆ ಎಂದು ಹೇಳಿದರು.
ಗ್ರಾಮದ ಮುಖಂಡ ಸಂಗಮೇಶ ಗೂಂದಿ, ವೀರಣ್ಣ ಹಳ್ಳಿ, ಶರಣಪ್ಪ ಪೊಳೋಟಿ, ಸೋಮಲಿಂಗಪ್ಪ ಕೊಳಜಿ, ಹನುಮಂತಪ್ಪ ಚರಾರಿ, ಯಮನಪ್ಪ, ಹೇಮಂತ ಅಂಚಿ, ನಿಂಗಜ್ಜ ಕೊಳಜಿ, ಬಸಣ್ಣ ಚಿತವಾಡಗಿ, ಹನುಮೇಶ ಕೊನನಗೌಡ್ರ ಮಲ್ಲಪ್ಪ ಕರಡಿ, ದೇವರಾಜ ಹಳ್ಳಿ, ಶಂಕರ ಹಳ್ಳಿ, ಹನುಮಂತ ಹಿಟ್ಟಿನ, ಶರಣಪ್ಪ ಬಳಿಗಾರ ಸೇರಿ ಇತರರು ಭಾಗವಹಿಸಿದ್ದರು.
