ಕೃಷಿಯಲ್ಲಿ ಮಹಿಳೆಯರ ಪಾತ್ರ ಹಿರಿದು : ಚನ್ನಪ್ಪ ಮಳಗಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 18- ನಗರದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಆತ್ಮಯೋಜನೆ ಹಾಗೂ ಕೃಷಿ ಇಲಾಖೆ, ಗಂಗಾವತಿ ಇವರ ಸಹಯೋಗದಡಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ನಿರತ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಕೃಷಿ ಕಾಲೇಜ ಡೀನ ಡಾ.ಎಸ್.ಬಿ.ಗೌಡಪ್ಪ, ಡೀನ್ (ವಿದ್ಯಾರ್ಥಿ ಕ್ಷೇಮಾಭಿವೃದ್ಧಿ) ಮಾತನಾಡಿ ಹಿಂದಿನ ಕೃಷಿಯಲ್ಲಿ ಮಹಿಳೆಯರ ಪಾತ್ರ ಹಾಗೂ ಇವರ ಶ್ರೇಯೋಭಿವೃದ್ಧಿಗಾಗಿ ನಿರ್ವಹಿಸಬೇಕಾದ ಅನೇಕ ಯೋಜನೆಗಳ ಬಗ್ಗೆ ತಿಳಿಯಬೇಕು.
ಇಂದಿನ ಹವಾಮಾನ ಬದಲಾವಣೆಯಲ್ಲಿ ಕೃಷಿ ಮಹಿಳೆಯರ ಪಾತ್ರ ಹೆಚ್ಚಿದ್ದು, ಮಹಿಳೆಯರು ಆಧುನಿಕ ಕೃಷಿಯತ್ತ ಹೆಚ್ಚು ಒಲವು ಕೊಡಬೇಕೆಂದರು.
ತಾಲೂಕ ಕೃಷಿ ಸಮಾಜ ಅಧ್ಯಕ್ಷ ಚನ್ನಪ್ಪ ಮಳಗಿ ಉದ್ದೇಶಿಸಿ ಮಾತನಾಡಿ, ಮಹಿಳೆಯರು ಕುಟುಂಬದ ಕಣ್ಣಾಗಿದ್ದು, ಕೃಷಿಯಲ್ಲಿ ಇವರ ಪಾತ್ರ ಹಿರಿದಾಗಿದೆ. ರೈತ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಪಡೆದು ಹೆಚ್ಚು ಆರ್ಥಿಕ ಸಬಲರಾಗಬೇಕೆಂದರು.
ಜಿಲ್ಲಾ ಕೃಷಿ ತರಬೇತಿಕೇಂದ್ರ ಕೃಷಿ ಅಧಿಕಾರಿ ಡಾ.ಚಂದ್ರಕಾAತ ನಾಡಗೌಡರ ಕೃಷಿ ಇಲಾಖೆಯ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಕೃಷಿ ಮಹಾವಿದ್ಯಾಲಯ ವಿಶೇಷ ಅಧಿಕಾರಿ ಡಾ.ವಿಶ್ವನಾಥ ಮಾತನಾಡಿ ರೈತ ಮಹಿಳೆಯರಿಗೆ ನೀರು ಮತ್ತು ಮಣ್ಣನ್ನು ಸಂರಕ್ಷಿಸಬೇಕು. ನೀರು ಮಣ್ಣಿನ ಮಾಲಿನ್ಯದಿಂದಕೃಷಿಯಲ್ಲದೆ ಮಾನವರಿಗೂ ಸಹ ಅನೇಕ ತೊಂದರೆಗಳು ಉಂಟಾಗುತ್ತಿದ್ದು, ಮಹಿಳೆಯರು ಸಾವಯವ ಕೃಷಿ ಕೈಗೊಳ್ಳುವ ಮುಖಾಂತರ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಬೇಕೆಂದರು.
ಕೃಷಿ ವಿಶ್ವವಿದ್ಯಾಲಯ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥ ಡಾ.ರಾಘವೇಂದ್ರಎಲಿಗಾರ ಬಿಡುಗಡೆಯಾಗಿರುವ ತಾಂತ್ರಿಕತೆಗಳ ಬಗ್ಗೆ ಮಾಹಿತಿ ತಿಳಿಸಿದರು.
ವಿಜ್ಙಾನಿಗಳು (ಗೃಹ ವಿಜ್ಙಾನ) ಡಾ.ಕವಿತಾ ಉಳ್ಳಿಕಾಶಿ, ಎರಡನೇಕೃಷಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿಕೃಷಿಯಲ್ಲಿ ಸಾಧನೆಗೈದ ಕೃಷಿಮಹಿಳೆ, ಚಿಕ್ಕಜಂತಕಲ್‌ಇವರ ಮಹಾದೇವಮ್ಮರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಜ್ಯೋತಿ. ಆರ್ ವಿಜ್ಞಾನಿ (ತೋಟಗಾರಿಕೆ) ಹಾಗೂ ಶ್ರೀಮತಿ ರೇವತಿಆರ್.ಎಂ. ವಿಜ್ಞಾನಿಗಳು (ಸಸ್ಯರೋಗಶಾಸ್ತç) ಹಾಗೂ ಮರಳಿ ಮತ್ತುಕನಕಗಿರಿ ಭಾಗದರೈತ ಮಹಿಳೆಯರು ಉಪಸ್ಥಿತರಿದ್ದರು.
