ರಾಜ್ಯದಲ್ಲಿ ದ್ವೇಷಮಯ ರಾಜಕೀಯ ಅಭಿವೃದ್ದಿಗೆ ಶೂನ್ಯ : ಪಾಟೀಲ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 18- ರಾಜ್ಯದಲ್ಲಿ ಕಳೆದ ಮೂರು-ನಾಲ್ಕು ತಿಂಗಳುಗಳಿ0ದ ಆಡಳಿತಾರೂಢ ಕಾಂಗ್ರೇಸ್ ಮತ್ತು ಮಿತ್ರ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಅಭಿವೃದ್ದಿ ಮರೆತು ದ್ವೇಷಮಯ ರಾಜಕಾರಣದಲ್ಲಿ ತೊಡಗಿಕೊಂಡಿರುವುದು ವಿಪರ್ಯಾಸವಾಗಿದ್ದು ರಾಜ್ಯದ ಜನತೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದು ಇದರ ಚಿಂತೆ ಈ ಪಕ್ಷಗಳಿಗೆ ಇಲ್ಲವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸ.ಶರಣಪ್ಪ ಪಾಟೀಲ ಕರಮುಡಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ ಮಾತನಾಡಿದರು. ರಾಜ್ಯದಲ್ಲಿ ಪ್ರಮುಖವಾಗಿರುವ ಮೂರು ಪಕ್ಷಗಳಿಗೆ ಜನಹಿತ ಮುಖ್ಯವಾಗಿಲ್ಲ, ಕೇವಲ ತಮ್ಮ ಅಧಿಕಾರದ ಲಾಲಸೆಗಾಗಿ ಲಜ್ಜಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ.
ಇಂದು ಕಾಂಗ್ರೇಸ್ ಪಕ್ಷದವರು ತಮ್ಮದೇ ಆದ ಸ್ವಾರ್ಥ ರಾಜಕಾರಣದಿಂದಾಗಿ ತೊಡಗಿದೆರೇ ಇದರ ಕುರಿತು ತುಲನಾತ್ಮಕವಾಗಿ ಸಲಹೆ ಕೊಡುವುದು ಬಿಟ್ಟು ಬಿಜೆಪಿ ಮತ್ತು ಮಿತ್ರ ಪಕ್ಷಗಳು ವೈಯಕ್ತಿಕ ವಿಚಾರಗಳನ್ನು ಮುಂಚೂಣಿಯಲ್ಲಿ ತಂದು ರಾಜ್ಯದ ಮಾನ ಮರ್ಯಾದೆಯನ್ನು ದೇಶಾದ್ಯಂತ ಹರಾಜು ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ವೈಯಕ್ತಿಕ ವಿಚಾರಗಳು ಇಂದು ರಾಜ್ಯದಲ್ಲಿ ಪ್ರಸ್ತಾಪವಾಗುತ್ತಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
